ಸ್ಟೂಡೆಂಟ್ಸ್ ಜೊತೆ ನಟ ಗಣೇಶ್​​ ‘ತ್ರಿಬಲ್ ರೈಡಿಂಗ್’: ಹೇಗಿದೆ ನೋಡಿ ಚಿತ್ರದ ವಿಭಿನ್ನ ಪ್ರಮೋಷನ್

| Updated By: ಗಂಗಾಧರ​ ಬ. ಸಾಬೋಜಿ

Updated on: Nov 21, 2022 | 7:00 AM

ಗೋಲ್ಡನ್​ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಚಿತ್ರ ಇನ್ನೇನು ರಿಲೀಸ್​ಗೆ ರೆಡಿಯಾಗಿದೆ. ಸದ್ಯ ಚಿತ್ರ ತಂಡ ಪ್ರಮೋಷನ್ ಕಾರ್ಯದಲ್ಲಿ ತೊಡಗಿದ್ದು, ಎಲ್ಲೆಡೆ ವಿಭಿನ್ನವಾಗಿ ಚಿತ್ರದ ಪ್ರಚಾರ ಮಾಡುತ್ತಿದೆ.

ಗೋಲ್ಡನ್​ ಸ್ಟಾರ್ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ (triple riding) ಚಿತ್ರ ಇನ್ನೇನು ರಿಲೀಸ್​ಗೆ ರೆಡಿಯಾಗಿದೆ. ಬುಧವಾರ (ನ. 16) ರಂದು  ಟ್ರೇಲರ್​ ಬಿಡುಗಡೆ ಮಾಡಲಾಯಿತು. ಟ್ರೇಲರ್​ಗೆ ಉತ್ತಮ ಸ್ಪಂದನೆ ದೊರೆತಿದೆ. ಸದ್ಯ ‘ತ್ರಿಬಲ್ ರೈಡಿಂಗ್’​ ಚಿತ್ರ ತಂಡ ಪ್ರಮೋಷನ್ ಕಾರ್ಯದಲ್ಲಿ ತೊಡಗಿದ್ದು, ಎಲ್ಲೆಡೆ ವಿಭಿನ್ನವಾಗಿ ಚಿತ್ರದ ಪ್ರಚಾರ ಮಾಡುತ್ತಿದೆ. ಸ್ಟೂಡೆಂಟ್ಸ್​ ಜೊತೆ ನಟ ಗಣೇಶ್​​ ತ್ರಿಬಲ್ ರೈಡಿಂಗ್​​ ಹೋಗುವ ಮೂಲಕ ನಗರದಲ್ಲಿ ವಿಭಿನ್ನವಾಗಿ ಪ್ರಮೋಷನ್ ಮಾಡಿದರು. ಇನ್ನು ಚಿತ್ರದಲ್ಲಿ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಹಾಗೂ ರಚನಾ ಇಂದರ್ ಅಭಿನಯಿಸಿದ್ದಾರೆ. ನ. 25ರಂದು ಚಿತ್ರ ತೆರೆಗೆ ಬರುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.