ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರ ಬಂದಿದ್ದೇಕೆ? ಕಾರಣ ಬಿಚ್ಚಿಟ್ಟ ಭವಿಷ್‌

Updated on: Sep 30, 2025 | 1:53 PM

ಕಿರುತೆರೆಯಲ್ಲಿ ಪ್ರಸಾರವಾಗುವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು, ಇತ್ತೀಚಿಗಷ್ಟೆ ನಟ ಭವಿಷ್‌ ಲಕ್ಷ್ಮೀ ನಿವಾಸ ಸೀರಿಯಲ್‌ನ ವಿಶ್ವ ಪಾತ್ರದಿಂದ ಸಡನ್‌ ಆಗಿ ಹೊರ ಬಂದಿದ್ದರು. ಇದರ ಹಿಂದಿನ ಕಾರಣವೇನು ಎಂಬುದನ್ನು ಸ್ವತಃ ಭವಿಷ್‌ ಬಿಚ್ಚಿಟ್ಟಿದ್ದಾರೆ. ತಿಂಗಳಲ್ಲಿ ಮೂರು ದಿನ ಮಾತ್ರ ಶೂಟ್‌ ಇರ್ತಿತ್ತು. ಆ ಕಾರಣದಿಂದ ನಾನು ಸಿರಿಯಲ್ ಬಿಡಬೇಕಾಯಿತು ಎಂದಿದ್ದಾರೆ.

ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯಗೆದ್ದ ಪಾತ್ರಗಳು ಏಕಾಏಕಿ ಬದಲಾಗುತ್ತಿರುತ್ತವೆ. ಅದೇ ರೀತಿ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸ ಸಿರಿಯಲ್‌ನ ವಿಶ್ವ ಪಾತ್ರದಿಂದ ನಟ ಭವಿಷ್‌ ದಿಢೀರ್‌ ಅಂತ ಹೊರ ಬಂದಿದ್ದರು.  ಇದರ ಹಿಂದಿನ ಕಾರಣವನ್ನು ಸ್ವತಃ  ಭವಿಷ್‌ ಬಿಚ್ಚಿಟ್ಟಿದ್ದು, ಕೆಲವೊಂದು ಪರ್ಸನಲ್‌ ರೀಸನ್‌ಗಳು ಇರುತ್ತವೆ. ನಾನು ಹೊರ ಬಂದ ಕಾರಣವೇನೆಂದರೆ, ತಿಂಗಳಲ್ಲಿ ಎರಡು ಮೂರು ದಿನ ಮಾತ್ರ ಶೂಟ್‌ ಇರ್ತಿತ್ತು, ಬರೀ 3 ದಿನ ಕೆಲಸ ಮಾಡಿ ನಾನು ಏನು ಮಾಡ್ಲಿ, ಅದಕ್ಕಾಗಿ ನಾನು ಬೇರೆ ಪಾತ್ರಗಳನ್ನು ಹುಡುಕುತ್ತಿದೆ. ನನ್ನ ಜೀವನವನ್ನು ರೂಪಿಸುವ ಸಲುವಾಗಿ ಯೋಚನೆ ಮಾಡಿ ಆ ಸಿರಿಯಲ್‌ನಿಂದ ಹೊರ ಬಂದೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ