ಚೆಪಾಕ್ ಅಭಿಮಾನಿಗಳಿಗೆ ತಲೆಬಾಗಿದ ಅಫ್ಘಾನ್ ಆಟಗಾರರು: ಐತಿಹಾಸಿಕ ಜಯದ ಬಳಿಕ ಏನು ಮಾಡಿದ್ರು ನೋಡಿ

ಚೆಪಾಕ್ ಅಭಿಮಾನಿಗಳಿಗೆ ತಲೆಬಾಗಿದ ಅಫ್ಘಾನ್ ಆಟಗಾರರು: ಐತಿಹಾಸಿಕ ಜಯದ ಬಳಿಕ ಏನು ಮಾಡಿದ್ರು ನೋಡಿ

Vinay Bhat
|

Updated on: Oct 24, 2023 | 8:06 AM

Pakistan vs Afghanistan, ICC ODI World Cup 2023: ಬಾಬರ್ ಪಡೆಗೆ ಮಣ್ಣು ಮುಕ್ಕಿಸಿ ಐತಿಹಾಸಿಕ ಗೆಲುವು ಕಂಡು ಅಫ್ಘಾನ್ ಪಂದ್ಯ ಮುಗಿದ ಬಳಿಕ ಸಪೋರ್ಟ್ ಮಾಡಿದ ಅಭಿಮಾನಿಗಳನ್ನು ಮರೆಯಲಿಲ್ಲ. ಅಫ್ಘಾನಿಸ್ತಾನದ ಆಟಗಾರರು ಧ್ವಜವನ್ನು ಧರಿಸಿ ಚೆಪಾಕ್ ಮೈದಾನಕ್ಕೆ ಸುತ್ತು ಬಂದು ನೆರೆದಿದ್ದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

ಅಫ್ಘಾನಿಸ್ತಾನದ (Afghanistan) ಆಟಗಾರರು ಭಾರತವನ್ನು ತಮ್ಮ ಎರಡನೇ ತವರು ಎಂದು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಯಾಕೆಂದರೆ ಭಾರತೀಯ ಅಭಿಮಾನಿಗಳು ಅಫ್ಘಾನಿಸ್ತಾನ ತಂಡಕ್ಕೆ ಅಷ್ಟೊಂದು ಬೆಂಬಲ ನೀಡುತ್ತಾರೆ. ಇದು ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಸೋಮವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ನಡೆಯಿತು. ತಮ್ಮನ್ನು ಹುರುದುಂಬಿಸಿ ಬಾಬರ್ ಪಡೆಗೆ ಮಣ್ಣು ಮುಕ್ಕಿಸಿ ಐತಿಹಾಸಿಕ ಗೆಲುವು ಕಾಣಲು ನೆರವಾದ ಅಭಿಮಾನಿಗಳನ್ನು ಅಫ್ಘಾನಿಸ್ತಾನ ಮರೆಯಲಿಲ್ಲ. ರಶೀದ್ ಖಾನ್, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಮತ್ತು ಗುರ್ಬಾಜ್ ಅವರಂತಹ ಆಟಗಾರರು ಅಫ್ಘಾನ್ ಧ್ವಜವನ್ನು ಧರಿಸಿ ಚೆಪಾಕ್ ಮೈದಾನಕ್ಕೆ ಸುತ್ತು ಬಂದು ನೆರೆದಿದ್ದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಅಫ್ಘಾನ್​ನ ಎಲ್ಲ ಆಟಗಾರರು ಚಪ್ಪಾಳೆ ತಟ್ಟಿ, ಕೃತಜ್ಞತೆ ಸಲ್ಲಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ