Puneeth Rajkumar: ‘ಅಪ್ಪು ಇಲ್ಲದೇ ಒಂದು ವರ್ಷ ಆಯ್ತು ಅಂತ ನಂಬೋಕೆ ಆಗ್ತಿಲ್ಲ’; ಪುನೀತ್​ ಸಮಾಧಿಗೆ ನಮಿಸಿದ ಮಾಲಾಶ್ರೀ

| Updated By: ಮದನ್​ ಕುಮಾರ್​

Updated on: Oct 28, 2022 | 1:34 PM

Puneeth Rajkumar Death Anniversary: ‘ಗಂಧದ ಗುಡಿ ದೊಡ್ಡ ಯಶಸ್ಸು ಕಂಡಿದೆ ಎಂಬುದನ್ನು ಕೇಳಿ ಖುಷಿ ಆಯಿತು. ಇದು ಪುನೀತ್​ ಅವರ ಕೊನೇ ಚಿತ್ರ ಅಂತ ಹೇಳೋಕೆ ಕಷ್ಟ ಆಗುತ್ತೆ’ ಎಂದು ಮಾಲಾಶ್ರೀ ಹೇಳಿದ್ದಾರೆ.

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ನಿಧನರಾಗಿ ಒಂದು ವರ್ಷ ಕಳೆದಿದೆ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ಅಪ್ಪು ನೆನಪು ಕಾಡುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಹೊಸ್ತಿಲಿನಲ್ಲಿ ನಟಿ ಮಾಲಾಶ್ರೀ ಅವರು ಅಪ್ಪು ಸಮಾಧಿಗೆ (Puneeth Rajkumar Samadhi) ಭೇಟಿ ನೀಡಿ ನಮಿಸಿದ್ದಾರೆ. ‘ಗಂಧದ ಗುಡಿ ದೊಡ್ಡ ಯಶಸ್ಸು ಕಂಡಿದೆ ಎಂಬುದನ್ನು ಕೇಳಿ ಖುಷಿ ಆಯಿತು. ಅವರ ಕೊನೆಯ ಚಿತ್ರ ಅಂತ ಹೇಳೋಕೆ ಕಷ್ಟ ಆಗುತ್ತೆ. ಅವರು ಇಲ್ಲದೇ ಒಂದು ವರ್ಷ ಆಯ್ತು ಅನ್ನೋದನ್ನು ನಂಬೋಕೆ ಆಗ್ತಿಲ್ಲ’ ಎಂದು ಮಾಲಾಶ್ರೀ (Malashree) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Oct 28, 2022 01:34 PM