ನಾಲ್ಕು ದಶಕಗಳಿಂದ ಹೋರಾಡುತ್ತಾ ಬಂದು ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆ ಶಿವಕುಮಾರ್

ನೀವು ಕಾವೇರಿ ನೀರಿಗಾಗಿ ಹೋರಾಡುತ್ತಿದ್ದರೆ ನಿಮ್ಮ ಕೆಲ ಸಹೋದ್ಯೋಗಿಗಳು ಲೋಕಸಭಾ ಚುನಾವಣೆಗೆ ಮೊದಲು ರಾಜ್ಯದಲ್ಲಿ ಒಟ್ಟು 4 ಡಿಸಿಎಂಗಳನ್ನು ನೇಮಕ ಮಾಡಿಸಲು ಪಣತೊಟ್ಟಿದ್ದಾರಲ್ಲ ಅಂತ ಕೇಳಿದಾಗ, ಆಸೆ ಪಡೋರು ಪಟ್ಟುಕೊಳ್ಳಲಿ, ತನ್ನನ್ನು ಉಪ ಮುಖ್ಯಮಂತ್ರಿ ಮಾಡಿದ್ದು ಮುಖ್ಯಮಂತ್ರಿಯವರು, ಅವರಿಗೆ ಹೈಕಮಾಂಡ್ ನಿಂದ ನಿರ್ದೇಶನ ಇತ್ತು ಎಂದು ಶಿವಕುಮಾರ್ ಹೇಳಿದರು.

ನಾಲ್ಕು ದಶಕಗಳಿಂದ ಹೋರಾಡುತ್ತಾ ಬಂದು ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆ ಶಿವಕುಮಾರ್
|

Updated on: Sep 22, 2023 | 5:57 PM

ಬೆಂಗಳೂರು: ತಮಿಳುನಾಡು ಮತ್ತು ಕರ್ನಾಟಕ ಎರಡೂ ಸರ್ಕಾರಗಳನ್ನು ಕರೆಸಿ ಮಾತಾಡಿ ಅಂತ ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ಮನವಿ ಮಾಡಿದ್ದೇವೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಹಿಂದೆ ಮನ್ ಮೋಹನ್ ಸಿಂಗ್ (Manmohan Singh) ಪ್ರಧಾನ ಮಂತ್ರಿಗಳಾಗಿದ್ದಾಗ ಎರಡೂ ರಾಜ್ಯಗಳನ್ನು ಕರೆಸಿ ಮಾತಾಡಿದ ನಿದರ್ಶನವಿದೆ ಎಂದು ಅವರು ಹೇಳಿದರು. ನೀವು ಕಾವೇರಿ ನೀರಿಗಾಗಿ ಹೋರಾಡುತ್ತಿದ್ದರೆ ನಿಮ್ಮ ಕೆಲ ಸಹೋದ್ಯೋಗಿಗಳು ಲೋಕಸಭಾ ಚುನಾವಣೆಗೆ ಮೊದಲು ರಾಜ್ಯದಲ್ಲಿ ಒಟ್ಟು 4 ಡಿಸಿಎಂಗಳನ್ನು ನೇಮಕ ಮಾಡಿಸಲು ಪಣತೊಟ್ಟಿದ್ದಾರಲ್ಲ ಅಂತ ಕೇಳಿದಾಗ, ಆಸೆ ಪಡೋರು ಪಟ್ಟುಕೊಳ್ಳಲಿ, ತನ್ನನ್ನು ಉಪ ಮುಖ್ಯಮಂತ್ರಿ ಮಾಡಿದ್ದು ಮುಖ್ಯಮಂತ್ರಿಯವರು, ಅವರಿಗೆ ಹೈಕಮಾಂಡ್ ನಿಂದ ನಿರ್ದೇಶನ ಇತ್ತು ಅಂತ ಸೋತಧ್ವನಿಯಲ್ಲಿ ಮಾತಾಡಿದಾಗ, ಮೆತ್ತಗಾದ್ರಾ ಸರ್? ಅಂತ ಪತ್ರಕರ್ತರು ಕೇಳಿದರು. ಆಗ ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಮಾತಾಡಿದ ಶಿವಕಮಾರ್, ನಾನು ಮೆತ್ತಗಾಗ್ತೀನೋ, ಆಗೋದಿಲ್ವೋ ಅಂತ ಅವರಿಗೆ ಗೊತ್ತು ಮತ್ತು ವಿರೋಧ ಪಕ್ಷಗಳಿಗೂ ಗೊತ್ತು. 1985ರಿಂದ ನನ್ನ ರಾಜಕೀಯ ಟ್ರ್ಯಾಕ್ ರೆಕಾರ್ಡ್ ಗಮನಿಸಿ, ಅಲ್ಲಿಂದ ಹೋರಾಡುತ್ತಾ ಬಂದು  ಈಗ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us