ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ನಟ ದರ್ಶನ್ ಅವರು ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲಿ ಇದ್ದಾರೆ. ಅವರು ‘ಡೆವಿಲ್’ ಚಿತ್ರದ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಿನಿಮಾದ ಶೂಟ್ ಮತ್ತೆ ಆರಂಭ ಆಗಿದೆ. ಇಂದು ಚಿತ್ರಕ್ಕೆ ಕೊನೆಯ ದಿನ.
‘ಡೆವಿಲ್’ ಸಿನಿಮಾ ಶೂಟ್ ಭರದಿಂದ ಸಾಗುತ್ತಿದೆ. ಮೈಸೂರಿನಲ್ಲಿ ಚಿತ್ರದ ಶೂಟ್ ನಡೆಯುತ್ತಿದೆ. ಮಾರ್ಚ್ 12ರಿಂದ ಶೂಟ್ ಆರಂಭ ಆಗಿದೆ. ಇಂದು (ಮಾರ್ಚ್ 15) ಮೈಸೂರಿನಲ್ಲಿ ಚಿತ್ರಕ್ಕೆ ಕೊನೆಯ ದಿನದ ಶೂಟ್. ಇದಾದ ಬಳಿಕ ಚಿತ್ರತಂಡ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಲಿದೆ ಎನ್ನಲಾಗಿದೆ. ದರ್ಶನ್ ಅವರಿಗೆ ತೀವ್ರವಾಗಿ ಬೆನ್ನು ನೋವು ಕಾಡುತ್ತಿದೆ. ಈ ಕಾರಣದಿಂದ ಕೇವಲ ಮಾತಿನ ದೃಶ್ಯದ ಶೂಟ್ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos