ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್ ವಿಶೇಷತೆ ಏನು?

Edited By:

Updated on: Mar 29, 2026 | 5:39 PM

ಅಮೆರಿಕ (America)  , ಇಸ್ರೆಲ್  (Israel) ಮತ್ತು ಇರಾನ್ (Iran) ನಡುವಿನ ಯುದ್ಧ 30ನೇ ದಿನಕ್ಕೆ ಕಾಲಿಟ್ಟಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ ಅಮೆರಿಕದ ಎಚ್ಚರಿಕೆಗೂ ಇರಾನ್ ಬಗ್ಗುತ್ತಿಲ್ಲ. ಬದಲಾಗಿ ಪ್ರತಿದಾಳಿ ಮುಂದುವರೆಸಿದೆ. ಇದರಿಂದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ತಮ್ಮ ವಾಯುಸೇನೆಯ ಶಕ್ತಿಶಾಲಿ ಬಾಂಬರ್ B-52 ವಿಮಾನ (US B-52 Bomber) ಮೂಲಕ ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿದ್ದಾರೆ.

ವಾಷಿಂಗ್ಟನ್, (ಮಾರ್ಚ್​ 29): ಅಮೆರಿಕ (America)  , ಇಸ್ರೆಲ್  (Israel) ಮತ್ತು ಇರಾನ್ (Iran) ನಡುವಿನ ಯುದ್ಧ 30ನೇ ದಿನಕ್ಕೆ ಕಾಲಿಟ್ಟಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ ಅಮೆರಿಕದ ಎಚ್ಚರಿಕೆಗೂ ಇರಾನ್ ಬಗ್ಗುತ್ತಿಲ್ಲ. ಬದಲಾಗಿ ಪ್ರತಿದಾಳಿ ಮುಂದುವರೆಸಿದೆ. ಇದರಿಂದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ತಮ್ಮ ವಾಯುಸೇನೆಯ ಶಕ್ತಿಶಾಲಿ ಬಾಂಬರ್ B-52 ವಿಮಾನ (US B-52 Bomber) ಮೂಲಕ ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿದ್ದಾರೆ. ಹೌದು.. ಅಮೆರಿಕ ಇರಾನ್‌ ವಿರುದ್ಧದ ಯುದ್ದಕ್ಕಾಗಿ ಈಗ ಮತ್ತಷ್ಟು ಯುದ್ದ ವಿಮಾನಗಳನ್ನ ಮಧ್ಯಪ್ರಾಚ್ಯಕ್ಕೆ ಕಳಿಸುತ್ತಿದೆ. ಅದರಲ್ಲೂ ಬಿ-52 ಬಾಂಬರ್‌ ಯುದ್ದ ವಿಮಾನಗಳನ್ನ ಹೆಚ್ಚು ಕಳಿಸುತ್ತಿದ್ದು, ಇಂದು (ಮಾರ್ಚ್ 29) ಮತ್ತೆ ಎರಡು ಬಿ-52 ಯುದ್ದ ವಿಮಾನಗಳು ಬ್ರಿಟನ್‌ನ ವಾಯು ನೆಲೆಗೆ ಆಗಮಿಸಿವೆ. ಇದರೊಂದಿಗೆ ಇರಾನ್‌ ವಿರುದ್ಧದ್ದ ಯುದ್ದಕ್ಕಾಗಿ ಅಮೆರಿಕ ಕಳಿಸಿರುವ ಬಿ-52 ಯುದ್ದ ವಿಮಾನಗಳ ಸಂಖ್ಯೆ ಈಗ 23ಕ್ಕೇರಿದೆ.

ಇನ್ನು ಟ್ರಂಪ್ ಬಳಸಲು ಮುಂದಾದ ಅಮೆರಿಕ ವಾಯುಸೇನೆಯ ಶಕ್ತಿಶಾಲಿ ಬಾಂಬರ್ B-52 ವಿಮಾನ ಸಾಮರ್ಥ್ಯ ಎಷ್ಟು ಎನ್ನುವುದನ್ನು ನೋಡುವುದಾದರೆ, 1950ರಲ್ಲಿ ಅಮೆರಿಕ ವಾಯುಸೇನೆಯ ಶಕ್ತಿಶಾಲಿ ಬಾಂಬರ್ B-52 ವಿಮಾನವನ್ನು ಪರಿಚಯಿಸಲಾಗಿದೆ. ಅಣ್ವಸ್ತ್ರ, ಭಾರಿ ತೂಕದ ಬಾಂಬ್​ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಪರಮಾಣು ಕ್ರೂಸ್ ಮಿಸೈಲ್ ಹೊತ್ತೊಯ್ಯಲಿದೆ. ಹಾಗೇ ಈ B-52 ವಿಮಾನ 32,000 ಕೆಜಿಗೂ ಹೆಚ್ಚು ತೂಕದ ವಸ್ತುಗಳ ಜೊತೆಗೆ 14,000 ಕಿ.ಮೀಟರ್​ ಗಿಂತ ಹೆಚ್ಚು ದೂರ ಹಾರಬಲ್ಲದು.

ಇದನ್ನೂ ಓದಿ:  ಹಾರ್ಮುಜ್ ಜಲಸಂಧಿ, ಖಾರ್ಗ್​ ದ್ವೀಪದ ಮೇಲೆ ದಾಳಿ ಮಾಡುತ್ತಾ ಅಮೆರಿಕ, 3,500 ಸೈನಿಕರನ್ನು ನಿಯೋಜಿಸಿರುವುದೇಕೆ?

Loading...
Unable to load recommendations.
Follow Us
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More