‘ಪ್ಲೀಸ್ ಶಟ್​ಅಪ್​’; ಸಂಗೀತಾ ಹಾಗೂ ವಿನಯ್ ಗೌಡ ಮಧ್ಯೆ ಮತ್ತೆ ದ್ವೇಷದ ಕಿಡಿ

Updated on: Dec 05, 2023 | 9:02 AM

ವಿನಯ್ ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ಸಾಕಷ್ಟು ಕಿತ್ತಾಟ ಉಂಟಾಗಿತ್ತು. ಒಂದು ಸಮಯದಲ್ಲಿ ಇಬ್ಬರೂ ಫ್ರೆಂಡ್ಸ್ ಆದರು. ಈಗ ಇವರು ಮತ್ತೆ ಕಿತ್ತಾಟ ಶುರು ಮಾಡಿದ್ದಾರೆ.

ಬಿಗ್ ಬಾಸ್​ನಲ್ಲಿ (Bigg Boss) ಈ ವಾರ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಗಂಧರ್ವರು ಒಂದು ಕಡೆ ಹಾಗೂ ರಾಕ್ಷಸರು ಇನ್ನೊಂದು ಕಡೆ. ಇವರ ಮಧ್ಯೆ ಟಾಸ್ಕ್ ನಡೆಯಲಿದೆ. ಈ ಗ್ರೂಪ್​ನ ಆಯ್ಕೆ ಮಾಡಲು ಬಿಗ್ ಬಾಸ್ ಬೇರೆಯದೇ ಆದ ತಂತ್ರ ಉಪಯೋಗಿಸಿತ್ತು. ಯಾರಲ್ಲಿ ಕೆಟ್ಟತನ ಹಾಗೂ ಯಾರಲ್ಲಿ ಒಳ್ಳೆಯ ತನ ಇದೆ ಎಂಬುದನ್ನು ಹೇಳಬೇಕು. ವಿನಯ್ ಕೆಟ್ಟ ಗುಣಗಳ ಬೇರು ಎಂದು ಸಂಗೀತಾ ಹೇಳಿದ್ದಾರೆ. ಸಂಗೀತಾ ಬಗ್ಗೆ ಇದೇ ಆರೋಪವನ್ನು ವಿನಯ್ ಮಾಡಿದ್ದಾರೆ.  ಸಂಗೀತಾಗೆ ಶಟ್​ಅಪ್​ ಎಂದು ಬೈದಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಬಿಗ್ ಬಾಸ್ ಲೈವ್​ ನೋಡಲು ಜಿಯೋ ಸಿನಿಮಾದಲ್ಲಿ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More