ಸತತ 23 ಗಂಟೆ ಕಾಲ ಸ್ಯಾಕ್ಸೋಫೋನ್​​ ನುಡಿಸಿ ಗಿನ್ನಿಸ್ ದಾಖಲೆ ಮಾಡಿದ ಗರ್ಭಿಣಿ

ಸತತ 23 ಗಂಟೆ ಕಾಲ ಸ್ಯಾಕ್ಸೋಫೋನ್​​ ನುಡಿಸಿ ಗಿನ್ನಿಸ್ ದಾಖಲೆ ಮಾಡಿದ ಗರ್ಭಿಣಿ

ನವೀನ್ ಕುಮಾರ್ ಟಿ
| Updated By: ವಿವೇಕ ಬಿರಾದಾರ

Updated on: Sep 18, 2023 | 1:07 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಆವಲಹಳ್ಳಿ ಗ್ರಾಮದ 7 ತಿಂಗಳ ಗರ್ಭಿಣಿ ಸತತ 23 ಗಂಟೆಗಳ ಕಾಲ ಸ್ಯಾಕ್ಸೋಫೋನ್​ ನುಡಿಸಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ.

ದೇವನಹಳ್ಳಿ ಸೆ.18: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಹೊಸಕೋಟೆ (Hoskate) ಬಳಿಯ ಆವಲಹಳ್ಳಿ ಗ್ರಾಮದ 7 ತಿಂಗಳ ಗರ್ಭಿಣಿ ಸತತ 23 ಗಂಟೆಗಳ ಕಾಲ ಸ್ಯಾಕ್ಸೋಫೋನ್ (Saxophone) ನುಡಿಸಿ ಗಿನ್ನಿಸ್ ರೆಕಾರ್ಡ್ (Guinness record) ಮಾಡಿದ್ದಾರೆ. ಆವಲಹಳ್ಳಿಯ ಕಲಾವಿದೆ ಸುಬ್ಬಲಕ್ಷ್ಮೀ ಅವರು ಕಳೆದ 13 ವರ್ಷದಿಂದ ಸ್ಯಾಕ್ಸೋಪೋನ್ ನುಡಿಸುತ್ತಿದ್ದಾರೆ. ಕನ್ನಡ, ತೆಲುಗು, ಇಂಗ್ಲೀಷ್ ಹಿಂದಿ ಭಾಷೆಗಳ ಗೀತೆಗಳನ್ನು ಸುಲಲಿತವಾಗಿ ಸ್ಯಾಕ್ಸೋಪೋನ್​​ನಲ್ಲಿ ನಡಿಸುತ್ತಿದ್ದಾರೆ. ಸದ್ಯ ಸುಬ್ಬಲಕ್ಷ್ಮೀ ಏಳು ತಿಂಗಳು ಗರ್ಭಿಣಿ ಇದ್ದು, ಇವರು ರವಿವಾರ ದಿನಪೂರ್ತಿ ಬ್ರೆಕ್ ಇಲ್ಲದೆ 23 ಗಂಟೆಗಳ ಕಾಲ ಸ್ಯಾಕ್ಸೋಪೋನ್​ ನುಡಿಸುವ ಮೂಲಕ ಈವರೆಗೂ ಯಾರು ಮಾಡದ ಸಾಧನೆ ಮಾಡಿ ದಾಖಲೆ‌ ನಿರ್ಮಿಸಿದ್ದಾರೆ. ಇವರ ಸಾಧನೆ ವರ್ಲ್ಡ್ ಗಿನ್ನಿಸ್ ರೆಕಾರ್ಡ್ ಬುಕ್​ನಲ್ಲಿ ದಾಖಲಾಗಿದೆ. ಮಹಿಳೆಯ ಸಾಧನೆಗೆ ಗಣ್ಯರು, ಸ್ಥಳಿಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಿನ್ನಿಸ್‌ ರೆಕಾರ್ಡ್ ಮೂಲಕ ನಾಡು, ದೇಶಕ್ಕೆ ಕೀರ್ತಿ ತಂದಿದ್ದಾರೆ.