Loading video

ದರ್ಶನ್ ಸರ್ವನಾಶ ಆಗ್ತಾರೆ, ಯಾವ ಜನ್ಮದಲ್ಲೂ ಕರ್ಮ ಬಿಡಲ್ಲ; ರೇಣುಕಾ ಸ್ವಾಮಿ ತಾಯಿ ಶಾಪ

|

Updated on: Jun 12, 2024 | 2:22 PM

ಮನೆಗೆ ಆಧಾರವಾಗಿದ್ದ ಮಗನನ್ನು ಕ್ಷುಲ್ಲಕ ಕಾರಣಕ್ಕೆ ಕಳೆದುಕೊಂಡ ತಾಯಿ ರತ್ನಪ್ರಭಾ, ಮಗನ ಕೊಂದವರಿಗೆ ಶಾಪ ಹಾಕಿದ್ದಾರೆ. ಮಗ ಇನ್ನಿಲ್ಲವಾದ ನೋವಿನಲ್ಲಿಯೇ ಮಾಧ್ಯಮಗಳ ಮುಂದೆ ಮಾತನಾಡಿದ ರತ್ನಪ್ರಭಾ, ಕಣ್ಣೀರು ಹಾಕಿದ್ದಾರೆ. ಜೊತೆಗೆ ಅವರು ಹಾಕಿರೋ ಶಾಪ ದರ್ಶನ್​​ನ ಸರ್ವನಾಶ ಮಾಡುತ್ತದೆ ಎಂದಿದೆ.

ರೇಣುಕಾ ಸ್ವಾಮಿ (Renuka Swami) ಸಾವಿನಿಂದ ಅವರ ಕುಟುಂಬಕ್ಕೆ ಸಾಕಷ್ಟು ದುಃಖ ಉಂಟಾಗಿದೆ. ರೇಣುಕಾ ಸ್ವಾಮಿ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ. ರೇಣುಕಾ ಸ್ವಾಮಿ ಅವರ ತಾಯಿ ರತ್ನಪ್ರಭಾ ದರ್ಶನ್​ಗೆ ಹಿಡಿ ಶಾಪ ಹಾಕಿದ್ದಾರೆ. ‘ನನ್ನ ಮಗ ಯಾವಾಗಲೂ ಹೋಗುವಂತೆ ಹೋಗಿದ್ದ. ಅವನ ಕಿಡ್ನ್ಯಾಪ್ ಮಾಡಿದ್ದಾರೆ. ಮದುವೆ ಆದ ಬಳಿಕ ಮನೆ ಕೆಲಸದಲ್ಲೇ ತೊಡಗಿಕೊಳ್ಳುತ್ತಿದ್ದ. ಯಾವಾಗಲೂ ಅವನು ಡಿಸ್ಟರ್ಬ್ ಆದಂತೆ ಕಾಣುತ್ತಿರಲಿಲ್ಲ. ನಮಗೆ ಮಗನ ಬಗ್ಗೆ ಹೇಳಿದ್ರೆ ನಾವೇ ತಿದ್ದಿ ಹೇಳುತ್ತಿದ್ದೆವು. ಈ ರೀತಿ ಮಾಡೋದು ಸರಿ ಅಲ್ಲ ಎಂದು ಬುದ್ಧಿ ಹೇಳುತ್ತಿದ್ದೆವು. ಅವರಿ ವಾರ್ನ್ ಮಾಡಿದ್ರೆ ಬರ್ತಿತ್ತು. ತಲೆಗೆ ರಾಡ್ ಅಲ್ಲಿ ಹೊಡೆದಿದ್ದಾರೆ. ತೆಗೆದುಕೊಂಡು ಹೋಗಿ ಎಲ್ಲೋ ಎಸೆದಿದ್ದಾರೆ. ಈ ರೀತಿ ಕೃತ್ಯ ನಮ್ಮ ದೇಶದಲ್ಲಿ ನಡೆಯುತ್ತಾ ಎನ್ನುವ ಪ್ರಶ್ನೆ ಮೂಡುತ್ತದೆ. ನಮ್ಮ ಶಾಪ ಅವರಿಗೆ ತಟ್ಟೇ ತಟ್ಟುತ್ತದೆ. ಇದು ಕಟ್ಟಿಟ್ಟ ಬುತ್ತಿ. ಅವನ ಹೆಂಡ್ತಿ ಶಾಪ ಬಿಡಲ್ಲ. ಸರ್ವನಾಶ ಆಗೇ ಹೋಗೋದು’ ಎಂದು ರತ್ನಪ್ರಭಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.