ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
Aditi Prabhudeva: ನಟಿ ಅದಿತಿ ಪ್ರಭುದೇವ 'ಅಲೆಕ್ಸಾ' ಸಿನಿಮಾದಲ್ಲಿ ಫೈಟ್ಗಳನ್ನು ಸಹ ಮಾಡಿದ್ದಾರೆ. ಮೂರು ಫೈಟ್ ದೃಶ್ಯಗಳಲ್ಲಿ ಅದಿತಿ ಭಾಗವಹಿಸಿದ್ದು, ಡ್ಯೂಪ್ ಬಳಸದೇ ಫೈಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಸಿನಿಮಾಗಳಲ್ಲಿ ನಟಿಯರು ಫೈಟ್ಗಳನ್ನು ಮಾಡುವುದು ಅಪರೂಪ. ಇದೀಗ ‘ಅಲೆಕ್ಸಾ’ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ (Aditi Prabhudeva) ಫೈಟ್ ಮಾಡಿದ್ದಾರೆ, ಅದೂ ಡ್ಯೂಪ್ ಇಲ್ಲದೆ. ಫೈಟ್ ಮಾಡುವಾಗ ಗಾಯಗೊಂಡು ರಕ್ತ ಸಹ ಹರಿಸಿದ್ದಾರಂತೆ. ಸಿನಿಮಾ ಕುರಿತ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ಅದಿತಿ ಪ್ರಭುದೇವ, ತಾವು ಮಾಲಾಶ್ರೀ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ‘ಅಲೆಕ್ಸಾ’ ಸಿನಿಮಾನಲ್ಲಿ ಫೈಟ್ಗಳನ್ನು ಮಾಡಿದ್ದಾಗಿ ಹೇಳಿದ್ದಾರೆ. ಫೈಟ್ ದೃಶ್ಯಗಳನ್ನು ಚಿತ್ರೀಕರಿಸುವ ಅನುಭವ ಹೊಸದಾಗಿತ್ತು, ಸಹ ಫೈಟರ್ಗಳು, ನಟರು, ನಿರ್ದೇಶಕರು ಸಹಾಯ ಮಾಡಿದರು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ