ಕಾಜಿರಂಗದಲ್ಲಿ ಕಂಡಿತು ಹಾಲಿನ ಬಣ್ಣದ ಜಿಂಕೆ; ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ, ಕಾಜಿರಂಗದ ಹಚ್ಚ ಹಸಿರಿನ ಹುಲ್ಲುಗಾವಲುಗಳ ನಡುವೆ ದೂರದಿಂದ ಈ ಬಿಳಿ ಜಿಂಕೆ ಹೊಳೆಯುತ್ತಿರುವುದನ್ನು ಕಾಣಬಹುದು. ವೈಜ್ಞಾನಿಕ ದೃಷ್ಟಿಕೋನದಿಂದ, ಇದು ಹೊಸ ಜಾತಿಯಲ್ಲ, ಬದಲಾಗಿ ಇದು ಸಾಮಾನ್ಯ ಹಂದಿ ಜಿಂಕೆ. ಆದರೆ ಇದರ ಬಣ್ಣ ಬಿಳಿಯಾಗಿರುವುದರ ಹಿಂದೆ ವಿಶೇಷ ಕಾರಣವಿದೆ. "ಇಂತಹ ಅಪರೂಪದ ಜಿಂಕೆಯನ್ನು ನೋಡುವುದು ಸಂತಸದ ಸಂಗತಿ. ಕಾಜಿರಂಗದಲ್ಲಿ ಈ 'ಅಲ್ಬಿನೋ ಹಾಗ್ ಜಿಂಕೆ'ಯನ್ನು ನೋಡುವುದು ನಮ್ಮ ವನ್ಯಜೀವಿಗಳ ಶ್ರೀಮಂತಿಕೆಯ ಸಂಕೇತವಾಗಿದೆ. ಅಸ್ಸಾಂನ ಕಾಡುಗಳು ಅಪರೂಪದ ಪ್ರಭೇದಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ" ಎಂದು ಅವರು ಬರೆದಿದ್ದಾರೆ.
ಕಾಜಿರಂಗ, ಮೇ 27: ಸಾಮಾನ್ಯವಾಗಿ ಕಂದು ಬಣ್ಣದಲ್ಲಿ ಕಂಡುಬರುವ ‘ಹಾಗ್ ಜಿಂಕೆ’ ಅಸ್ಸಾಂನ ವಿಶ್ವಪ್ರಸಿದ್ಧ ಕಾಜಿರಂಗ (kaziranga) ರಾಷ್ಟ್ರೀಯ ಉದ್ಯಾನವನದಲ್ಲಿ ಹಾಲಿನ ಬಿಳಿ ಬಣ್ಣದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ಅತ್ಯಂತ ಅಪರೂಪದ ದೃಶ್ಯದ ವಿಡಿಯೋವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೇ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. “ಇಂತಹ ಅಪರೂಪದ ಜಿಂಕೆಯನ್ನು ನೋಡುವುದು ಸಂತಸದ ಸಂಗತಿ. ಕಾಜಿರಂಗದಲ್ಲಿ ಈ ‘ಅಲ್ಬಿನೋ ಹಾಗ್ ಜಿಂಕೆ’ಯನ್ನು ನೋಡುವುದು ನಮ್ಮ ವನ್ಯಜೀವಿಗಳ ಶ್ರೀಮಂತಿಕೆಯ ಸಂಕೇತವಾಗಿದೆ. ಅಸ್ಸಾಂನ ಕಾಡುಗಳು ಅಪರೂಪದ ಪ್ರಭೇದಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ” ಎಂದು ಅವರು ಬರೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us