PAK vs AFG ICC World Cup 2023: ಪಾಕ್ ಪಡೆಗೆ ಸೋಲುಣಿಸಿದ ಅಫ್ಘಾನಿಸ್ತಾನ್

TV9 Web
| Updated By: ಝಾಹಿರ್ ಯೂಸುಫ್

Updated on:Oct 23, 2023 | 10:11 PM

Afghanistan vs Pakistan: ಏಕದಿನ ಕ್ರಿಕೆಟ್​ನಲ್ಲಿ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ ತಂಡಗಳು 8 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 7 ಬಾರಿ ಪಾಕಿಸ್ತಾನ್ ತಂಡ ಜಯ ಸಾಧಿಸಿತ್ತು. ಇದೀಗ 8ನೇ ಬಾರಿಯ ಸೆಣಸಾಟದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದು ಅಫ್ಘಾನ್ ಚೊಚ್ಚಲ ಜಯ ಸಾಧಿಸಿರುವುದು ವಿಶೇಷ.

PAK vs AFG ICC World Cup 2023: ಪಾಕ್ ಪಡೆಗೆ ಸೋಲುಣಿಸಿದ ಅಫ್ಘಾನಿಸ್ತಾನ್
Pakistan vs Afghanistan

ಏಕದಿನ ವಿಶ್ವಕಪ್​ನ 22ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನ್ ಭರ್ಜರಿ ಜಯ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿತು. 283 ರನ್​ಗಳ ಗುರಿ ಅಫ್ಘಾನಿಸ್ತಾನ್ ತಂಡ 49 ಓವರ್​ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 286 ರನ್​ ಬಾರಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಏಕದಿನ ಕ್ರಿಕೆಟ್​ನಲ್ಲಿ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ ತಂಡಗಳು 8 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 7 ಬಾರಿ ಪಾಕಿಸ್ತಾನ್ ತಂಡ ಜಯ ಸಾಧಿಸಿತ್ತು. ಇದೀಗ 8ನೇ ಬಾರಿಯ ಸೆಣಸಾಟದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದು ಅಫ್ಘಾನ್ ಚೊಚ್ಚಲ ಜಯ ಸಾಧಿಸಿರುವುದು ವಿಶೇಷ.

ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್.

ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಝ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ನೂರ್ ಅಹ್ಮದ್.

ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್​ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.

ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಝ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಉಸಾಮಾ ಮಿರ್, ಶಾಹೀನ್ ಶಾ ಆಫ್ರಿದಿ, ಹಸನ್ ಅಲಿ, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ.

LIVE Cricket Score & Updates

The liveblog has ended.
  • 23 Oct 2023 09:59 PM (IST)

    PAK vs AFG ICC World Cup 2023 Live Score: ಅಫ್ಘಾನಿಸ್ತಾನ್ ತಂಡಕ್ಕೆ ಭರ್ಜರಿ ಜಯ

    ಶಾಹೀನ್ ಅಫ್ರಿದಿ ಎಸೆದ 49ನೇ ಓವರ್​ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಅಫ್ಘಾನ್ ತಂಡದ ನಾಯಕ ಹಶ್ಮತ್ ಶಾಹಿದಿ.

    ಈ ಫೋರ್​ನೊಂದಿಗೆ ಪಾಕಿಸ್ತಾನ್ ವಿರುದ್ಧ ಗೆದ್ದು ಬೀಗಿದ ಅಫ್ಘಾನಿಸ್ತಾನ್ ತಂಡ.

    ಪಾಕಿಸ್ತಾನ್– 282/7 (50)

    ಅಫ್ಘಾನಿಸ್ತಾನ್– 286/2 (49)

  • 23 Oct 2023 09:55 PM (IST)

    PAK vs AFG ICC World Cup 2023 Live Score: ರಹಮತ್ ರಾಕೆಟ್ ಶಾಟ್

    ಹಸನ್ ಅಲಿ ಎಸೆದ 48ನೇ ಓವರ್​ನ 3ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್​ ಸಿಡಿಸಿದ ರಹಮತ್ ಶಾ.

    ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 12 ಎಸೆತಗಳಲ್ಲಿ ಕೇವಲ 4 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.

    AFG 279/2 (48)

     

  • 23 Oct 2023 09:45 PM (IST)

    PAK vs AFG ICC World Cup 2023 Live Score: ವೆಲ್ಕಂ ಬೌಂಡರಿ

    ಉಸಾಮ ಮಿರ್ ಎಸೆದ 46ನೇ ಓವರ್​ನ 2ನೇ ಎಸೆತದಲ್ಲಿ ಹಿಂಬದಿಯತ್ತ ಫೋರ್ ಬಾರಿಸಿದ ಹಶ್ಮತ್ ಶಾಹಿದಿ.

    46 ಓವರ್​ಗಳ ಮುಕ್ತಾಯದ ವೇಳೆಗೆ 264 ರನ್​ ಕಲೆಹಾಕಿದ ಅಫ್ಘಾನಿಸ್ತಾನ್.

    AFG 264/2 (46)

    ಕೊನೆಯ 4 ಓವರ್​ಗಳಲ್ಲಿ ಕೇವಲ 19 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.

  • 23 Oct 2023 09:41 PM (IST)

    PAK vs AFG ICC World Cup 2023 Live Score: 45 ಓವರ್​ಗಳು ಮುಕ್ತಾಯ

    45 ಓವರ್​ಗಳಲ್ಲಿ 253 ರನ್​ ಕಲೆಹಾಕಿರುವ ಅಫ್ಘಾನಿಸ್ತಾನ್ ತಂಡ.

    ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ಉತ್ತಮ ಬ್ಯಾಟಿಂಗ್.

    ಕೊನೆಯ 5 ಓವರ್​ಗಳಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 30 ರನ್​ಗಳ ಅವಶ್ಯಕತೆ.

    AFG 253/2 (45)

     

  • 23 Oct 2023 09:28 PM (IST)

    PAK vs AFG ICC World Cup 2023 Live Score: ರಿವರ್ಸ್ ಸ್ವೀಪ್-ಫೋರ್

    ಶಾದಾಬ್ ಖಾನ್ ಎಸೆದ 43ನೇ ಓವರ್​ನ 2ನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಶಾಟ್​ ಮೂಲಕ ಫೋರ್​ ಬಾರಿಸಿದ ಎಡಗೈ ದಾಂಡಿಗ ಹಶ್ಮತ್ ಶಾಹಿದಿ.

    43 ಓವರ್​ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 239 ರನ್​ಗಳು.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.

    AFG 239/2 (43)

     

  • 23 Oct 2023 09:16 PM (IST)

    PAK vs AFG ICC World Cup 2023 Live Score: 40 ಓವರ್​ಗಳು ಮುಕ್ತಾಯ

    40 ಓವರ್​ಗಳಲ್ಲಿ 221 ರನ್ ಕಲೆಹಾಕಿದ ಅಫ್ಘಾನಿಸ್ತಾನ್.

    ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು ಕೊನೆಯ 10 ಓವರ್​ಗಳಲ್ಲಿ 62 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ನಾಯಕ ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ಬ್ಯಾಟಿಂಗ್.

    AFG 221/2 (40)

     

  • 23 Oct 2023 08:59 PM (IST)

    PAK vs AFG ICC World Cup 2023 Live Score: ದ್ವಿಶತಕ ಪೂರೈಸಿದ ಅಫ್ಘಾನಿಸ್ತಾನ್

    ಶಾದಾಬ್ ಖಾನ್ ಎಸೆದ 37ನೇ ಓವರ್​ನ ಮೂರನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಹಶ್ಮತ್ ಶಾಹಿದಿ.

    ಈ ಫೋರ್​ನೊಂದಿಗೆ ದ್ವಿಶತಕ ಪೂರೈಸಿದ ಅಫ್ಘಾನಿಸ್ತಾನ್ ತಂಡ.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಶಾಹಿದಿ ಬ್ಯಾಟಿಂಗ್.

    AFG 204/2 (37)

      

  • 23 Oct 2023 08:51 PM (IST)

    PAK vs AFG ICC World Cup 2023 Live Score: 35 ಓವರ್​ಗಳು ಮುಕ್ತಾಯ

    35 ಓವರ್​ಗಳಲ್ಲಿ 195 ರನ್ ಕಲೆಹಾಕಿರುವ ಅಫ್ಘಾನ್ ಬ್ಯಾಟರ್​ಗಳು.

    2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಪಾಕಿಸ್ತಾನ್ ಬೌಲರ್​ಗಳು.

    ಅಫ್ಘಾನಿಸ್ತಾನ್ ತಂಡಕ್ಕೆ 90 ಎಸೆತಗಳಲ್ಲಿ 88 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಬ್ಯಾಟಿಂಗ್.

    AFG 195/2 (35)

      

  • 23 Oct 2023 08:45 PM (IST)

    PAK vs AFG ICC World Cup 2023 Live Score: ಅಫ್ಘಾನಿಸ್ತಾನ್ 2ನೇ ವಿಕೆಟ್ ಪತನ

    ಹಸನ್ ಅಲಿ ಎಸೆದ 34ನೇ ಓವರ್​ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಇಬ್ರಾಹಿಂ.

    113 ಎಸೆತಗಳಲ್ಲಿ 87 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಘಾನಿಸ್ತಾನ್ ತಂಡದ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಹಶ್ಮತ್ ಬ್ಯಾಟಿಂಗ್.

    AFG 191/2 (34)

      

      

  • 23 Oct 2023 08:38 PM (IST)

    PAK vs AFG ICC World Cup 2023 Live Score: 99 ರನ್​ಗಳ ಅವಶ್ಯಕತೆ

    32 ಓವರ್​ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 184 ರನ್​ಗಳು.

    108 ಎಸೆತಗಳಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ 99 ರನ್​ಗಳ ಗುರಿ.

    AFG 184/1 (32)

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

      

  • 23 Oct 2023 08:27 PM (IST)

    PAK vs AFG ICC World Cup 2023 Live Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 175 ರನ್ ಕಲೆಹಾಕಿದ ಅಫ್ಘಾನಿಸ್ತಾನ್.

    ವಿಕೆಟ್ ಪಡೆಯಲು ಪಾಕ್ ಬೌಲರ್​ಗಳ ಹರಸಾಹಸ.

    ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 120 ಎಸೆತಗಳಲ್ಲಿ 108 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 175/1 (30)

      

  • 23 Oct 2023 08:22 PM (IST)

    PAK vs AFG ICC World Cup 2023 Live Score: ವೆಲ್ಕಂ ಬೌಂಡರಿ

    ಉಸಾಮ ಮಿರ್ ಎಸೆದ 29ನೇ ಓವರ್​ನ 5ನೇ ಮತ್ತು 6ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಹಮತ್ ಶಾ

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 171/1 (29)

      

  • 23 Oct 2023 08:04 PM (IST)

    PAK vs AFG ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳಲ್ಲಿ 152 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.

    ರಹಮಾನುಲ್ಲಾ ಗುರ್ಬಾಝ್ (65) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಶಾಹೀನ್ ಅಫ್ರಿದಿ.

    ಅಫ್ಘಾನಿಸ್ತಾನ್ ತಂಡದಿಂದ ಭರ್ಜರಿ ಬ್ಯಾಟಿಂಗ್.

    ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 152/1 (25)

    ಅಫ್ಘಾನಿಸ್ತಾನ್ ತಂಡಕ್ಕೆ 283 ರನ್​ಗಳ ಗುರಿ ನೀಡಿರುವ ಪಾಕಿಸ್ತಾನ್.  

  • 23 Oct 2023 07:47 PM (IST)

    PAK vs AFG ICC World Cup 2023 Live Score: ಅಫ್ಘಾನಿಸ್ತಾನ್ ಮೊದಲ ವಿಕೆಟ್ ಪತನ

    ಶಾಹೀನ್ ಶಾ ಅಫ್ರಿದಿ ಎಸೆದ 22ನೇ ಓವರ್​ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ರಹಮಾನುಲ್ಲಾ ಗುರ್ಬಾಝ್.

    53 ಎಸೆತಗಳಲ್ಲಿ 65 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಘಾನ್ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್.

    AFG 135/1 (22)

      

      

  • 23 Oct 2023 07:42 PM (IST)

    PAK vs AFG ICC World Cup 2023 Live Score: 20 ಓವರ್​ಗಳು ಮುಕ್ತಾಯ

    ಇಫ್ತಿಕರ್ ಅಹ್ಮದ್ ಎಸೆದ 20ನೇ ಓವರ್​ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಗುರ್ಬಾಝ್.

    20 ಓವರ್​ಗಳ ಮುಕ್ತಾಯದ ವೇಳೆಗೆ 128 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ಆರಂಭಿಕರು.

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ (64) ಹಾಗೂ ಇಬ್ರಾಹಿಂ ಝದ್ರಾನ್ (61) ಬ್ಯಾಟಿಂಗ್.

    AFG 128/0 (20)

    ಅಫ್ಘಾನಿಸ್ತಾನ್ ತಂಡಕ್ಕೆ 283 ರನ್​ಗಳ ಗುರಿ ನೀಡಿರುವ ಪಾಕಿಸ್ತಾನ್.

      

  • 23 Oct 2023 07:24 PM (IST)

    PAK vs AFG ICC World Cup 2023 Live Score: ಶತಕ ಪೂರೈಸಿದ ಅಫ್ಘಾನಿಸ್ತಾನ್

    ಶಾದಾಬ್ ಖಾನ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಗುರ್ಬಾಝ್.

    ಈ ಫೋರ್​ನೊಂದಿಗೆ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಹಮಾನುಲ್ಲಾ ಗುರ್ಬಾಝ್.

    16 ಓವರ್​ಗಳಲ್ಲಿ ಶತಕದ ಗಡಿದಾಟಿದ ಅಫ್ಘಾನಿಸ್ತಾನ್ ತಂಡದ ಸ್ಕೋರ್.

    AFG 105/0 (16)

      

  • 23 Oct 2023 07:20 PM (IST)

    PAK vs AFG ICC World Cup 2023 Live Score: 15 ಓವರ್​ಗಳು ಮುಕ್ತಾಯ

    ಉಸಾಮ ಮಿರ್ ಎಸೆದ 15ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.

    ಈ ಫೋರ್​ನೊಂದಿಗೆ 54 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಇಬ್ರಾಹಿಂ ಝದ್ರಾನ್.

    15 ಓವರ್​ಗಳ ಮುಕ್ತಾಯದ ವೇಳೆಗೆ ಅಫ್ಗಾನಿಸ್ತಾನ್ ತಂಡದ ಸ್ಕೋರ್ 98 ರನ್​ಗಳು.

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ (46) ಹಾಗೂ ಇಬ್ರಾಹಿಂ ಝದ್ರಾನ್ (50) ಬ್ಯಾಟಿಂಗ್.

    AFG 98/0 (15)

      

  • 23 Oct 2023 07:07 PM (IST)

    PAK vs AFG ICC World Cup 2023 Live Score: ಆಕರ್ಷಕ ಬೌಂಡರಿ

    ಹ್ಯಾರಿಸ್ ರೌಫ್ ಎಸೆದ 12ನೇ ಓವರ್​ನ 4ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ರಹಮಾನುಲ್ಲಾ ಗುರ್ಬಾಝ್.

    ಅಫ್ಘಾನಿಸ್ತಾನ್ ಆರಂಭಿಕರಿಂದ ಭರ್ಜರಿ ಬ್ಯಾಟಿಂಗ್.

    AFG 75/0 (12)

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

  • 23 Oct 2023 07:01 PM (IST)

    PAK vs AFG ICC World Cup 2023 Live Score: 10 ಓವರ್​ಗಳು ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ 60 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ (32) ಹಾಗೂ ಇಬ್ರಾಹಿಂ ಝದ್ರಾನ್ (28) ಬ್ಯಾಟಿಂಗ್.

    AFG 60/0 (10)

    ಅಫ್ಘಾನಿಸ್ತಾನ್ ತಂಡಕ್ಕೆ 283 ರನ್​ಗಳ ಗುರಿ ನೀಡಿರುವ ಪಾಕಿಸ್ತಾನ್ ತಂಡ.

      

  • 23 Oct 2023 06:50 PM (IST)

    PAK vs AFG ICC World Cup 2023 Live Score: ಬೌಂಡರಿಗಳ ಸುರಿಮಳೆ

    ಹ್ಯಾರಿಸ್ ರೌಫ್ ಎಸೆದ 8ನೇ ಓವರ್​ನ 2ನೇ ಮತ್ತು 3ನೇ ಎಸೆತಗಳಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ರಹಮಾನುಲ್ಲಾ ಗುರ್ಬಾಝ್.

    5ನೇ ಮತ್ತು 6ನೇ ಎಸೆತಗಳಲ್ಲಿ ಮತ್ತೆರಡು ಫೋರ್​ಗಳನ್ನು ಸಿಡಿಸಿದ ಗುರ್ಬಾಝ್.

    ಈ ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ಅಫ್ಘಾನಿಸ್ತಾನ್ ತಂಡ.

    AFG 55/0 (8)

      

  • 23 Oct 2023 06:40 PM (IST)

    PAK vs AFG ICC World Cup 2023 Live Score: ಝದ್ರಾನ್ ಕವರ್​ ಡ್ರೈವ್

    ಹಸನ್ ಅಲಿ ಎಸೆದ 6ನೇ ಓವರ್​ನ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್​ ಡ್ರೈವ್ ಬಾರಿಸಿದ ಇಬ್ರಾಹಿಂ ಝದ್ರಾನ್

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 34/0 (6)

     

  • 23 Oct 2023 06:34 PM (IST)

    PAK vs AFG ICC World Cup 2023 Live Score: 5 ಓವರ್​ಗಳು ಮುಕ್ತಾಯ

    5 ಓವರ್​ಗಳಲ್ಲಿ 28 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡದ ಆರಂಭಿಕರು.

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 28/0 (5)

    ಅಫ್ಘಾನಿಸ್ತಾನ್ ತಂಡಕ್ಕೆ 283 ರನ್​ಗಳ ಗುರಿ ನೀಡಿರುವ ಪಾಕಿಸ್ತಾನ್

      

  • 23 Oct 2023 06:21 PM (IST)

    PAK vs AFG ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಹಸನ್ ಅಲಿ ಎಸೆದ 2ನೇ ಓವರ್​ನ 4ನೇ ಮತ್ತು 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಇಬ್ರಾಹಿಂ ಝದ್ರಾನ್.

    ಕ್ರೀಸ್​ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 18/0 (2)

      

  • 23 Oct 2023 06:19 PM (IST)

    PAK vs AFG ICC World Cup 2023 Live Score: ಅಫ್ಘಾನಿಸ್ತಾನ್ ಇನಿಂಗ್ಸ್​ ಆರಂಭ

    ಶಾಹೀನ್ ಅಫ್ರಿದಿ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಫೋರ್ ಬಾರಿಸಿದ ರಹಮಾನುಲ್ಲಾ ಗುರ್ಬಾಝ್.

    5ನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.

    ಮೊದಲ ಓವರ್​ನಲ್ಲೇ 10 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.

    AFG 10/0 (1)

      

  • 23 Oct 2023 05:42 PM (IST)

    PAK vs AFG ICC World Cup 2023 Live Score: ಪಾಕಿಸ್ತಾನ್ ಇನಿಂಗ್ಸ್​ ಅಂತ್ಯ

    ನವೀನ್ ಉಲ್ ಹಕ್ ಎಸೆದ ಕೊನೆಯ ಓವರ್​ನ 2ನೇ ಎಸೆತದಲ್ಲಿ ಡೀಪ್​ ಎಕ್ಸ್​ಟ್ರಾ ಕವರ್​ನತ್ತ ಕ್ಯಾಚ್ ನೀಡಿದ ಇಫ್ತಿಕರ್ ಅಹ್ಮದ್ (40).

    ಅಂತಿಮ ಎಸೆದಲ್ಲಿ ಲಾಂಗ್ ಆನ್​ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಶಾದಾಬ್ ಖಾನ್ (40).

    ಕೊನೆಯ ಓವರ್​ನಲ್ಲಿ ಕೇವಲ 3 ರನ್ ನೀಡಿ 2 ವಿಕೆಟ್ ಕಬಳಿಸಿದ ನವೀನ್ ಉಲ್ ಹಕ್.

    ಪಾಕಿಸ್ತಾನ್– 282/7 (50)

    ಅಫ್ಘಾನಿಸ್ತಾನ್ ತಂಡಕ್ಕೆ 283 ರನ್​ಗಳ ಗುರಿ.

      

  • 23 Oct 2023 05:34 PM (IST)

    PAK vs AFG ICC World Cup 2023 Live Score: ಕೊನೆಯ ಓವರ್ ಬಾಕಿ

    ಅಝ್ಮತ್ ಒಮರ್​ಝಾಹಿ ಎಸೆದ 49ನೇ ಓವರ್​ನ 4ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ಇಫ್ತಿಕರ್ ಅಹ್ಮದ್.

    49 ಓವರ್​ಗಳ ಮುಕ್ತಾಯದ ವೇಳೆಗೆ 279 ರನ್ ಕಲೆಹಾಕಿದ ಅಫ್ಘಾನಿಸ್ತಾನ್.

    ಕ್ರೀಸ್​ನಲ್ಲಿ ಇಫ್ತಿಕರ್ ಅಹ್ಮದ್ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.

    PAK 279/5 (49)

      

  • 23 Oct 2023 05:23 PM (IST)

    PAK vs AFG ICC World Cup 2023 Live Score: ಶಾದಾಬ್ ಸಿಕ್ಸ್​

    ಅಝ್ಮತ್ ಎಸೆದ 47ನೇ ಓವರ್​ನ 2ನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಾದಾಬ್ ಖಾನ್.

    47 ಓವರ್​ಗಳ ಮುಕ್ತಾಯದ ವೇಳೆಗೆ 250 ರನ್ ಕಲೆಹಾಕಿದ ಪಾಕಿಸ್ತಾನ್.

    PAK 250/5 (47)

    ಕ್ರೀಸ್​ನಲ್ಲಿ ಇಫ್ತಿಕರ್ ಅಹ್ಮದ್ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.

  • 23 Oct 2023 05:11 PM (IST)

    PAK vs AFG ICC World Cup 2023 Live Score: ಇಫ್ತಿ ಮೆನಿಯಾ-ಭರ್ಜರಿ ಸಿಕ್ಸ್​

    ರಶೀದ್ ಖಾನ್ ಎಸೆದ 45ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಇಫ್ತಿಕರ್ ಅಹ್ಮದ್.

    ಕ್ರೀಸ್​ನಲ್ಲಿ ಇಫ್ತಿಕರ್ ಅಹ್ಮದ್ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.

    PAK 221/5 (45)

      

  • 23 Oct 2023 04:57 PM (IST)

    PAK vs AFG ICC World Cup 2023 Live Score: ಪಾಕಿಸ್ತಾನ್ 5ನೇ ವಿಕೆಟ್ ಪತನ

    ನೂರ್ ಅಹ್ಮದ್ ಎಸೆದ 42ನೇ ಓವರ್​ನ ಐದನೇ ಎಸೆತದಲ್ಲಿ ಆಫ್ ಸೈಡ್ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿದ ಬಾಬರ್ ಆಝಂ.

    92 ಎಸೆತಗಳಲ್ಲಿ 74 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಪಾಕ್ ತಂಡದ ನಾಯಕ ಬಾಬರ್.

    ಅಫ್ಘಾನಿಸ್ತಾನ್ ತಂಡಕ್ಕೆ 5ನೇ ಯಶಸ್ಸು ತಂದುಕೊಟ್ಟ ಎಡಗೈ ಸ್ಪಿನ್ನರ್ ನೂರ್ ಅಹ್ಮದ್.

    PAK 206/5 (42)

      

      

  • 23 Oct 2023 04:48 PM (IST)

    PAK vs AFG ICC World Cup 2023 Live Score: 40 ಓವರ್​ಗಳು ಮುಕ್ತಾಯ

    40 ಓವರ್​ಗಳ ಮುಕ್ತಾಯದ ವೇಳೆಗೆ 191 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.

    ಕೇವಲ 4 ವಿಕೆಟ್​ಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿರುವ ಅಫ್ಘಾನ್ ಬೌಲರ್​ಗಳು.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.

    PAK 191/4 (40)

      

  • 23 Oct 2023 04:42 PM (IST)

    PAK vs AFG ICC World Cup 2023 Live Score: ವೆಲ್ಕಂ ಬೌಂಡರಿ

    ಮುಜೀಬ್ ಉರ್ ರೆಹಮಾನ್ ಎಸೆದ 39ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಫೋರ್ ಬಾರಿಸಿದ ಬಾಬರ್ ಆಝಂ.

    PAK 189/4 (39)

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.

  • 23 Oct 2023 04:36 PM (IST)

    PAK vs AFG ICC World Cup 2023 Live Score: ಅರ್ಧಶತಕ ಪೂರೈಸಿದ ಬಾಬರ್ ಆಝಂ

    69 ಎಸೆತಗಳಲ್ಲಿ 3 ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ಬಾಬರ್ ಆಝಂ.

    37 ಓವರ್​ಗಳಲ್ಲಿ 4.81 ಸರಾಸರಿಯಲ್ಲಿ ರನ್ ಪೇರಿಸಿರುವ ಪಾಕಿಸ್ತಾನ್ ಬ್ಯಾಟರ್​ಗಳು.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ಬ್ಯಾಟಿಂಗ್.

    PAK 178/4 (37)

     

  • 23 Oct 2023 04:24 PM (IST)

    PAK vs AFG ICC World Cup 2023 Live Score: ಪಾಕಿಸ್ತಾನ್ 4ನೇ ವಿಕೆಟ್ ಪತನ

    ಮೊಹಮ್ಮದ್ ನಬಿ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಸೌದ್ ಶಕೀಲ್.

    34 ಎಸೆತಗಳಲ್ಲಿ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಸೌದ್ ಶಕೀಲ್.

    PAK 163/4 (34)

      

  • 23 Oct 2023 04:16 PM (IST)

    PAK vs AFG ICC World Cup 2023 Live Score: 32 ಓವರ್​ಗಳು ಮುಕ್ತಾಯ

    32 ಓವರ್​ಗಳಲ್ಲಿ 151 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.

    PAK 151/3 (32)

    ಔಟಾದವರ ಪಟ್ಟಿ:

    ಇಮಾಮ್ ಉಲ್ ಹಕ್

    ಅಬ್ದುಲ್ಲ ಶಫೀಕ್

    ಮೊಹಮ್ಮದ್ ರಿಝ್ವಾನ್

  • 23 Oct 2023 03:53 PM (IST)

    PAK vs AFG ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳಲ್ಲಿ 120 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.

    ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಅಫ್ಘಾನಿಸ್ತಾನ್ ಬೌಲರ್​ಗಳು.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್.

    PAK 120/3 (25.3)

    ಇಮಾಮ್ ಉಲ್ ಹಕ್, ಅಬ್ದುಲ್ಲ ಶಫೀಕ್ ಹಾಗೂ ಮೊಹಮ್ಮದ್ ರಿಝ್ವಾನ್ ಔಟ್.

      

  • 23 Oct 2023 03:36 PM (IST)

    PAK vs AFG ICC World Cup 2023 Live Score: ಪಾಕಿಸ್ತಾನ್ 2ನೇ ವಿಕೆಟ್ ಪತನ

    ಸ್ಪಿನ್ನರ್ ನೂರ್ ಅಹ್ಮದ್ ಎಸೆದ 23ನೇ ಓವರ್​ನ 3ನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದ ಅಬ್ದುಲ್ಲ ಶಫೀಕ್.

    75 ಎಸೆತಗಳಲ್ಲಿ 58 ರನ್ ಬಾರಿಸಿ ನಿರ್ಗಮಿಸಿದ ಆರಂಭಿಕ ಬ್ಯಾಟರ್ ಅಬ್ದುಲ್ಲ ಶಫೀಕ್.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್.

    PAK 110/2 (23)

      

      

  • 23 Oct 2023 03:31 PM (IST)

    PAK vs AFG ICC World Cup 2023 Live Score: ವೆಲ್ಕಂ ಬೌಂಡರಿ

    ಮುಜೀಬ್ ಉರ್ ರೆಹಮಾನ್ ಎಸೆದ 22ನೇ ಓವರ್​ನ ಮೊದಲ ಎಸೆತದಲ್ಲಿ ಅಬ್ದುಲ್ ಶಫೀಕ್​ ಬ್ಯಾಟ್ ಎಡ್ಜ್​ ಆಗಿ ಹಿಂಬದಿತ್ತ ಬೌಂಡರಿ ದಾಟಿದ ಚೆಂಡು.

    ಈ ಫೋರ್​ನೊಂದಿಗೆ ಅರ್ಧಶತಕದ ಜೊತೆಯಾಟ ಪೂರೈಸಿದ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್.

    PAK 109/1 (22)

      

  • 23 Oct 2023 03:25 PM (IST)

    PAK vs AFG ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳಲ್ಲಿ ನೂರು ರನ್ ಪೂರೈಸಿದ ಪಾಕಿಸ್ತಾನ್ ತಂಡ.

    ಬಾಬರ್ ಆಝಂ (30) ಹಾಗೂ ಅಬ್ದುಲ್ಲ ಶಫೀಕ್ (51) ಉತ್ತಮ ಜೊತೆಯಾಟದ ಬ್ಯಾಟಿಂಗ್.

    PAK 100/1 (20)

    ಇಮಾಮ್ ಉಲ್ ಹಕ್ (17) ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ಅಝ್ಮತ್ ಒಮರ್​ಝಾಹಿ.

      

  • 23 Oct 2023 03:20 PM (IST)

    PAK vs AFG ICC World Cup 2023 Live Score: ಹಾಫ್ ಸೆಂಚುರಿ ಸಿಡಿಸಿದ ಅಬ್ದುಲ್ಲ

    60 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    ಪಾಕಿಸ್ತಾನ್ ತಂಡದಿಂದ ಉತ್ತಮ ಬ್ಯಾಟಿಂಗ್.

    PAK 93/1 (19)

      

  • 23 Oct 2023 03:17 PM (IST)

    PAK vs AFG ICC World Cup 2023 Live Score: ಪಾಕಿಸ್ತಾನ್ ಉತ್ತಮ ಬ್ಯಾಟಿಂಗ್

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    18 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.

    ವಿಕೆಟ್ ಕಬಳಿಸಲು ಅಫ್ಘಾನ್ ಬೌಲರ್​ಗಳ ಹರಸಾಹಸ.

    PAK 90/1 (18)

      

  • 23 Oct 2023 03:04 PM (IST)

    PAK vs AFG ICC World Cup 2023 Live Score: 15 ಓವರ್​ಗಳು ಮುಕ್ತಾಯ

    15 ಓವರ್​ಗಳು ಮುಕ್ತಾಯದ ವೇಳೆಗೆ 78 ರನ್ ಕಲೆಹಾಕಿದ ಪಾಕಿಸ್ತಾನ್.

    ಇಮಾಮ್ ಉಲ್ ಹಕ್ (17) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಅಝ್ಮತ್ ಒಮರ್​ಝಾಹಿ.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 78/1 (15)

      

  • 23 Oct 2023 02:58 PM (IST)

    PAK vs AFG ICC World Cup 2023 Live Score: ಬಾಬರ್ ಕವರ್​ ಡ್ರೈವ್

    ಅಝ್ಮತ್ ಒಮರ್​ಝಾಹಿ 13ನೇ ಓವರ್​ನ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್​ ಡ್ರೈವ್ ಫೋರ್ ಬಾರಿಸಿದ ಬಾಬರ್ ಆಝಂ.

    ಕ್ರೀಸ್​ನಲ್ಲಿ ಬಾಬರ್ ಆಝಂ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 72/1 (13)

      

  • 23 Oct 2023 02:46 PM (IST)

    PAK vs AFG ICC World Cup 2023 Live Score: ಪಾಕಿಸ್ತಾನ್ ಮೊದಲ ವಿಕೆಟ್ ಪತನ

    ಅಝ್ಮತ್ ಒಮರ್​ಝಾಹಿ ಎಸೆದ 11ನೇ ಓವರ್​ನ ಮೊದಲ ಎಸೆತದಲ್ಲೇ ಪುಲ್ ಶಾಟ್ ಬಾರಿಸಲು ಯತ್ನಿಸಿ ಕ್ಯಾಚ್ ನೀಡಿದ ಇಮಾಮ್ ಉಲ್ ಹಕ್.

    22 ಎಸೆತಗಳಲ್ಲಿ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಇಮಾಮ್ ಉಲ್ ಹಕ್.

    PAK 63/1 (11)

      

      

  • 23 Oct 2023 02:44 PM (IST)

    PAK vs AFG ICC World Cup 2023 Live Score: 10 ಓವರ್​ಗಳು ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ 66 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಎಡಗೈ ದಾಂಡಿಗ ಇಮಾಮ್ ಉಲ್ ಹಕ್ (17) ಹಾಗೂ ಬಲಗೈ ಬ್ಯಾಟರ್ ಅಬ್ದುಲ್ಲ ಶಫೀಕ್ (38) ಬ್ಯಾಟಿಂಗ್.

    ಪಾಕಿಸ್ತಾನ್- 56/0 (10)

    ನಾಲ್ವರು ಬೌಲರ್​ಗಳನ್ನು ಬಳಸಿಕೊಂಡರೂ ಮೊದಲ ಯಶಸ್ಸು ಪಡೆದ ಅಫ್ಘಾನಿಸ್ತಾನ್.

      

  • 23 Oct 2023 02:35 PM (IST)

    PAK vs AFG ICC World Cup 2023 Live Score: ಭರ್ಜರಿ ಸಿಕ್ಸ್​ ಸಿಡಿಸಿದ ಶಫೀಕ್

    ಮುಜೀಬ್ ಉರ್ ರೆಹಮಾನ್ ಎಸೆದ 8ನೇ ಓವರ್​ನ 3ನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಅಬ್ದುಲ್ಲ ಶಫೀಕ್.

    ಈ ಸಿಕ್ಸ್​ನೊಂದಿಗೆ ಅರ್ಧಶತಕ ಪೂರೈಸಿದ ಪಾಕಿಸ್ತಾನ್.

    ಕ್ರೀಸ್​ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 51/0 (8)

      

  • 23 Oct 2023 02:27 PM (IST)

    PAK vs AFG ICC World Cup 2023 Live Score: ಶಫೀಕ್ ಸೂಪರ್ ಆಟ

    ಮುಜೀಬ್ ಉರ್ ರೆಹಮಾನ್ ಎಸೆದ 6ನೇ ಓವರ್​ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಅಬ್ದುಲ್ಲ ಶಫೀಕ್.

    ಕ್ರೀಸ್​ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 38/0 (6)

      

  • 23 Oct 2023 02:23 PM (IST)

    PAK vs AFG ICC World Cup 2023 Live Score: 5 ಓವರ್​ಗಳು ಮುಕ್ತಾಯ

    ನವೀನ್ ಉಲ್ ಹಕ್ ಎಸೆದ 5ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಅಬ್ದುಲ್ಲ ಶಫೀಕ್.

    3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಬ್ದುಲ್ಲ ಶಫೀಕ್.

    5 ಓವರ್​ಗಳ ಮುಕ್ತಾಯದ ವೇಳೆಗೆ 26 ರನ್ ಕಲೆಹಾಕಿದ ಪಾಕಿಸ್ತಾನ್.

    PAK 26/0 (5)

      

  • 23 Oct 2023 02:21 PM (IST)

    PAK vs AFG ICC World Cup 2023 Live Score: ಪಾಕಿಸ್ತಾನ್ ಉತ್ತಮ ಆರಂಭ

    3 ಓವರ್​ಗಳಲ್ಲಿ 13 ರನ್ ಕಲೆಹಾಕಿದ ಪಾಕಿಸ್ತಾನ್ ತಂಡ.

    ಕ್ರೀಸ್​ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 13-0

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಪಾಕಿಸ್ತಾನ್.

  • 23 Oct 2023 02:06 PM (IST)

    PAK vs AFG ICC World Cup 2023 Live Score: ಮೊದಲ ಓವರ್​ನಲ್ಲೇ ಮೊದಲ ಬೌಂಡರಿ

    ನವೀನ್ ಉಲ್ ಹಕ್ ಎಸೆದ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಇಮಾಮ್ ಉಲ್ ಹಕ್.

    ಕ್ರೀಸ್​ನಲ್ಲಿ ಇಮಾಮ್ ಉಲ್ ಹಕ್ ಹಾಗೂ ಅಬ್ದುಲ್ಲ ಶಫೀಕ್ ಬ್ಯಾಟಿಂಗ್.

    PAK 5/0 (1)

      

  • 23 Oct 2023 01:50 PM (IST)

    Raichur Dasara 2023 Live: ಮಂತ್ರಾಲಯದ ರಾಯರ ಮಠದಲ್ಲಿ ಆಯುಧ ಪೂಜೆ

    ರಾಯಚೂರು: ವಿಜಯ ದಶಮಿಯ ಆಯುಧ ಪೂಜೆ ಹಿನ್ನೆಲೆಯಲ್ಲಿ ಮಂತ್ರಾಲಯದ ರಾಯರ ಮಠದಲ್ಲಿ ಆಯುಧ ಪೂಜೆ ನೆರವೇರಿತು. ಆಯುಧ ಪೂಜೆ ಜೊತೆ ವಿವಿಧ ಪೂಜೆ ಪುನಸ್ಕಾರಗಳನ್ನ ಮಂತ್ರಾಲಯ ಪೀಠಾಧಿಪತಿ‌ ಸುಬುದೇಂದ್ರ ತೀರ್ಥರು ನೆರವೇರಿಸಿದರು. ನರಸಿಂಹ ದೇವರ ಸಾಲಿಗ್ರಾಮಕ್ಕೆ “ಮನ್ಯುಸೂಕ್ತ ಪುನಹಚರಣೆ” ಅಭಿಷೇಕ ಮಾಡಲಾಯಿತು. ನಂತರ ಉಂಜಾಳ ಮಂಟಪದಲ್ಲಿ ಶ್ರೀನಿವಾಸ ಕಲ್ಯಾಣ ಪ್ರವಚನ ಮಂಗಲ ಕಾರ್ಯಕ್ರಮ ಜರುಗಿತು.  ಶ್ರೀ ಮಠದ ವಾಹನಗಳನ್ನು ಪೂಜೆ ಮಾಡಲಾಯಿತು.

  • 23 Oct 2023 01:42 PM (IST)

    PAK vs AFG ICC World Cup 2023 Live Score: ಅಫ್ಘಾನಿಸ್ತಾನ್ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಝ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ನೂರ್ ಅಹ್ಮದ್.

  • 23 Oct 2023 01:40 PM (IST)

    PAK vs AFG ICC World Cup 2023 Live Score: ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸಾಮಾ ಮಿರ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್.

  • 23 Oct 2023 01:34 PM (IST)

    PAK vs AFG ICC World Cup 2023 Live Score: ಟಾಸ್ ಗೆದ್ದ ಪಾಕಿಸ್ತಾನ್

    ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • Published On - Oct 23,2023 1:34 PM

    Follow us
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
    ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
    ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
    ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್