Toll Plaza: ಶಿವಮೊಗ್ಗ-ತುಮಕೂರು ಹೆದ್ದಾರಿಯಲ್ಲೂ ಟೋಲ್ ಸಂಗ್ರಹಣೆ ವಿಚಾರದಲ್ಲಿ ಜಗಳ, ಗಲಾಟೆ
ತಿಪಟೂರು ತಾಲ್ಲೂಕಿನ ರಜತಾದ್ರಿಯ ಬಳಿಯುರುವ ಟೋಲ್ ಪ್ಲಾಜಾದ ಸಿಬ್ಬಂದಿ ವಾಹನ ಚಾಲಕರೊಬ್ಬರು, ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್ ಶುಲ್ಕ ಕಲೆಕ್ಟ್ ಮಾಡುತ್ತಿರೋದು ಯಾಕೆ ಅಂತ ವಾದಕ್ಕಿಳಿದರು.
ತುಮಕೂರು: ಟೋಲ್ ಸಂಗ್ರಹಣೆ ಸಂಬಧಿಸಿಂತೆ ಕೇವಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಟೋಲ್ ಪ್ಲಾಜಾಗಳಲ್ಲಿ (toll plaza) ಮಾತ್ರ ಜಗಳ ಗಲಾಟೆ ನಡೆಯುತ್ತಿಲ್ಲ. ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲೂ (Shivamogga-Tumakuru) ಅವೇ ಸೀನ್ ಗಳು. ತಿಪಟೂರು ತಾಲ್ಲೂಕಿನ ರಜತಾದ್ರಿ (Rajathadri) ಬಳಿಯುರುವ ಟೋಲ್ ಪ್ಲಾಜಾದ ಸಿಬ್ಬಂದಿ ವಾಹನ ಚಾಲಕರೊಬ್ಬರು, ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್ ಶುಲ್ಕ ಕಲೆಕ್ಟ್ ಮಾಡುತ್ತಿರೋದು ಯಾಕೆ ಅಂತ ವಾದಕ್ಕಿಳಿದರು. ಅವರೊಬ್ಬರೇ ಮಾತ್ರ ಅಲ್ಲ, ಈ ಟೋಲ್ ಗೇಟ್ ಮುಖಾಂತರ ಹಾದುಹೋಗುವ ವಾಹನ ಸವಾರರೆಲ್ಲ ಟೋಲ್ ಪ್ಲಾಜಾ ಸಿಬ್ಬಂದಿಯೊಂದಿಗೆ ಜಗಳ ಮಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ