ಅಭಿಮಾನಿ ಮೇಲೆ ಹಲ್ಲೆ ಆರೋಪ; ಈ ಪ್ರಕರಣದ ಹಿಂದೆ ಕುತಂತ್ರ ನಡೆದಿದೆ ಎಂದ ಧನ್ವೀರ್

Edited By:

Updated on: Feb 20, 2022 | 2:25 PM

ಬೆಂಗಳೂರಿನ ಎಸ್‌.ಸಿ. ರಸ್ತೆಯ ಅನುಪಮಾ ಥಿಯೇಟರ್ ಬಳಿ ಗುರುವಾರ (ಫೆಬ್ರವರಿ 17) ತಡರಾತ್ರಿ ಈ ಘಟನೆ ನಡೆದಿತ್ತು. ನಟ ಧನ್ವೀರ್ ವಿರುದ್ಧ ಚಂದ್ರಶೇಖರ್ ಎಂಬ ಯುವಕ ಥಳಿಸಿರುವ ಆರೋಪ ಮಾಡಿದ್ದರು.

ನಟ ಧನ್ವೀರ್ (Dhanveer) ನಟನೆಯ ‘ಬೈ ಟೂ ಲವ್​’ (By Two Love) ಸಿನಿಮಾ ಫೆ.18ರಂದು ತೆರೆಗೆ ಬಂದಿದೆ. ಇದಕ್ಕೂ ಮೊದಲೇ ಅವರು ವಿವಾದ ಮಾಡಿಕೊಂಡಿದ್ದರು. ಅಭಿಮಾನಿ ಮೇಲೆ ಅವರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಧನ್ವೀರ್​ ವಿರುದ್ಧ ಎಫ್​ಐಆರ್​ (FIR) ದಾಖಲು ಮಾಡಲಾಗಿತ್ತು. ಅವರ ಈ ನಡೆಗೆ ಅನೇಕರು ಆಕ್ರೋಶ ಹೊರಹಾಕಿದ್ದರು. ಈ ಪ್ರಕರಣದಲ್ಲಿ ನಿಜವಾಗಲೂ ನಡೆದಿದ್ದೇನು ಎನ್ನುವುದು ತನಿಖೆ ನಂತರ ತಿಳಿದು ಬರಲಿದೆ. ಈಗ ಪ್ರಕರಣದ ಬಗ್ಗೆ ನಟ ಧನ್ವೀರ್​ ಸ್ಪಷ್ಟನೆ ನೀಡಿದ್ದಾರೆ. ‘ಬೈ ಟೂ ಲವ್​’ ಸಿನಿಮಾ ಪ್ರಚಾರಕ್ಕಾಗಿ ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಅವರು, ಈ ಪ್ರಕರಣದ ಹಿಂದೆ ಒಂದು ದೊಡ್ಡ ಕುತಂತ್ರ ನಡೆದಿದೆ ಎಂದಿದ್ದಾರೆ​. ಈ ಬಗ್ಗೆ ಬೆಂಗಳೂರಿನಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಲಿದ್ದಾರೆ.

ಬೆಂಗಳೂರಿನ ಎಸ್‌.ಸಿ. ರಸ್ತೆಯ ಅನುಪಮಾ ಥಿಯೇಟರ್ ಬಳಿ ಗುರುವಾರ (ಫೆಬ್ರವರಿ 17) ತಡರಾತ್ರಿ ಈ ಘಟನೆ ನಡೆದಿತ್ತು. ನಟ ಧನ್ವೀರ್ ವಿರುದ್ಧ ಚಂದ್ರಶೇಖರ್ ಎಂಬ ಯುವಕ ಥಳಿಸಿರುವ ಆರೋಪ ಮಾಡಿದ್ದರು. ಸ್ನೇಹಿತನ ಜೊತೆ ಊಟ ಮುಗಿಸಿ ಚಂದ್ರಶೇಖರ್ ಮನೆಗೆ ತೆರಳುತ್ತಿದ್ದರು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕಂಡಾಗ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಂದಾಗುತ್ತಾರೆ. ಅದೇ ರೀತಿ ಧನ್ವೀರ್ ಕಂಡಾಗ ಫೋಟೋ ತೆಗೆಸಿಕೊಳ್ಳೋಕೆ ಚಂದ್ರಶೇಖರ್ ಮುಂದಾಗಿದ್ದಾರೆ. ಅಭಿಮಾನಿಯ ಬೇಡಿಕೆಗೆ ಧನ್ವೀರ್ ಸ್ಪಂದಿಸಲಿಲ್ಲ. ಇದು ಚಂದ್ರಶೇಖರ್​ಗೆ ಬೇಸರ ತರಿಸಿದೆ. ಆಗ ಚಂದ್ರಶೇಖರ್​ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಧನ್ವೀರ್ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ‘ಬೈ ಟೂ ಲವ್’ ತಂಡ; ಶ್ರೀಲೀಲಾ-ಧನ್ವೀರ್ ಮಸ್ತಿ

ಅಭಿಮಾನಿ ಮೇಲೆ ಹಲ್ಲೆ ಆರೋಪ; ನಟ ಧನ್ವೀರ್ ವಿರುದ್ಧ ದೂರು ದಾಖಲು  

Published on: Feb 20, 2022 02:23 PM
Loading...
Unable to load recommendations.
Follow Us
TV9 Web

TV9 Kannada

Read More