Hubli Video: ಫುಲ್ ಟೈಟ್ ಆಗಿ ಪೊಲೀಸ್ ಸ್ಟೇಶನ್ನೇ ನಂದು ಎಂದ ಯುವಕ
ಕುಡಿದ ಮತ್ತಿನಲ್ಲಿ ಯುವಕ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ಶ್ರೀ ಕೃಷ್ಣ ಕ್ಯಾಂಟಿನ್ನ ಗ್ಲಾಸ್ ಒಡೆದಿದ್ದಾನೆ.
ಹುಬ್ಬಳ್ಳಿ: ಭಾಗಶಃ ಕುಡುಕರಿಗೆ ತಾವು ಕುಡಿದು ಫುಲ್ ಟೈಟ್ ಆದಮೇಲೆ ತಮ್ಮ ನಡವಳಿಕೆ ಮೇಲೆ ಹಿಡಿತವಿರವುದಿಲ್ಲ. ಆಗ ಮಾತು, ಹಾವಭಾವ ಮಿತಿ ಮೀರಿರುತ್ತದೆ. ಹೀಗೆ ಚೋಟಾ ಮುಂಬೈ ಹುಬ್ಬಳ್ಳಿಯಲ್ಲಿ (Hubli) ಕುಡಿದ ಮುತ್ತಿನಲ್ಲಿ ಯುವಕ ಕಿರಿಕ್ ಮಾಡಿಕೊಂಡಿದ್ದಾನೆ. ಹೌದು ಕುಡುಕ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ಶ್ರೀ ಕೃಷ್ಣ ಕ್ಯಾಂಟಿನ್ನ ಗ್ಲಾಸ್ ಒಡೆದಿದ್ದಾನೆ. ನಂತರ ಸ್ಥಳೀಯರು ಯುವಕನನ್ನ ಹಿಡಿದು ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಈ ವೇಳೆ ಯುವಕ ಪೊಲೀಸ್ ಸಿಬ್ಬಂದಿ ಬೈಕ್ ಮೇಲೆ ಕೂತು ಸ್ಥಳೀಯರಿಗೆ ಅವಾಜ್ ಹಾಕಿದ್ದಾನೆ.