ಟಿವಿ 9 ಬಿಚ್ಚಿಡ್ತಿದೆ ಅಫ್ಜಲ್‌ಪುರ ಆಸ್ಪತ್ರೆಯ ಕರ್ಮಕಾಂಡ, ನಾಲ್ಕು ಕೊರೊನಾ ಪೇಶೆಂಟ್ಸ್ ಸಾವು
ಕಲಬುರಗಿ ಜಿಲ್ಲೆ ಅಫ್ಜಲ್‌ಪುರದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಆಸ್ಪತ್ರೆಯ ಹಲವಾರು ವೈದ್ಯರಿಗೆ ಕೋವಿಡ್ ಬಂದಿದೆ. ಕೇವಲ ಕೆಲವೇ ಸಿಬ್ಬಂದಿ ಈಗ ಕಾರ್ಯನಿರ್ವಹಿಸುತ್ತಿದ್ದು, ಡಿ ಗ್ರೂಪ್ ಸಿಬ್ಬಂದಿಯನ್ನ ಬಳಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ..ಈ ಬಗ್ಗೆ ಟಿವಿ9 ವರದಿ ಇಲ್ಲಿದೆ ನೋಡಿ… ಅಫಜಲಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮುಂಜಾನೆ ಆರು ಗಂಟೆಯಿಂದ ಒಂಬತ್ತು ಗಂಟೆವರಗೆ ಆಕ್ಸಿಜನ್ ಇರಲಿಲ್ಲಾ. ರಾತ್ರಿ ಒಂಬತ್ತು ಗಂಟೆಗೆ ಆಕ್ಸಿಜನ್ ತರಲು ಕಲಬುರಗಿಗೆ ಹೋಗಿದ್ವಿ. ಆದ್ರೆ ಮುಂಜಾನೆ ಎಂಟು ಗಂಟೆಗೆ ಆಕ್ಸಿಜನ್ ಕೊಟ್ಟಿದ್ದಾರೆ. ಬಂದು ಆಕ್ಸಿಜನ್ ಹಚ್ಚಲು […]
ಕಲಬುರಗಿ ಜಿಲ್ಲೆ ಅಫ್ಜಲ್‌ಪುರದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಆಸ್ಪತ್ರೆಯ ಹಲವಾರು ವೈದ್ಯರಿಗೆ ಕೋವಿಡ್ ಬಂದಿದೆ. ಕೇವಲ ಕೆಲವೇ ಸಿಬ್ಬಂದಿ ಈಗ ಕಾರ್ಯನಿರ್ವಹಿಸುತ್ತಿದ್ದು, ಡಿ ಗ್ರೂಪ್ ಸಿಬ್ಬಂದಿಯನ್ನ ಬಳಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ..ಈ ಬಗ್ಗೆ ಟಿವಿ9 ವರದಿ ಇಲ್ಲಿದೆ ನೋಡಿ…
ಅಫಜಲಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮುಂಜಾನೆ ಆರು ಗಂಟೆಯಿಂದ ಒಂಬತ್ತು ಗಂಟೆವರಗೆ ಆಕ್ಸಿಜನ್ ಇರಲಿಲ್ಲಾ. ರಾತ್ರಿ ಒಂಬತ್ತು ಗಂಟೆಗೆ ಆಕ್ಸಿಜನ್ ತರಲು ಕಲಬುರಗಿಗೆ ಹೋಗಿದ್ವಿ. ಆದ್ರೆ ಮುಂಜಾನೆ ಎಂಟು ಗಂಟೆಗೆ ಆಕ್ಸಿಜನ್ ಕೊಟ್ಟಿದ್ದಾರೆ. ಬಂದು ಆಕ್ಸಿಜನ್ ಹಚ್ಚಲು ಒಂಬತ್ತು ಗಂಟೆಯಾಯಿತು. ಇರೋದೋ ಕೇವಲ ಹತ್ತು ಜಂಬೂ ಸಿಲಿಂಡರ್ ಮಾತ್ರ. ಅದರಲ್ಲಿ ಐದು ಆನ್ ಮಾಡಿ, ಐದು ಕಲಬುರಗಿಗೆ ತುಂಬಿಸಿಕೊಂಡು ಬರಲು ಹೋಗಿತ್ತು. ಅಲ್ಲಿ ಆಕ್ಸಿಜನ್ ತುಂಬಿ ಕೊಡಲು ವಿಳಂಬವಾಗ್ತಿದೆ. ಪ್ರತಿ ದಿನ ಆಕ್ಸಿಜನ್ ತುಂಬಿಸಿಕೊಳ್ಳಲು ಹತ್ತು ಗಂಟೆ ಕಾಯಬೇಕು ಎಂದು ಆಕ್ಸಿಜನ್ ಕೊರತೆ ಕರಾಳತೆಯನ್ನು ಆಸ್ಪತ್ರೆಯ ಸಿಬ್ಬಂದಿ ಯೂಸೂಪ್ ಖಾನ್ ಟಿವಿ9 ಗೆ ತಿಳಿಸಿದ್ದಾರೆ.
(Afzalpur Hospital Surgeon Tells Horrible Situation In Covid 19 Hospital)