Karnataka Budget 2023: ಬಿಎಸ್ ಯಡಿಯೂರಪ್ಪ ನಗುತ್ತಾ ಡಿಕೆ ಶಿವಕುಮಾರ ಕಿವಿಯಿಂದ ತೆಗೆದರೂ ಅವರದನ್ನು ಪುನಃ ಕಿವಿಗೇರಿಸಿಕೊಂಡರು!
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಶಿವಕುಮಾರ್ ರನ್ನು ನೋಡಿ ಮೊದಲು ಮನಸಾರೆ ನಕ್ಕು ನಂತರ ಅವರ ಕಿವಿಯಿಂದ ಹೂ ತೆಗೆದರು. ಆದರೆ ಶಿವಕುಮಾರ ಪುನಃ ಹೂವನ್ನು ಕಿವಿಗೇರಿಕೊಂಡರು.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶುಕ್ರವಾರ ಬಜೆಟ್ ಮಂಡಿಸುವ ಮೊದಲು ಸಿದ್ದರಾಮಯ್ಯರನ್ನು ಅವರು ಮಾಡಿದ ಕಿವಿಯಲ್ಲಿ ಹೂ ಕಾಮೆಂಟ್ ಸದನದಲ್ಲಿ ಸೃಷ್ಟಿಸಿದ ಉದ್ವಿಗ್ನ ವಾತಾವರಣ ಬಜೆಟ್ ಮಂಡನೆ ಮುಗಿಯುವಷ್ಟರಲ್ಲಿ ತಿಳಿಯಾಗಿತ್ತು. ಆದರೆ ಸದನದಿಂದ ಹೊರ ಬರುವಾಗ ಡಿಕೆ ಶಿವಕುಮಾರ್ (DK Shivakumar) ಕೇವಲ ಒಂದು ಕಿವಿಯಲ್ಲ ಎರಡೂ ಕಿವಿಗಳಲ್ಲಿ ಹೂಗಳನ್ನು ಇಟ್ಟುಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಶಿವಕುಮಾರ್ ರನ್ನು ನೋಡಿ ಮೊದಲು ಮನಸಾರೆ ನಕ್ಕು ನಂತರ ಅವರ ಕಿವಿಯಿಂದ ಹೂ ತೆಗೆದರು. ಆದರೆ ಶಿವಕುಮಾರ ಪುನಃ ಹೂವನ್ನು ಕಿವಿಗೇರಿಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 17, 2023 02:53 PM