AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oppo A1x 5G: ಭರ್ಜರಿ 5,000mAh ಬ್ಯಾಟರಿಯ ಒಪ್ಪೊ ಸ್ಮಾರ್ಟ್​ಫೋನ್

Oppo A1x 5G: ಭರ್ಜರಿ 5,000mAh ಬ್ಯಾಟರಿಯ ಒಪ್ಪೊ ಸ್ಮಾರ್ಟ್​ಫೋನ್

ಕಿರಣ್​ ಐಜಿ
|

Updated on: Apr 02, 2023 | 9:30 AM

Share

ಚೀನಾ ಮೂಲದ ಒಪ್ಪೊ ಕಂಪನಿ, ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಮಾದರಿಯನ್ನು ಪರಿಚಯಿಸಿದೆ. ಒಪ್ಪೊ ಎ ಸರಣಿಯಲ್ಲಿ A1x 5G ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. ನೂತನ ಫೋನ್ ವೈಶಿಷ್ಟ್ಯಗಳು ಮತ್ತು ವಿವರ ಇಲ್ಲಿದೆ.

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಬಯಸುವುದು ಬಜೆಟ್ ದರಕ್ಕೆ ಹೆಚ್ಚಿನ ಫೀಚರ್ಸ್ ಇರುವ ಫೋನ್​ಗಳನ್ನು. ಅದರಲ್ಲೂ, ಅಧಿಕ ಸಾಮರ್ಥ್ಯದ ಬ್ಯಾಟರಿ ಮತ್ತು ಕ್ಯಾಮೆರಾ ಇರುವ ಮಾದರಿಗಳಿಗೆ ಬೇಡಿಕೆ ಹೆಚ್ಚು. ಚೀನಾ ಮೂಲದ ಒಪ್ಪೊ ಕಂಪನಿ, ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಮಾದರಿಯನ್ನು ಪರಿಚಯಿಸಿದೆ. ಒಪ್ಪೊ ಎ ಸರಣಿಯಲ್ಲಿ A1x 5G ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. ನೂತನ ಫೋನ್ ವೈಶಿಷ್ಟ್ಯಗಳು ಮತ್ತು ವಿವರ ಇಲ್ಲಿದೆ. ಒಪ್ಪೊ ಎ ಸರಣಿಯಲ್ಲಿ A1x 5G ಸ್ಮಾರ್ಟ್​ಫೋನ್ ಬಿಡುಗಡೆಯಾಗಿದ್ದು, 6.56 ಇಂಚಿನ HD+ IPS LCD ಡಿಸ್​ಪ್ಲೇ ಹೊಂದಿದೆ. ಜತೆಗೆ, ಒಪ್ಪೊ A1x 5G ಫೋನ್​ ಮೀಡಿಯಾಟೆಕ್ ಡೈಮೆನ್ಸಿಟಿ 9200 ಪ್ರೊಸೆಸರ್ ಹೊಂದಿದೆ. ಹೊಸ ಫೋನ್ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, 6GB + 128GB ಮತ್ತು 8GB + 128GB ಸ್ಟೋರೇಜ್ ಆಯ್ಕೆಯೊಂದಿಗೆ
ಕ್ವೈಟ್ ಸೀ ಬ್ಲೂ ಮತ್ತು ಸ್ಟ್ಯಾರಿ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More