Anti-cow slaughter act; ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆಯುವ ತೀರ್ಮಾನ ತೆಗೆದುಕೊಂಡಿಲ್ಲ, ಸಂಪುಟ ಸಭೆಯಲ್ಲಿ ಚರ್ಚಿಸಲಿದ್ದೇವೆ: ಸಿದ್ದರಾಮಯ್ಯ

|

Updated on: Jun 05, 2023 | 7:25 PM

ಸುಮಾರು 6 ದಶಕಗಳಿಂದ ಈ ಕಾಯ್ದೆ ಜಾರಿಯಲ್ಲಿತ್ತು ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅದನ್ನು ತಿದ್ದುಪಡಿ ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

ದಾವಣಗೆರೆ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಗೋಹತ್ಯೆ ನಿಷೇಧ ಕಾಯ್ದೆ (Anti-Cow Slaughter Bill) ಮುನ್ನೆಲೆಗೆ ಬರುತ್ತದೆ. ದಾವಣಗೆರೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆಯುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಸಂಪುಟ ಸಭೆಯಲ್ಲಿ (cabinet meeting) ಚರ್ಚೆ ನಡೆಸಿದ ಬಳಿಕ ಒಂದು ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಹೇಳಿದರು. 1964 ಕಾಯ್ದೆ ಪ್ರಕಾರ, 12 ವರ್ಷಗಳ ಕಾಲ ದುಡಿದು ವಯಸ್ಸಾದ ರಾಸುಗಳನ್ನು, ಕೃಷಿ ಚಟುವಟಿಕೆಗಳಿಗೆ ಅಯೋಗ್ಯವೆನಿಸುವ ಮತ್ತು ನಿಷ್ಪ್ರಯೋಜಕ ದನಕರುಗಳನ್ನು ವಧೆ ಮಾಡಬಹುದಾಗಿದೆ, ಸುಮಾರು 6 ದಶಕಗಳಿಂದ ಈ ಕಾಯ್ದೆ ಜಾರಿಯಲ್ಲಿತ್ತು ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅದನ್ನು ತಿದ್ದುಪಡಿ ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on