AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan: ವಿದೇಶಿ ಬಾತುಕೋಳಿ ಕೇಸ್; ಸೆ.4ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

ಪ್ರಾಣಿ, ಪಕ್ಷಿಗಳ ಬಗ್ಗೆ ನಟ ದರ್ಶನ್ ತೂಗುದೀಪ ಅವರಿಗೆ ವಿಶೇಷ ಪ್ರೀತಿ ಇದೆ. ಆದರೆ ಅನುಮತಿ ಪಡೆಯದೆಯೇ ಅವರು ವಿದೇಶಿ ಬಾತುಕೋಳಿ ಸಾಕಿದ್ದರು. ಈ ಕೇಸ್​ಗೆ ಸಂಬಂಧಿಸಿದಂತೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಇಂದು (ಜುಲೈ 2) ದರ್ಶನ್ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು.

Darshan: ವಿದೇಶಿ ಬಾತುಕೋಳಿ ಕೇಸ್; ಸೆ.4ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ
Darshan Thoogudeepa
ರಾಮ್​, ಮೈಸೂರು
| Updated By: ಮದನ್​ ಕುಮಾರ್​|

Updated on: Jul 04, 2025 | 3:12 PM

Share

ನಟ ದರ್ಶನ್ ತೂಗುದೀಪ (Darshan Thoogudeepa) ಅವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ರೇಣುಕಾಸ್ವಾಮಿ ಕೊಲೆ ಆರೋಪದಿಂದ ಅವರು ಹಲವು ತಿಂಗಳು ಜೈಲಿನಲ್ಲಿ ಕಳೆಯುವಂತಾಗಿತು. ಅದಲ್ಲದೇ, ದರ್ಶನ್ (Darshan) ಅವರು ತಮ್ಮ ಫಾರ್ಮ್​ಹೌಸ್​ನಲ್ಲಿ ವಿದೇಶಿ ಬಾತುಕೋಳಿ (Bar Headed Goose) ಸಾಕಿದ್ದು ಕೂಡ ವಿವಾದಕ್ಕೆ ಕಾರಣ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಎಫ್​ಐಆರ್ ದಾಖಲು ಮಾಡಿತ್ತು. ಆ ಕೇಸ್ ವಿಚಾರಣೆಗೆ ಇಂದು (ಜುಲೈ 4) ಟಿ. ನರಸಿಪುರ ಕೋರ್ಟ್​ಗೆ ದರ್ಶನ್ ಹಾಜರಾಗಬೇಕಿತ್ತು. ಕೋರ್ಟ್​​ನಿಂದ ದರ್ಶನ್-ವಿಜಯಲಕ್ಷ್ಮೀ ದಂಪತಿಯ ವಿಚಾರಣೆ ಮುಂದೂಡಿಕೆ ಆಗಿದೆ.

ನ್ಯಾಯಾಲಯವು ಸೆಪ್ಟೆಂಬರ್​ 4ಕ್ಕೆ ವಿಚಾರಣೆ ಮುಂದೂಡಿದೆ. ಅರಣ್ಯ ಇಲಾಖೆ 2 ವರ್ಷದ ಹಿಂದೆ ನೋಟಿಸ್ ನೀಡಿ FIR ದಾಖಲಿಸಿತ್ತು. ವಿದೇಶಿ ಬಾತುಕೋಳಿ ಸಾಕಲು ಅನುಮತಿ ಪಡೆಯದ ಹಿನ್ನೆಲೆಯಲ್​ಲಿ ಎಫ್​ಐಆರ್ ಹಾಕಲಾಗಿತ್ತು. ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನ ಕೆಂಪಯ್ಯನಹುಂಡಿಯಲ್ಲಿ ಇರುವ ಫಾರ್ಮ್​ ಹೌಸ್​ನಲ್ಲಿ ದರ್ಶನ್ ಅವರು ಬಾರ್ ಹೆಡೆಡ್ ಗೂಸ್ ಬಾತುಕೋಳಿ ಸಾಕಿದ್ದರು.

ಈ ಬಗ್ಗೆ ಯುಟ್ಯೂಬ್ ಚಾನೆಲ್​ ಸಂದರ್ಶನದಲ್ಲಿ ದರ್ಶನ್ ಮಾಹಿತಿ ನೀಡಿದ್ದಾಗ ವಿಷಯ ಬಹಿರಂಗ ಆಗಿತ್ತು. ದರ್ಶನ್, ಪತ್ನಿ ವಿಜಯಲಕ್ಷ್ಮೀ ಸೇರಿ ಮೂವರಿಗೆ ಅರಣ್ಯ ಇಲಾಖೆಯವರು ನೋಟಿಸ್​ ನೀಡಿದ್ದರು. ತೋಟದ ಮ್ಯಾನೇಜರ್ ನಾಗರಾಜುಗೂ ನೋಟಿಸ್ ನೀಡಲಾಗಿತ್ತು. ದರ್ಶನ್ ಪರ ಸುನೀಲ್ ಕುಮಾರ್ ವಕೀಲರಾಗಿದ್ದಾರೆ. ಸುನೀಲ್​ ಪರವಾಗಿ ಹಿರಿಯ ವಕೀಲ ಬಸವಣ್ಣ ಕೋರ್ಟ್​ಗೆ ಹಾಜರಾಗಿದ್ದರು. ನ್ಯಾಯಾಲಯ ಈ ಕೇಸ್ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ.

ಇದನ್ನೂ ಓದಿ
Image
ದರ್ಶನ್ ದೇವಾಲಯ ಭೇಟಿಗೆ ಟ್ವಿಸ್ಟ್, ದರ್ಶನ್ ಜೊತೆಗಿದ್ದ ಮತ್ತೊಬ್ಬ ಆರೋಪಿ
Image
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
Image
ಅಭಿಮಾನಿಗಳು ಮಾಡಿದ ಸಮಾಜ ಸೇವೆಯ ಚಿತ್ರಗಳ ಹಂಚಿಕೊಂಡ ದರ್ಶನ್
Image
ಹಣ ವಾಪಸ್ ಕೊಡಿಸಿ: ನ್ಯಾಯಾಲಯದ ಮೊರೆ ಹೋದ ದರ್ಶನ್

ಇಂದು ದರ್ಶನ್ ಅವರು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆಷಾಡಮಾಸದ ಶುಕ್ರವಾರದಂದು ಅವರು ತಪ್ಪದೇ ಇಲ್ಲಿಗೆ ಬರುತ್ತಾರೆ. ಕಳೆದ ವರ್ಷ ಜೈಲಿನಲ್ಲಿದ್ದ ಕಾರಣಕ್ಕೆ ಭೇಟಿ ನೀಡಲಾಗಲಿಲ್ಲ. ಇಂದು 2ನೇ ಶುಕ್ರವಾರದಂದು ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೊತೆಗೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿದ್ದಾರೆ.

ಇದನ್ನೂ ಓದಿ: ಫಾರ್ಮ್​ ಹೌಸ್​ನಲ್ಲಿ ಪಕ್ಷಿಗಳ ಜೊತೆ ವಿಜಯಲಕ್ಷ್ಮಿ ದರ್ಶನ್ ಖುಷಿಯ ಕ್ಷಣ

ಚಾಮುಂಡೇಶ್ವರಿ ತಾಯಿಗೆ ಇಂದು ಲಕ್ಷ್ಮೀ ಅಲಂಕಾರ, ಬಳೆ, ಹೂವು, ತೋತಾಪುರಿ ಮಾವಿನ ಕಾಯಿಯಿಂದ ಅಲಂಕಾರ ಮಾಡಲಾಗಿತ್ತು. ದರ್ಶನ್ ಆಗಮಿಸಿದ ವೇಳೆ ಸಾಕಷ್ಟು ಅಭಿಮಾನಿಗಳು ಅವರನ್ನು ನೋಡಲು ಬಂದರು. ಇದರಿಂದಾಗಿ ದೇವಾಲಯದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಕೆಲಸಗಳು ಪ್ರಗತಿಯಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.