Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಫೋನ್ ಮಾಡುವ ಮೊದಲೇ ಚಕ್ರವರ್ತಿ ಸೂಲಿಬೆಲೆಗೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಗೊತ್ತಾಗಿತ್ತು: ರಾಜಶೇಖರಾನಂದ ಸ್ವಾಮೀಜಿ

ನಾನು ಫೋನ್ ಮಾಡುವ ಮೊದಲೇ ಚಕ್ರವರ್ತಿ ಸೂಲಿಬೆಲೆಗೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಗೊತ್ತಾಗಿತ್ತು: ರಾಜಶೇಖರಾನಂದ ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 18, 2023 | 3:01 PM

ಹಾಲಾಶ್ರೀ ಸ್ವಾಮಿ ಯುವ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಕಾರಣ ಅದರ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಅವರಿಗೆ ಫೋನ್ ಮಾಡಿದಾಗ ಅವರಿಗೆ ಅದಾಗಲೇ ವಿಷಯ ಗೊತ್ತಾಗಿತ್ತು ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳುತ್ತಾರೆ. ಚೈತ್ರಾ ತನಗೆ ಚೆನ್ನಾಗಿ ಗೊತ್ತು ಅಂತ ಹೇಳುವ ಸ್ವಾಮೀಜಿ ಆಕೆ ಬರೆದ ಲವ್ ಜಿಹಾದ್ ಪುಸ್ಕಕಕ್ಕೆ ತಾವೇ ಬೆನ್ನುಡಿ ಬರೆದಿದ್ದು ಅನ್ನುತ್ತಾರೆ.

ಮಂಗಳೂರು: ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಗೆ ಬರೆದಿರುವ ಪತ್ರದಲ್ಲಿ ವಜ್ರದೇಹಿ ಮಠದ ಶ್ರೀಗಳಾಗಿರುವ ರಾಜಶೇಖರಾನಂದ ಸ್ವಾಮೀಜಿ (Rajashekharananda Swamiji) ಅವರ ಹೆಸರರು ಕೂಡ ಪ್ರಸ್ತಾಪವಾಗಿದೆ. ಇದೇ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ವಾಹಿನಿಯ ಮಂಗಳೂರು ವರದಿಗಾರನೊಂದಿಗೆ ಮಾತಾಡಿರುವ ಸ್ವಾಮೀಜಿ ತಮ್ಮ ಹೆಸರು ಉಲ್ಲೇಖ ಅಗಿರುವುದಕ್ಕೆ ಕಾರಣ ತಿಳಿಸುತ್ತಾರೆ. ಅಸಲಿಗೆ ಹಿಂದೂ ಜಾಗರಣಾ ವೇದಿಕೆಯ ರಾಷ್ಟ್ರಿಯ ನಾಯಕರಾಗಿದ್ದ ಸತ್ಯಜಿತ್ ಸುರತ್ಕಲ್ (Satyajit Suratkal) ಎನ್ನುವವರು ತಪ್ಪು ಗ್ರಹಿಕೆಯಿಂದಾಗಿ, ರಾಜಶೇಖರಾನಂದ ಸ್ವಾಮೀಜಿ ಅವರೇ ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ರೂ. 1.5 ಕೋಟಿ ಪಡೆದಿದ್ದು ಅದನ್ನು ಕೂಡಲೇ ಹಿಂತಿರುಗಿಸುವಂತೆ ಫೋನ್ ಮಾಡಿದ್ದರಂತೆ. ಆರೋಪ ಕೇಳಿ ಕೋಪೋದ್ರಿಕ್ತರಾದ ಸ್ವಾಮೀಜಿ, ಸುರತ್ಕಲ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರಂತೆ. ನಂತರ ಸುರತ್ಕಲ್ ಅವರಿಗೆ ವಾಸ್ತವಾಂಶ ಗೊತ್ತಾಗಿ, ಹಣ ಸಂದಾಯವಾಗಿರೋದು ಅಭಿನವ ಹಾಲಾಶ್ರೀ ಸ್ವಾಮಿಗೆ (Abhinava Halashri Swamy) ಅಂತ ಹೇಳಿದರಂತೆ. ಆಗಲೂ ರಾಜಶೇಖರಾನಂದ ಸ್ವಾಮೀಜಿ ಅವರು ಸುರತ್ಕಲ್ ಮೇಲೆ ಕೆಂಡ ಕಾರಿದರಂತೆ. ಹಾಲಾಶ್ರೀ ಸ್ವಾಮಿ ಯುವ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಕಾರಣ ಅದರ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಅವರಿಗೆ ಫೋನ್ ಮಾಡಿದಾಗ ಅವರಿಗೆ ಅದಾಗಲೇ ವಿಷಯ ಗೊತ್ತಾಗಿತ್ತು ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳುತ್ತಾರೆ. ಚೈತ್ರಾ ತನಗೆ ಚೆನ್ನಾಗಿ ಗೊತ್ತು ಅಂತ ಹೇಳುವ ಸ್ವಾಮೀಜಿ ಆಕೆ ಬರೆದ ಲವ್ ಜಿಹಾದ್ ಪುಸ್ಕಕಕ್ಕೆ ತಾವೇ ಬೆನ್ನುಡಿ ಬರೆದಿದ್ದು ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ