Akshaya Tritiya: ಜನತೆಗೆ ಅಕ್ಷಯ ತೃತೀಯ ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

Akshaya Tritiya: ಜನತೆಗೆ ಅಕ್ಷಯ ತೃತೀಯ ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

ಕಿರಣ್​ ಐಜಿ
|

Updated on:Apr 22, 2023 | 5:55 PM

ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿಗೆ ಖರೀದಿ ಮಾಡಲು ಈ ದಿನ ಮಂಗಳಕರ ದಿನ ಎಂದು ಹೇಳಲಾಗಿದೆ. ಅಕ್ಷಯ ತೃತೀಯ ದಾನ ನೀಡಲು ಮತ್ತು ಹೊಸ ವಿಚಾರ, ಕೆಲಸ ಪ್ರಾರಂಭಿಸಲು ಒಳ್ಳೆಯ ದಿನ ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಕ್ಷಯ ತೃತೀಯದ ಸಂದರ್ಭದಲ್ಲಿ ದೇಶದ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಹೊಸ ವಿಷಯಗಳನ್ನು ಪ್ರಾರಂಭಿಸಲು, ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿಗೆ ಖರೀದಿ ಮಾಡಲು ಈ ದಿನ ಮಂಗಳಕರ ದಿನ ಎಂದು ಹೇಳಲಾಗಿದೆ. ಅಕ್ಷಯ ತೃತೀಯ ದಾನ ನೀಡಲು ಮತ್ತು ಹೊಸ ವಿಚಾರ, ಕೆಲಸ ಪ್ರಾರಂಭಿಸಲು ಒಳ್ಳೆಯ ದಿನ ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ. ಜತೆಗೆ ಜನರಿಗೆ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಆ ದೇವರು ನೀಡಲಿ ಎಂದು ಹಾರೈಸಿದ್ದಾರೆ. ಇದರ ಜತೆಗೆ ಪರಶುರಾಮರ ಜನ್ಮದಿನದಂದು ಜನರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ.

Published on: Apr 22, 2023 05:55 PM