AFG vs SL, ICC World Cup: ಸ್ಟೇಡಿಯಂನಲ್ಲಿ ಸಪೋರ್ಟ್ ಮಾಡಿದ ಭಾರತೀಯ ಫ್ಯಾನ್ಸ್ಗೆ ಅಫ್ಘಾನ್ ನಾಯಕ ಹೇಳಿದ್ದೇನು ನೋಡಿ
Afghanistan vs Sri Lanka, ICC World Cup: ಪುಣೆಯಲ್ಲಿ ಅಫ್ಘಾನ್ ತಂಡಕ್ಕೆ ಭಾರೀ ಬೆಂಬಲ ಸಿಕ್ಕಿತು. ಇದನ್ನು ಮರೆಯದ ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ, ಸ್ಟೇಡಿಯಂನಲ್ಲಿ ನಮಗೆ ಸಪೋರ್ಟ್ ಮಾಡಿದ ಎಲ್ಲ ಭಾರತೀಯ ಫ್ಯಾನ್ಸ್ಗೆ ಥ್ಯಾಂಕ್ಸ್ ಎಂದು ಹೇಳಿದ್ದಾರೆ. ಅಲ್ಲದೆ ಪಂದ್ಯ ಮುಗಿದ ಬಳಿಕ ಎಲ್ಲ ಅಫ್ಘಾನ್ ಆಟಗಾರರು ಸ್ಟೇಡಿಯಂಗೆ ಸುತ್ತುಬಂದು ಧನ್ಯವಾದ ತಿಳಿಸಿದ್ದಾರೆ.
ಪುಣೆಯಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಅಫ್ಘಾನಿಸ್ತಾನ (Afghanistan Cricket Team) ತಂಡ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅವರು ಅಜೇಯ 111 ರನ್ ಜೊತೆಯಾಟ ನಡೆಸಿ 242 ರನ್ ಗುರಿಯನ್ನು ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಬೆನ್ನಟ್ಟಿದರು. ಇದರೊಂದಿಗೆ, ವಿಶ್ವಕಪ್ 2023 ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರು ಪಂದ್ಯಗಳು ಬಾಕಿ ಇರುವಂತೆಯೇ ಅಫ್ಘಾನಿಸ್ತಾನ 6 ಅಂಕಗಳೊಂದಿಗೆ 5 ನೇ ಸ್ಥಾನಕ್ಕೆ ಜಿಗಿದಿದೆ. ಪುಣೆಯಲ್ಲಿ ಅಫ್ಘಾನ್ ತಂಡಕ್ಕೆ ಭಾರೀ ಬೆಂಬಲ ಸಿಕ್ಕಿತು. ಇದನ್ನು ಮರೆಯದ ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ, ಸ್ಟೇಡಿಯಂನಲ್ಲಿ ನಮಗೆ ಸಪೋರ್ಟ್ ಮಾಡಿದ ಎಲ್ಲ ಭಾರತೀಯ ಫ್ಯಾನ್ಸ್ಗೆ ಥ್ಯಾಂಕ್ಸ್ ಎಂದು ಹೇಳಿದ್ದಾರೆ. ಅಲ್ಲದೆ ಪಂದ್ಯ ಮುಗಿದ ಬಳಿಕ ಎಲ್ಲ ಅಫ್ಘಾನ್ ಆಟಗಾರರು ಸ್ಟೇಡಿಯಂಗೆ ಸುತ್ತುಬಂದು ಧನ್ಯವಾದ ತಿಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ