ಕೆಎನ್ ರಾಜಣ್ಣ ಹೈಕಮಾಂಡ್ ಗೆ ಪತ್ರ ಬರೆಯಲಿರುವ ಬಗ್ಗೆ ಅವರನ್ನೇ ಇಲ್ಲ ಸಿದ್ದರಾಮಯ್ಯರನ್ನು ಕೇಳಬೇಕು: ಡಿಕೆ ಶಿವಕುಮಾರ್, ಡಿಸಿಎಂ
ರಾಜ್ಯಪಾಲರ ಅನುಮೋದನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನನ್ನು ಡಿಸಿಎಂ ಮಾಡಿದ್ದಾರೆ ಎದು ಹೇಳಿದ ಅವರು ರಾಜಣ್ಣ ಹೈಕಮಾಂಡ್ ಬಗೆ ಪತ್ರ ಬರೆಯುವ ಬಗ್ಗೆ ಗೊತ್ತಿಲ್ಲ, ಇಂಥ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿಯವರನ್ನೇ ಕೇಳಬೇಕು ಅಂತ ಶಿವಕುಮಾರ್ ಹೇಳಿದರು.
ಬೆಂಗಳೂರು: ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಮೂರು ಉಪ ಮುಖ್ಯಮಂತ್ರಿಗಳು ಬೇಕು ಅಂತ ಹೇಳಿದ್ದು ಸಿದ್ದರಾಮಯ್ಯ ಸರ್ಕಾರಕ್ಕೆ (Siddaramaiah Government) ಇರುಸು ಮುರುಸು ಉಂಟು ಮಾಡಿದೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ (DK Shivakumar) ರಾಜಣ್ಣ ಹೇಳಿರುವುದನ್ನು ಜ್ಞಾಪಿಸಿದಾಗ, ಪ್ರಶ್ನೆಯನ್ನು ಅವರಿಗೆ ಕೇಳುವುದೇ ಒಳಿತು ಎಂದರು. ರಾಜ್ಯಪಾಲರ ಅನುಮೋದನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನನ್ನು ಡಿಸಿಎಂ ಮಾಡಿದ್ದಾರೆ ಎದು ಹೇಳಿದ ಅವರು ರಾಜಣ್ಣ ಹೈಕಮಾಂಡ್ ಬಗೆ ಪತ್ರ ಬರೆಯುವ ಬಗ್ಗೆ ಗೊತ್ತಿಲ್ಲ, ರವಿವಾರದಂದು ತೆಲಂಗಾಣ ಕಾಂಗ್ರೆಸ್ ಸಮಿತಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯಯ್ಯ, ಹರಿಪ್ರಸಾದ್, ಸುರೇಶ್ ಮತ್ತು ಕೆಜೆ ಜಾರ್ಜ್ ಜೊತೆ ತಾನು ಹೈದರಾಬಾದ್ ಗೆ ಹೋಗಿದ್ದೆ, ಇಂದು ಬೆಳಗ್ಗೆ ವಾಪಸ್ಸು ಬಂದಾಗಲೇ ರಾಜಣ್ಣ ಪತ್ರ ಬರೆಯಲಿರುವ ಸಂಗತಿ ಗೊತ್ತಾಗಿದ್ದು ಎಂದರು. ತಾವೆಲ್ಲ ಮುಖ್ಯಮಂತ್ರಿಗಳ ಆಧೀನದಲ್ಲಿ ಕೆಲಸ ಮಾಡುವವರು, ಇಂಥ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿಯವರನ್ನೇ ಕೇಳಬೇಕು ಅಂತ ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ