ಕುಮಾರಸ್ವಾಮಿ ದೆಹಲಿಗೆ ಹೋಗಿದ್ದು ಮೈತ್ರಿ ವಿಚಾರ ಚರ್ಚಿಸಲೋ ಅಥವಾ ಕಾವೇರಿ ನದಿ ನೀರಿನ ಸಮಸ್ಯೆ ಬಗ್ಗೆ ಬಿಜೆಪಿ ನಾಯಕರ ಗಮನ ಸೆಳೆಯಲೋ?
ಮೈತ್ರಿ ಮಾತುಕತೆ ಏನಾಯ್ತು ಅಂತ ಪತ್ರಕರ್ತರು ಕೇಳಿದಾಗ, ಮೈತ್ರಿ ವಿಚಾರ ಹಾಗಿರಲಿ, ಮೊದಲು ಕಾವೇರಿ ನದಿ ನೀರಿನ ವಿಚಾರ ಕೇಳಿ ಅಂತ ಅವರು ಹೇಳುತ್ತಾರೆ. ಅವರ ಮಾತು ಕೇಳಿ ಪತ್ರಕರ್ತರಿಗೆ ಕುಮಾರಸ್ವಾಮಿ ಮೈತ್ರಿ ವಿಚಾರದ ಬದಲು ಕಾವೇರಿ ನೀರಿನ ವಿವಾದ ಚರ್ಚಿಸಲು ಬಂದಿದ್ದರೇ ಅಂತ ಅನುಮಾನ ಹುಟ್ಟಿದ್ದು ಸುಳ್ಳಲ್ಲ. ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನ ಜೊತೆ ಕುಮಾರಸ್ವಾಮಿ ಕಾವೇರಿ ವಿಚಾರ ಚರ್ಚಿಸುತ್ತಾರೆಯೇ?
ದೆಹಲಿ: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಸ್ತಿತ್ವ ಉಳಿಸಲು ಹೆಣಗಾಡುತ್ತಿರುವ ಪಕ್ಷದ ಅಗ್ರನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶದಿಂದ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ (JP Nadda) ಮತ್ತು ಅಮಿತ್ ಶಾ (Amit Shah) ಅವರೊಂದಿಗೆ ಮಾತುಕತೆ ನಡೆಸಲು ನಿನ್ನೆಯಿಂದಲೇ ದೆಹಲಿಯಲ್ಲಿ ಬಿಡಾರ ಹೂಡಿದ್ದರು. ಸಭೆ ಮುಗಿದ ಬಳಿಕ ಹೊರಗಡೆ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತಾಡುವಾಗ ಅವರ ವರಸೆ ಗಮನಿಸಿದರೆ, ಬಿಜೆಪಿ ನಾಯಕರೊಂದಿಗಿನ ಮಾತುಕತೆ ಅವರ ಅನುಕೂಲಕ್ಕೆ ತಕ್ಕಂತೆ ನಡೆದಿರಲಾರದು ಅಂತ ಅನುಮಾನ ಹುಟ್ಟುತ್ತದೆ. ಮೈತ್ರಿ ಮಾತುಕತೆ ಏನಾಯ್ತು ಅಂತ ಪತ್ರಕರ್ತರು ಕೇಳಿದಾಗ, ಮೈತ್ರಿ ವಿಚಾರ ಹಾಗಿರಲಿ, ಮೊದಲು ಕಾವೇರಿ ನದಿ ನೀರಿನ ವಿಚಾರ ಕೇಳಿ ಅಂತ ಅವರು ಹೇಳುತ್ತಾರೆ. ಅವರ ಮಾತು ಕೇಳಿ ಪತ್ರಕರ್ತರಿಗೆ ಕುಮಾರಸ್ವಾಮಿ ಮೈತ್ರಿ ವಿಚಾರದ ಬದಲು ಕಾವೇರಿ ನೀರಿನ ವಿವಾದ ಚರ್ಚಿಸಲು ಬಂದಿದ್ದರೇ ಅಂತ ಅನುಮಾನ ಹುಟ್ಟಿದ್ದು ಸುಳ್ಳಲ್ಲ. ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನ ಜೊತೆ ಕುಮಾರಸ್ವಾಮಿ ಕಾವೇರಿ ವಿಚಾರ ಚರ್ಚಿಸುತ್ತಾರೆಯೇ? ಅಷ್ಟಕ್ಕೂ ಸುದ್ದಿಗಾರರು ಕಾವೇರಿ ನೀರಿನ ವಿಚಾರವನ್ನೇ ಕೇಳಿದಾಗ, ಸಮಸ್ಯೆ ಬಗೆಹರಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದಾಗಿ ಕುಮಾರಸ್ವಾಮಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ