ಬೈಕ್​, ಕಾರು ಆಯ್ತು ಈಗ ಥೈಲ್ಯಾಂಡ್​ನಲ್ಲಿ ಯಾಚ್ ಡ್ರೈವ್ ಮಾಡಿದ ದರ್ಶನ್

Updated on: Jul 18, 2025 | 11:56 AM

ನಟ ದರ್ಶನ್ ಅವರು ಈಗ ಥೈಲ್ಯಾಂಡ್​ನಲ್ಲಿ ಇದ್ದಾರೆ. ಅವರು ಅಲ್ಲಿ ಮಸ್ತ್ ಮನರಂಜನೆ ಮಾಡುತ್ತಿದ್ದಾರೆ. ಅವರು ಯಾಚ್ ಓಡಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಆ ವಿಡಿಯೋ ನಿಮಗಾಗಿ ಇಲ್ಲಿದೆ. ಅವರು ಸಿನಿಮಾ ಶೂಟ್​ಗಾಗಿ ಅಲ್ಲಿಗೆ ತೆರಳಿದ್ದಾರೆ.

ದರ್ಶನ್ ಅವರು ‘ಡೆವಿಲ್’ ಸಿನಿಮಾದ  ಹಾಡಿನ ಶೂಟ್​ಗಾಗಿ ಥೈಲ್ಯಾಂಡ್​​ಗೆ ತೆರಳಿದ್ದಾರೆ. ಅಲ್ಲಿ ಅವರು ಶೂಟಿಂಗ್ ಮಧ್ಯೆ ಅವರು ಎಂಜಾಯ್​ಮೆಂಟ್ ಕೂಡ ಮಾಡುತ್ತಿದ್ದಾರೆ. ದರ್ಶನ್ (Darshan) ಅವರು ಯಾಚ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ದರ್ಶನ್ ಅವರಿಗೆ ಬೈಕ್ ಹಾಗೂ ಕಾರುಗಳ ಬಗ್ಗೆ ಸಖತ್ ಕ್ರೇಜ್ ಇದೆ. ಈಗ ಅವರು ಯಾಚ್ ಕೂಡ ರನ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.