Amazon Prime Day: ಪ್ರೈಮ್ ಡೇ ವಿಶೇಷ ಆಫರ್ ಸೇಲ್ ದಿನಾಂಕ ಪ್ರಕಟಿಸಿದ ಅಮೆಜಾನ್

|

Updated on: Jul 05, 2024 | 7:45 AM

ಅಮೆರಿಕ ಮೂಲದ ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್, ಪ್ರೈಮ್ ಗ್ರಾಹಕರಿಗಾಗಿಯೇ ವರ್ಷದ ವಿಶೇಷ ಮಾರಾಟ ದಿನಾಂಕವನ್ನು ಘೋಷಿಸಿದೆ. ಜುಲೈನಲ್ಲಿ ಗ್ರಾಹಕರಿಗೆ ಎರಡು ದಿನಗಳ ವಿಶೇಷ ಕೊಡುಗೆ ಲಭ್ಯವಾಗಲಿದೆ.

ಇ ಕಾಮರ್ಸ್​ ಮಾರುಕಟ್ಟೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಶೇಷ ಮಾರಾಟ ಮೇಳ ಶುರುವಾಗಲಿದೆ. ಅಮೆರಿಕ ಮೂಲದ ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್, ಪ್ರೈಮ್ ಗ್ರಾಹಕರಿಗಾಗಿಯೇ ವರ್ಷದ ವಿಶೇಷ ಮಾರಾಟ ದಿನಾಂಕವನ್ನು ಘೋಷಿಸಿದೆ. ಜುಲೈನಲ್ಲಿ ಗ್ರಾಹಕರಿಗೆ ಎರಡು ದಿನಗಳ ವಿಶೇಷ ಕೊಡುಗೆ ಲಭ್ಯವಾಗಲಿದೆ. ಈ ಬಾರಿ ಜುಲೈ 20 ಮತ್ತು 21ರಂದು ಪ್ರೈಮ್ ಡೇ ಸೇಲ್ ಇರಲಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಕ್ಯಾಶ್​ಬ್ಯಾಕ್, ಡಿಸ್ಕೌಂಟ್ ಜತೆಗೆ ಹೊಸ ಉತ್ಪನ್ನಗಳ ಲಾಂಚ್, ನೂತನ ಗ್ಯಾಜೆಟ್ ಬಿಡುಗಡೆ, ಎಕ್ಸ್​ಕ್ಲೂಸಿವ್ ಸೇಲ್ ಕೂಡ ನಡೆಯಲಿದೆ. ಯಾವೆಲ್ಲ ಕಾರ್ಡ್ ಆಫರ್ ಇದೆ, ಇತ್ಯಾದಿ ವಿವರ ವಿಡಿಯೊದಲ್ಲಿದೆ.