ಗೋವಾನಲ್ಲಿ ಸರ್ಕಾರ ರಚಿಸುವ ಪ್ರಯತ್ನ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ನಾಯಕರನ್ನು ಕಳಿಸಿದೆ
ಕಳೆದ ಬಾರಿ ಗೋವಾನಲ್ಲಿ ಸರ್ಕಾರ ರಚಿಸುವ ಅವಕಾಶ ಇದ್ದರೂ ಕಾಂಗ್ರೆಸ್ ಅವಕಾಶವನ್ನು ಕೈ ಚೆಲ್ಲಿತ್ತು. 40 ಸ್ಥಾನಗಳ ಗೋವಾ ಅಸೆಂಬ್ಲಿಗೆ ನಡೆದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 16 ಸೀಟು ಗೆಲ್ಲಲಿವೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ಹೇಳುತ್ತಿವೆ.
ಮೇಕೆದಾಟು ಯೋಜನೆಗಾಗಿ ನಡೆಸಿದ ಪಾದಯಾತ್ರೆಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಚೇತರಿಸಿಕೊಂಡಂತೆ ಕಾಣುತ್ತಿದೆ. ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಅವರ ಮುಖದಲ್ಲಿ ಸ್ವಲ್ಪ ಪ್ರಮಾಣದ ಬಳಲಿಕೆ ಕಂಡಿತಾದರೂ ಧ್ವನಿಯಲ್ಲಿ ಲವಲವಿಕೆ ಇತ್ತು. ಶಿವಕುಮಾರ ಮತ್ತು ಸಿದ್ದರಾಮಯ್ಯ (Siddaramaiah) ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಮಂಗಳವಾರದಂದು ಗೋವಾಗೆ ಹೊರಟಿದ್ದಾರೆ. ಅದೇ ವಿಷಯವಾಗಿ ಶಿವಕುಮಾರ ಅವರು ಮಾಧ್ಯಮದವರೊಂದಿಗೆ ಮಾತಾಡಿದರು. ಪಕ್ಷದ ಹೈ ಕಮಾಂಡ್ (ಎಐಸಿಸಿ) (AICC) ಅವರನ್ನು ಗೋವಾಗೆ ತೆರಳುವಂತೆ ಸೂಚಿಸಿದೆ.
ಗೋವಾದಲ್ಲಿ ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಕ್ಕು ಸರ್ಕಾರ ರಚಿಸುವ ಸಂಧರ್ಭ ಎದುರಾದರೆ ಅಥವಾ ಬಹುಮತಕ್ಕೆ ನಾಲ್ಕೈದು ಸ್ಥಾನ ಕಮ್ಮಿಯಾದರೂ ಸರ್ಕಾರ ರಚಿಸಲು ಪಕ್ಷೇತರರು ಮತ್ತು ಇತರ ಬಿಜೆಪಿಯೇತರ ಪಕ್ಷಗಳ ನೆರವು ಕೇಳುವ ಪ್ರಸಂಗ ತಲೆದೋರಿದರೆ ಶಿವಕುಮಾರ ಅವರ ನೇತೃತ್ವದಲ್ಲೇ ಮಾತುಕತೆ ನಡೆಯಲಿದೆಯಾ ಎಂದು ಕೇಳಿದ ಪ್ರಶ್ನೆಗೆ ಅವರು ಇಲ್ಲವೆಂದು ಪ್ರತಿಕ್ರಿಯಿಸಿದರು.
‘ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಿರುತ್ತಾರೆ, ಸಿದ್ದರಾಮಯ್ಯ ಮತ್ತು ಇನ್ನುಳಿದ ನಾಯಕರಿರುತ್ತಾರೆ, ಸರಕಾರ ರಚಿಸುವ ಸಂದರ್ಭ ಬಂದರೆ ಅವರೇ ಮಾತುಕತೆ ನಡೆಸುತ್ತಾರೆ, ನನ್ನದೇನಿದ್ದರೂ ಬರೀ ಸಹಾಯ ಮಾಡುವ ಕೆಲಸ,’ ಎಂದು ಶಿವಕುಮಾರ ಹೇಳಿದರು.
ಕಳೆದ ಬಾರಿ ಗೋವಾನಲ್ಲಿ ಸರ್ಕಾರ ರಚಿಸುವ ಅವಕಾಶ ಇದ್ದರೂ ಕಾಂಗ್ರೆಸ್ ಅವಕಾಶವನ್ನು ಕೈ ಚೆಲ್ಲಿತ್ತು. 40 ಸ್ಥಾನಗಳ ಗೋವಾ ಅಸೆಂಬ್ಲಿಗೆ ನಡೆದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 16 ಸೀಟು ಗೆಲ್ಲಲಿವೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ಹೇಳುತ್ತಿವೆ. ಸರ್ಕಾರ ರಚಿಸಲು ಇನ್ನೂ 5 ಸ್ಥಾನಗಳು ಬೇಕು.
ಹಾಗಾಗೇ, ಬೆಂಬಲಕ್ಕಾಗಿ ಬೇರೆ ಪಕ್ಷಗಳ ನಾಯಕರ ಜೊತೆ ಅವರನ್ನು ಮನವೊಲಿಸುವ ರೀತಿಯಲ್ಲಿ ಮಾತುಕತೆ ನಡೆಸಬೇಕಾಗುತ್ತದೆ. ಅದಕ್ಕೆಂದೇ ಕರ್ನಾಟಕ ಕಾಂಗ್ರೆಸ್ ನಾಯಕರ ದಂಡನ್ನು ಅಲ್ಲಿಗೆ ಕಳಿಸಲಾಗಿದೆ.
ಇದನ್ನೂ ಓದಿ: David warner: ಕೊಹ್ಲಿಯಂತೆ ಮೈದಾನದಲ್ಲೇ ಡೇವಿಡ್ ವಾರ್ನರ್ ಸಖತ್ ಸ್ಟೆಪ್: ವಿಡಿಯೋ ವೈರಲ್