AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಅಪ್ಪಚ್ಚಿಯಾಗಿದ್ರೂ ಬದುಕುಳಿದು ಬಂದ: ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ

ಕಾರು ಅಪ್ಪಚ್ಚಿಯಾಗಿದ್ರೂ ಬದುಕುಳಿದು ಬಂದ: ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ

Sahadev Mane
| Updated By: ರಮೇಶ್ ಬಿ. ಜವಳಗೇರಾ

Updated on: Mar 15, 2025 | 1:39 PM

ಬೆಂಗಳೂರು-ಪುಣೆ ಹೈವೇನಲ್ಲಿ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಮುಗುಚಿ ಬಿದ್ದು, ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದರೂ ಸಹ ಒಳಗೆ ಇದ್ದ ಇಬ್ಬರು ಪವಾಡಸದೃಶ್ಯವಾಗಿ ಪಾರಾಗಿದ್ದಾರೆ. ಕಾರಿ ಸ್ಥಿತಿ ನೀಡಿದರೆ ಇಬ್ಬರೂ ಕಾರಿನ ಜೊತೆ ಅಪ್ಪಚ್ಚಿಯಾಗಬೇಕು. ಅದೃಷ್ಟವಶಾತ್​ ಆ ರೀತಿ ಏನು ಆಗಿಲ್ಲ. ಇನ್ನು ಬದುಕುಳಿದ ಪರಪ್ಪ ಅಪಘಾತದಲ್ಲಿ ಭೀಕರತೆ ಟಿವಿ9 ಮುಂದೆ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, (ಮಾರ್ಚ್​ 15): ಬೆಂಗಳೂರಿನ ನೆಲಮಂಗಲದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಭೀಕರ ಅಪಘಾತವನ್ನು ನೆನಪಿಸುವಂಥ ರೀತಿಯಲ್ಲಿ ಬೆಳಗಾವಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಉರುಳಿಬಿದ್ದಿದೆ. ಬೆಂಗಳೂರು-ಪುಣೆ ಹೈವೇನಲ್ಲಿ ಕಾಂಕ್ರಿಟ್‌ ಮಿಕ್ಸರ್‌ ಲಾರಿ ಮುಗುಚಿ ಬಿದ್ದು, ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದರೂ ಸಹ ಒಳಗೆ ಇದ್ದ ಇಬ್ಬರು ಪವಾಡಸದೃಶ್ಯವಾಗಿ ಪಾರಾಗಿದ್ದಾರೆ. ಕಾರಿ ಸ್ಥಿತಿ ನೀಡಿದರೆ ಇಬ್ಬರೂ ಕಾರಿನ ಜೊತೆ ಅಪ್ಪಚ್ಚಿಯಾಗಬೇಕು. ಅದೃಷ್ಟವಶಾತ್​ ಆ ರೀತಿ ಏನು ಆಗಿಲ್ಲ. ಇನ್ನು ಬದುಕುಳಿದ ಪರಪ್ಪ ಅಪಘಾತದಲ್ಲಿ ಭೀಕರತೆ ಟಿವಿ9 ಮುಂದೆ ಬಿಚ್ಚಿಟ್ಟಿದ್ದಾರೆ.

ಇನ್ನು ರಕ್ಷಣೆ  ಭೀಕರ ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದು ಬಂದ ಪರಪ್ಪ ಬಾಳೆಕಾಯಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ನಾನು ನನ್ನ ಸ್ನೇಹಿತ ಇಬ್ಬರು ರಾಮದುರ್ಗ ತಾಲೂಕಿನ ಬಾಗೋಜಿಕಪ್ಪದಿಂದ ಕಾರು ಸರ್ವಿಸ್ ಮಾಡಿಸಲು ಹೋಗುತ್ತಿದ್ವಿ. ಆಗ ನಮ್ಮ ಕಾರನ್ನು ಓವರ್ ಟೆಕ್ ಮಾಡಲು ಹೋಗಿ ಟ್ರಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ನಮ್ಮ ಕಾರಿನ ಮೇಲೆ ಕ್ಷಣಾರ್ಧದಲ್ಲಿ ಮುಗಿಚಿ ಬಿದ್ದಿದೆ ಎಂದು ಅಪಘಾತದ ಭೀಕರತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ನಾವು ಬದುಕುತ್ತೇವೆ ಅಂತಾ ಆಗ ಅಂದುಕೊಂಡಿರಲಿಲ್ಲ. ಉಸಿರಾಟಕ್ಕೂ ತೊಂದರೆ ಆಗ್ತಿತ್ತು, ಸ್ನೇಹಿತನಿಗೆ ಎನೂ ಆಗಲ್ಲಾ ಅಂತಾ ಹೇಳುತ್ತಿದ್ದೆ. ಸುಮಾರು ನಲವತ್ತು ಐವತ್ತು ನಿಮಿಷ ಕಾರಿನಲ್ಲೇ ಇದ್ದೆವು. ಲಾರಿ ಬೀಳುತ್ತಿದ್ದಂತೆಯೇ ಸ್ಲೋ ಆಗಿ ಕೆಳಗೆ ಇಳಿಯುತ್ತಿತ್ತು. ಪಾಸ್ಟ್ ಆಗಿ ಲಾರಿ ಕೆಳಗೆ ಇಳಿದಿದ್ರೇ ಬದುಕುತ್ತಿರಲಿಲ್ಲ. ಕ್ರೇನ್ ತಂದು ಮೇಲೆ ಎಬ್ಬಿಸಿ ಹೊರ ಬಂದಾಗ ಎರಡನೇ ಬಾರಿಗೆ ಬದುಕಿದ್ದೇವೆ ಅನ್ನಿಸಿತು ಎಂದು ಹೊರ ತೆಗೆದ ಅಗ್ನಿಶಾಮಕ, ಖಾಸಗಿ ಕಂಪನಿ ಕಾರ್ಮಿಕರು, ಪೊಲೀಸರಿಗೆ ಧನ್ಯವಾದ ತಿಳಿಸಿದರು.