ಹೊಸಪೇಟೆಯಲ್ಲಿ ಸರಗಳ್ಳರು ಹಿರಿಯ ಮಹಿಳೆಯೊಬ್ಬರ ಮಾಂಗಲ್ಯ ಸರ ಎಳೆದ ರಭಸಕ್ಕೆ ಅವರು ನೆಲಕ್ಕೆ ಧೊಪ್ಪಂತ ಬಿದ್ದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 06, 2022 | 5:55 PM

ಮಹಿಳೆಯ ಹೆಸರು ಶಾರದಾ ಕುರುಂದವಾಡ್ ಮತ್ತು ಅವರ ವಯಸ್ಸು 62 ವರ್ಷ. ಹೊಸಪೇಟೆಯ ಮದಕರಿ ಶಾಲೆಯ ಮುಂಭಾಗದಿಂದ ಅವರು ಪತಿಯ ಜೊತೆ ಮನೆಗೆ ಹೋಗುವಾಗ ಬೈಕ್ ಮೇಲೆ ಇಬ್ಬರು ಸರಗಳ್ಳರು ಅವರ ಮಾಂಗಲ್ಯ ಸರ ಎಳೆದುಕೊಂಡು ಪರಾರಿಯಾಗುತ್ತಾರೆ.

Hospet: ಕಳ್ಳರು (burglars) ಮಾನವೀಯತೆ ಪ್ರದರ್ಶಿಸುವ ಕತೆಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ದೋಚಿದ ಮಾಲನ್ನು ಹಿಂತಿರುಗಿಸಿದ ಪ್ರಸಂಗಗಳು ಅಪರೂಪಕ್ಕೊಮ್ಮೆ ಜರುಗುತ್ತವೆ. ಆದರೆ ಸರಗಳ್ಳರು (chain snatchers) ಯಾವುದೇ ಊರಲ್ಲಿ ಕಿರಾತಕ ಕೆಲಸ ಮಾಡಿಕೊಂಡಿರಲಿ, ನಿಸ್ಸಂದೇಹವಾಗಿ ಮಾನವೀಯತೆಯ ಅಂಶ ಅವರಲ್ಲಿ ಇರಲಾರದು. ವಿಜಯನಗರ ಜಿಲ್ಲೆ ಹೊಸಪೇಟೆಯಿಂದ (Hospet) ನಮಗೆ ಈ ವಿಡಿಯೋ ಲಭ್ಯವಾಗಿದೆ. ಸರಗಳ್ಳರು ಎಸಗುವ ಕೃತ್ಯ ಎಷ್ಟು ಭಯಾನಕವಾಗಿದೆ ಅಂತ ನೀವೇ ನೋಡಿ. ಹಿರಿಯ ದಂಪತಿ ಬೆಳಗಿನ ವಾಯು ವಿಹಾರ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ನಡೆದಿರುವ ಘಟನೆ ಇದು.

ಮಹಿಳೆಯ ಹೆಸರು ಶಾರದಾ ಕುರುಂದವಾಡ್ ಮತ್ತು ಅವರ ವಯಸ್ಸು 62 ವರ್ಷ. ಹೊಸಪೇಟೆಯ ಮದಕರಿ ಶಾಲೆಯ ಮುಂಭಾಗದಿಂದ ಅವರು ಪತಿಯ ಜೊತೆ ಮನೆಗೆ ಹೋಗುವಾಗ ಬೈಕ್ ಮೇಲೆ ಇಬ್ಬರು ಸರಗಳ್ಳರು ಅವರ ಮಾಂಗಲ್ಯ ಸರ ಎಳೆದುಕೊಂಡು ಪರಾರಿಯಾಗುತ್ತಾರೆ. ಪಿಲಿಯನ್ ರೈಡರ್ ಆಗಿರುವ ಅಧಮ ಸರ ಎಳೆದ ರಭಸಕ್ಕೆ ಶಾರದಾ ಧೊಪ್ಪಂತ ನೆಲಕ್ಕೆ ಬೀಳುತ್ತಾರೆ. ವಯಸ್ಸಾಗಿರುವ ಅವರಿಗೆ ನೆಲಕ್ಕೆ ಬಿದ್ದಾಗ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಹೇಗೆ ಮಾರಾಯ್ರೇ?

ಶಾಕ್ ಗೊಳಗಾಗಿರುವ ಅವರ ಯಜಮಾನರಿಗೆ ಹೇಗೆ ರಿಯಾಕ್ಟ್ ಮಾಡಬೇಕು ಅನ್ನೋದು ಕೂಡ ಗೊತ್ತಾಗುವುದಿಲ್ಲ. ಅವರ ಗಮನವೆಲ್ಲ ನೆಲಕ್ಕೆ ಬಿದ್ದಿರುವ ತಮ್ಮ ಪತ್ನಿಯ ಮೇಲಿದೆ. ನಂತರ ಸಾವರಿಸಿಕೊಂಡು ಅವರು ಕೂಗುತ್ತಾರಾದರೂ ಕಳ್ಳರು ಅಷ್ಟರಲ್ಲಿ ಪರಾರಿಯಾಗಿ ಬಿಟ್ಟಿರುತ್ತಾರೆ. ಮಾಂಗಲ್ಯ ಸರ ಬಿಡಿ, ಪೊಲೀಸರು ಸರಗಳ್ಳರನ್ನು ಹಿಡಿದು ಶಾರದಾ ಅವರಿಗೆ ವಾಪಸ್ಸು ತಲುಪಿಸುತ್ತಾರೆ. ಆದರೆ ಅವರಿಗೆ ಹೆಚ್ಚು ಕಡಿಮೆ ಏನಾದರೂ ಆಗಿದ್ದರೆ?

ಅದಕ್ಕೆ ನಾವು ಹೇಳಿದ್ದು ಸರಗಳ್ಳರಲ್ಲಿ ಮಾನವೀಯತೆ ಇರಲಾರದು ಅಂತ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 06, 2022 05:54 PM