IPL: ಪ್ರತಿ ಸಲ ‘ಕಪ್ ನಮ್ದೇ’ ಅನ್ನುವ ಆರ್ ಸಿಬಿ ಅಭಿಮಾನಿಗಳು ರವಿವಾರದ ಪಂದ್ಯಕ್ಕೆ ಟಿಕೆಟ್ ಕೊಳ್ಳಲು ಶುಕ್ರವಾರ ರಾತ್ರಿಯಿಂದ ಕ್ಯೂ ನಿಂತಿದ್ದಾರೆ!
ತಂಡದ ಸ್ಕಿಪ್ಪರ್ ಯಾರೇ ಆದರೂ ಅವರ ನೆಚ್ಚಿನ ಅಟಗಾರ ವಿರಾಟ್ ಕೊಹ್ಲಿ ಅನ್ನೋದು ನಿರ್ವಿವಾದಿತ. ಕೆಲವರು 360 ಡಿಗ್ರಿ ಕ್ರಿಕೆಟರ್ ಎಬಿ ಡಿವಿಲ್ಲಿಯರ್ಸ್ ರನ್ನು ಮಿಸ್ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ.
ಬೆಂಗಳೂರು: ಇಂಡಿಯನ್ ಪ್ರಿಮೀಯರ್ ಲೀಗ್ ನ (Indian Premier League) 16 ನೇ ಅವೃತ್ತಿ ಶುರುವಾಗಿದೆ ಮಾರಾಯ್ರೇ. ನಮ್ಮ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ (Royal Challengers Bangalore) ತಂಡ ಮೊದಲ ಪಂದ್ಯವನ್ನು ನಾಳೆ (ರವಿವಾರ) ಮುಂಬೈ ಇಂಡಿಯನ್ಸ್ ವಿರುದ್ದ ಆಡಲಿದೆ. ನಮಗೆಲ್ಲ ಗೊತ್ತಿರುವಂತೆ ಆರ್ ಸಿ ಬಿ ಇದುವರೆಗೆ ಒಮ್ಮೆಯೂ ಚಾಂಪಿಯನ್ ಶಿಪ್ ಗೆದ್ದಿಲ್ಲ. ಪ್ರತಿಸಲದಂತೆ ಈ ಬಾರಿಯೂ ಫಫ್ ಡು ಪ್ಲೆಸ್ಸಿ ನಾಯಕತ್ವದ ತಂಡ; ಯಾವತ್ತೂ ಬಿಟ್ಟುಕೊಡದ ಡೈಹಾರ್ಡ್ ಅಭಿಮಾನಿಗಳ ‘ಆರ್ ಸಿ ಬಿ, ಆರ್ ಸಿ ಬಿ’ ಜಯಘೋಷ ಮತ್ತು ‘ಈ ಸಲ ಕಪ್ ನಮ್ದೇ’ ಘೋಷವಾಕ್ಕಗಳ ನಡುವೆ ಅಭಿಯಾನ ಶುರುಮಾಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ (Chinnaswamy Stadium) ಮೂರು ವರ್ಷಗಳ ನಂತರ ಐಪಿಎಲ್ ವಾಪಸ್ಸಾಗುತ್ತಿದೆ. ತಂಡೆದೆಡೆ ಅಭಿಮಾನಿಗಳಿಗೆ ಇರುವ ಪ್ರೀತಿ ದಂಗಾಗಿಸುತ್ತದೆ. ಸ್ಟೇಡಿಯಂ ಹೊರಗಡೆ ನಾಳಿನ ಪಂದ್ಯಕ್ಕೆ ಟಿಕೆಟ್ ಕೊಳ್ಳಲು ನಿಂತಿರುವ ಅವರ ಉತ್ಸಾಹ, ಹುಮ್ಮಸ್ಸು ನೋಡಿ. ಹೆಚ್ಚಿನವರು ಶುಕ್ರವಾರ ಮಧ್ಯರಾತ್ರಿಯಿಂದ ಕ್ಯೂನಲ್ಲಿದ್ದಾರೆ. ರಾಜ್ಯದ ಎಲ್ಲ ಭಾಗಗಳಿಂದ ಅಭಿಮಾನಿಗಳು ಬಂದಿದ್ದಾರೆ. ತಂಡದ ಸ್ಕಿಪ್ಪರ್ ಯಾರೇ ಆದರೂ ಅವರ ನೆಚ್ಚಿನ ಅಟಗಾರ ವಿರಾಟ್ ಕೊಹ್ಲಿ ಅನ್ನೋದು ನಿರ್ವಿವಾದಿತ. ಕೆಲವರು 360 ಡಿಗ್ರಿ ಕ್ರಿಕೆಟರ್ ಎಬಿ ಡಿವಿಲ್ಲಿಯರ್ಸ್ ರನ್ನು ಮಿಸ್ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅದೆಲ್ಲ ಸರಿ, ಆರ್ ಸಿ ಬಿ ಈ ಬಾರಿಯಾದರೂ ಕಪ್ ನಮ್ದೇ ಅಂತ ಗೆದ್ದು ಬೀಗುತ್ತದೆಯೇ?
ಮತ್ತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ