CM visits hometown: ಕಮಡೊಳ್ಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಸಂಭ್ರಮಿಸುವಾಗ ಭಾವುಕರಾದ ಬಸವರಾಜ ಬೊಮ್ಮಾಯಿ
ಬೊಮ್ಮಾಯಿ ಅವರನ್ನು ಊರಲ್ಲಿ ಕಂಡು ಜನ ಎಷ್ಟು ರೋಮಾಂಚನಗೊಂಡರೋ ಮುಖ್ಯಮಂತ್ರಿಗಳು ಸಹ ಅವರೊಂದಿಗೆ ಬೆರೆತು ಅಷ್ಟೇ ಸಂತೋಷಪಟ್ಟರು. ಕೆಲವು ಸಂದರ್ಭಗಳಲ್ಲಿ ಭಾವುಕರಾದರು.
ಧಾರವಾಡ: ಊರಿಗೆ ಅರಸನಾದರೂ ತಾಯಿಗೆ ಮಗ ಅಂತ ಹೇಳುತ್ತಾರೆ; ಹಾಗೆಯೇ ಬಸವರಾಜ ಬೊಮ್ಮಾಯಿ (Basavaraj Bommai) ನಾಡಿನ ಮುಖ್ಯಮಂತ್ರಿಯಾದರೂ ತಮ್ಮ ಹುಟ್ಟಿದೂರು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿರುವ ಕಮಡೊಳ್ಳಿ (Kamadolli) ನಿವಾಸಿಗಳಿಗೆ ಮನೆಮಗನೇ! ಮಂಗಳವಾರ ರಾತ್ರಿ ಅವರು ತಮ್ಮ ತವರಿನಲ್ಲಿ ರೋಡ್ ಶೋ (road show) ನಡೆಸಿದರು. ಅವರನ್ನು ಊರಲ್ಲಿ ಕಂಡು ಜನ ಎಷ್ಟು ರೋಮಾಂಚನಗೊಂಡರೋ ಮುಖ್ಯಮಂತ್ರಿಗಳು ಸಹ ಅವರೊಂದಿಗೆ ಬೆರೆತು ಅಷ್ಟೇ ಸಂತೋಷಪಟ್ಟರು. ಕೆಲವು ಸಂದರ್ಭಗಳಲ್ಲಿ ಭಾವುಕರಾದರು. ಆಪ್ತರ, ನೆಂಟರಿಷ್ಟರ ಮನೆಗಳಿಗೆ ಭೇಟಿ ನೀಡಿ ಗ್ರೂಪ್ ಫೋಟೋಗಳಿಗೆ ಪೋಸ್ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos