ಸರ್ಕಾರಿ ಶಾಲೆ ಬಗ್ಗೆ ಹೊಸದೊಂದು ಸಿನಿಮಾ ‘ಪ್ರವೀಣಾ’; ವಿಶೇಷ ಮನವಿ ಮಾಡಿದ ಮಂಡ್ಯ ರಮೇಶ್

| Updated By: ಮದನ್​ ಕುಮಾರ್​

Updated on: Apr 02, 2023 | 1:20 PM

‘ಪ್ರವೀಣಾ’ ಟ್ರೇಲರ್​ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಜಗದೀಶ್​ ಕೆ.ಆರ್​. ನಿರ್ಮಾಣದ ಈ ಸಿನಿಮಾಗೆ ಮಹೇಶ್​ ಸಿಂಧುವಳ್ಳಿ ನಿರ್ದೇಶನ ಮಾಡಿದ್ದಾರೆ.

ಈ ಹಿಂದೆ ‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಮತ್ತೆ ಸರ್ಕಾರಿ ಶಾಲೆಯ (Government School) ಕಥೆಯೊಂದನ್ನು ಇಟ್ಟುಕೊಂಡು ಕನ್ನಡದಲ್ಲಿ ಹೊಸ ಸಿನಿಮಾ ಮೂಡಿಬಂದಿದೆ. ಈ ಚಿತ್ರದ ಹೆಸರು ‘ಪ್ರವೀಣಾ’. ಇದರಲ್ಲಿ ಮಕ್ಕಳ ಜೊತೆ ಮಂಡ್ಯ ರಮೇಶ್​ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಏಪ್ರಿಲ್​ 7ರಂದು ಪ್ರವೀಣ ಸಿನಿಮಾ (Praveena Kannada Movie) ರಿಲೀಸ್​ ಆಗಲಿದೆ. ‘ಈ ತಂಡದ ಪ್ರಯತ್ನ ಪ್ರಾಮಾಣಿಕವಾಗಿದೆ. ಪ್ರೇಕ್ಷಕರು ಇಂಥ ಸಿನಿಮಾಗಳನ್ನು ಗೆಲ್ಲಿಸಬೇಕು’ ಎಂದು ಮಂಡ್ಯ ರಮೇಶ್​ (Mandya Ramesh) ಅವರು ಮನವಿ ಮಾಡಿಕೊಂಡಿದ್ದಾರೆ. ಜಗದೀಶ್​ ಕೆ.ಆರ್​. ನಿರ್ಮಾಣದ ಈ ಸಿನಿಮಾಗೆ ಮಹೇಶ್​ ಸಿಂಧುವಳ್ಳಿ ನಿರ್ದೇಶನ ಮಾಡಿದ್ದಾರೆ. ‘ಪ್ರವೀಣಾ’ ಟ್ರೇಲರ್​ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:20 pm, Sun, 2 April 23

Follow us on