Toll charge takes toll on motorists: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಹಾಗೆ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲೂ ಟೋಲ್ ದರ ಹೆಚ್ಚಳ

Updated on: Apr 01, 2023 | 10:13 AM

ಕಾರು, ಜೀಪ್ ಮತ್ತು ಇತರ ಲಘುವಾಹನಗಳ ಮೇಲೆ ಏಕಮುಖ ಸಂಚಾರಕ್ಕೆ ದರ ಟೋಲ್ ದರವನ್ನು ರೂ. 105 ರಿಂದ ರೂ. 110 ಕ್ಕೆ ಹೆಚ್ಚಿಸಲಾಗಿದೆ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ (Bengaluru-Mysuru expressway) ಟೋಲ್ ದರಗಳನ್ನು ಹೆದ್ದಾರಿ ಲೋಕಾರ್ಪಣೆಗೊಂಡ ಎರಡೇ ವಾರದಲ್ಲಿ ಹೆಚ್ಚಿಸಿದನ್ನು ನಾವು ಶುಕ್ರವಾರ ವರದಿ ಮಾಡಿದ್ದೆವು. ನಾವೇನು ಕಮ್ಮಿ ಅಂತ ಎಕ್ಸ್ ಪ್ರೆಸ್ ವೇ ಜೊತೆ ಸವಾಲಿಗೆ ಬಿದ್ದಹಾಗೆ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ (Bengaluru-Hyderabad NH) ದೇವನಹಳ್ಳಿ ಬಳಿ ಟೋಲ್ ಪ್ಲಾಜಾ ಹೊಂದಿರುವ ಅಥಾಂಗ್ ಟೋಲ್ ವೇ (Athang Toll Way) ಸಂಸ್ಥೆಯು ಎಲ್ಲ ವಾಹನಗಳು ಹಾಗೂ ಮಾಸಿಕ ಪಾಸ್ ಗಳ ದರಗಳನ್ನ ಹೆಚ್ಚಿಸಿದೆ. ಕಾರು, ಜೀಪ್ ಮತ್ತು ಇತರ ಲಘುವಾಹನಗಳ ಮೇಲೆ ಏಕಮುಖ ಸಂಚಾರಕ್ಕೆ ದರ ಟೋಲ್ ದರವನ್ನು ರೂ. 105 ರಿಂದ ಹೆಚ್ಚಿಸಿ ರೂ. 110 ಮಾಡಿದೆ. ಈ ಕೆಟೆಗಿರಿಯ ವಾಹನಗಳಿಗೆ ಮಾಸಿಕ ಟೋಲ್ ಶುಲ್ಕವನ್ನು ರೂ. 3,555 ರಿಂದ ರೂ. 3,755 ಕ್ಕೆ ಹೆಚ್ಚಿಸಲಾಗಿದೆ.

ಮತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More