‘ಊಟದ ಬಗ್ಗೆ ಪುನೀತ್​ಗೆ ಇತ್ತು ವಿಶೇಷ ಗೌರವ’; ಆ ದಿನಗಳನ್ನು ನೆನೆದ ಅಜಯ್​ ರಾವ್​

| Updated By: ಮದನ್​ ಕುಮಾರ್​

Updated on: Oct 19, 2022 | 9:21 AM

Flavors of Gandhada Gudi: ‘ಫ್ಲೇವರ್ಸ್​ ಆಫ್​ ಗಂಧದ ಗುಡಿ’ ಫುಡ್​ ಫೆಸ್ಟಿವಲ್​ನಲ್ಲಿ​ ನಟ ಅಜಯ್​ ರಾವ್​ ಭಾಗಿ ಆಗಿದ್ದಾರೆ. ಈ ವೇಳೆ ಅವರು ಪುನೀತ್​ ರಾಜ್​ಕುಮಾರ್​ ಕುರಿತು ಮನಸಾರೆ ಮಾತನಾಡಿದ್ದಾರೆ.

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ನಿಧನರಾಗಿ ವರ್ಷ ಕಳೆಯುತ್ತ ಬಂದಿದೆ. ಈ ಸಂದರ್ಭದಲ್ಲಿ ಅವರ ನೆನಪುಗಳನ್ನು ಹಲವು ಬಗೆಯಲ್ಲಿ ಮೆಲುಕು ಹಾಕಲಾಗುತ್ತಿದೆ. ಅಪ್ಪು ಅವರಿಗೆ ಊಟದ ಬಗ್ಗೆ ವಿಶೇಷವಾದ ಗೌರವ ಇತ್ತು. ಅವರು ಇಷ್ಟಪಡುತ್ತಿದ್ದ ತಿನಿಸುಗಳನ್ನು ಅಭಿಮಾನಿಗಳು ಈಗ ಸವಿಯುವ ಮೂಲಕ ‘ಫ್ಲೇವರ್ಸ್​ ಆಫ್​ ಗಂಧದ ಗುಡಿ’ ಎಂದು ಫುಡ್​ ಫೆಸ್ಟಿವಲ್​ ಮಾಡಲಾಗುತ್ತಿದೆ. ಇದರಲ್ಲಿ ನಟ ಅಜಯ್​ ರಾವ್​ (Ajay Rao) ಕೂಡ ಭಾಗಿ ಆಗಿದ್ದಾರೆ. ಈ ವೇಳೆ ಅವರು ಪುನೀತ್​ ಕುರಿತು ಮನಸಾರೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.