Karnataka Assembly Polls: ಪ್ರಧಾನಿ ಮೋದಿ ರೋಡ್ ಶೋ, ಬೆಂಗಳೂರಿನ ಸಿರ್ಸಿ ಸರ್ಕಲ್ ನಲ್ಲಿ ಬಜರಂಗ ದಳ ಸದಸ್ಯರ ಕುಣಿತ!

|

Updated on: May 06, 2023 | 11:53 AM

ಪ್ರಧಾನಿ ಮೋದಿಯವರು ರಾಜ್ಯದಲ್ಲಿ ನಡೆಯುತ್ತಿರುವ ಸಮಾವೇಶಗಳಲ್ಲಿ ಬಜರಂಗ ಬಲೀ ಕೈ ಜೈ ಅಂತ ಭಾಷಣ ಆರಂಭಿಸುತ್ತಿದ್ದಾರೆ.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ರೋಡ್ ಶೋ ಬೆಂಗಳೂರಿನ ರಸ್ತೆಗಳಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಜನ ಪ್ರಧಾನಿಯವರನ್ನು ಕಣ್ತುಂಬಿಕೊಳ್ಳುತ್ತಾ ಅವರ ಹೂಮಳೆಗರೆಯುತ್ತಿದ್ದಾರೆ. ಏತನ್ಮಧ್ಯೆ, ಬಜರಂಗ ದಳದ (Bajrang Dal) ಕಾರ್ಯಕರ್ತರು ಸಿರ್ಸಿ ಸರ್ಕಲ್ ನಲ್ಲಿ ಅಂಜನೇಯನ (Anjaneya) ಬೃಹತ್ ಕಟೌಟ್ ಜೊತೆ ಸಾಗುತ್ತಾ ಕುಣಿಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ಬ್ಯಾನ್ ಮಾಡುವ ಪ್ರಸ್ತಾಪ ಮಾಡಿದ್ದು ಸಂಘಟನೆ ಮತ್ತು ಬಿಜೆಪಿಯನ್ನು ಕೆರಳುವಂತೆ ಮಾಡಿದೆ. ಪ್ರಧಾನಿ ಮೋದಿಯವರು ರಾಜ್ಯದಲ್ಲಿ ನಡೆಯುತ್ತಿರುವ ಸಮಾವೇಶಗಳಲ್ಲಿ ಬಜರಂಗ ಬಲೀ ಕೈ ಜೈ ಅಂತ ಭಾಷಣ ಆರಂಭಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ