ಡಿಎನ್​ಎ ಟೆಸ್ಟ್ ನಡೆದೇ ಇಲ್ಲ? ದರ್ಶನ್ ಪರ ವಕೀಲರು ಹೇಳಿದ್ದಿಷ್ಟು

Updated on: Jun 20, 2024 | 11:20 AM

ರೇಣುಕಾಸ್ವಾಮಿ ಕೊಲೆ ಆರೋಪಿಗಳ ಡಿಎನ್ಎ ಟೆಸ್ಟ್ ಮಾಡಿಸಲಾಗಿದೆ ಎಂದು ವರದಿ ಆಗಿತ್ತು. ಕೊಲೆ ನಡೆದ ಸ್ಥಳದಲ್ಲಿ ಸಿಕ್ಕ ಕೂದಲು, ರಕ್ತಕ್ಕೆ ಆರೋಪಿಗಳ ಸ್ಯಾಂಪಲ್ಸ್ ಮ್ಯಾಚ್ ಆಗಲಿದೆಯಾ ಎಂದು ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ದರ್ಶನ್ ಪರ ವಕೀಲರು ಮಾತನಾಡಿದ್ದಾರೆ.

ದರ್ಶನ್ (Darshan) ಅವರನ್ನು ಡಿಎನ್​ಎ ಟೆಸ್ಟ್ ಮಾಡಿಸಲು ಕರೆದುಕೊಂಡು ಹೋಗಿದ್ದಾರೆ ಎಂದು ವರದಿ ಆಗಿತ್ತು. ಈ ವಿಚಾರವನ್ನು ದರ್ಶನ್ ಪರ ವಕೀಲರು ತಳ್ಳಿ ಹಾಕಿದ್ದಾರೆ. ಇದು ಗುಟ್ಟಾಗಿ ನಡೆಯುವ ಪ್ರಕ್ರಿಯೆ ಎಂದಿದ್ದಾರೆ. ‘ನ್ಯಾಯಾಲಯಕ್ಕೆ ಪೊಲೀಸರು ಕೇಸ್ ಡೈರಿ ಸಲ್ಲಿಕೆ ಮಾಡುತ್ತಾರೆ. ಅದು ತನಿಖೆಯ ದಿನಚರಿ. ಆರೋಪಿಗಾಗಲೀ, ವಕೀಲರಿಗಾಗಲೀ ಅದನ್ನು ತೆಗೆದುಕೊಳ್ಳೋ ಹಕ್ಕು ಇರಲ್ಲ. ಡಿಎನ್​ಎ ಟೆಸ್ಟ್ ಮಾಡಿದ್ದಾರೋ ಅಥವಾ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ. ಚಾರ್ಜ್​ಶೀಟ್ ಸಲ್ಲಿಕೆ ಆದಮೇಲೆ ಮಾತ್ರ ಆ ಬಗ್ಗೆ ಗೊತ್ತಾಗೋದು. ಸರ್ವೋಚ್ಛ ನ್ಯಾಯಾಲಯ ಒಂದು ಆದೇಶ ಕೊಟ್ಟಿದೆ. ಇದರ ಪ್ರಕಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಮ್ಮತಿ ಪಡೆದೇ ಡಿಎನ್​ಎ ಟೆಸ್ಟ್ ಮಾಡಿಸಬೇಕು’ ಎಂದಿದ್ದಾರೆ ದರ್ಶನ್ ಪರ ವಕೀಲರು. ಆ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More