ಕಾವೇರಿ ವಿವಾದ: ನಟಿ ಅದಿತಿ ಪ್ರಭುದೇವ್ ಹೇಳಿದ್ದು ಹೀಗೆ

Updated on: Sep 21, 2023 | 11:09 PM

Aditi Prabhudeva: ಕಾವೇರಿ ಹೋರಾಟಕ್ಕೆ ಚಿತ್ರರಂಗ ಬೆಂಬಲ ಸೂಚಿಸಿದೆ. ನಟಿ ಅದಿತಿ ಪ್ರಭುದೇವ ಸಹ ಧ್ವನಿಗೂಡಿಸಿದ್ದು, ''ನಾವೇ ಹೊಟ್ಟೆ ಹಸಿವಲ್ಲಿ ಇದ್ದೀವಿ, ಬೇರೆಯವರಿಗೆ ದಾನ ಧರ್ಮ ಮಾಡು ಅಂದ್ರೆ ಹೇಗೆ? ಎಂದಿದ್ದಾರೆ.

ಕಾವೇರಿ (Cauvery) ವಿವಾದ ಮತ್ತೆ ಭುಗಿಲೆದ್ದಿದೆ, ಸುಪ್ರೀಂಕೋರ್ಟ್ ಆದೇಶದಂತೆ ನೀರು ಹರಿಸುವಂತೆ ತಮಿಳುನಾಡು ಒತ್ತಾಯಿಸುತ್ತಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಇನ್ನಷ್ಟೆ ಬರಬೇಕಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ಆರಂಭವಾಗಿದ್ದು, ಚಿತ್ರರಂಗವೂ ಸಹ ಒಕ್ಕೂರಲಿನಿಂದ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ನಟಿ ಅದಿತಿ ಪ್ರಭುದೇವ ಸಹ ಧ್ವನಿಗೂಡಿಸಿದ್ದು, ”ನಾವೇ ಹೊಟ್ಟೆ ಹಸಿವಲ್ಲಿ ಇದ್ದೀವಿ, ಬೇರೆಯವರಿಗೆ ದಾನ ಧರ್ಮ ಮಾಡು ಅಂದ್ರೆ ಹೇಗೆ?, ಮೊದಲೇ ಮಳೆ ಇಲ್ಲ ರೈತರು ಸಂಕಷ್ಟದಲ್ಲಿದ್ದಾರೆ, ನಮಗೆ ಹೊಟ್ಟೆ ತುಂಬುವಂತೆ ಕೊಡಿ ಅಂತಿಲ್ಲ” ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us