ರಭಸವಾಗಿ ಹರಿಯುವ ವರದಾ ನದಿ ನೀರಿನಲ್ಲಿ ವೃದ್ಧನ ಹುಚ್ಚಾಟ; ಮೇಲಿಂದ ಜಿಗಿದು ಸ್ವಿಮ್ಮಿಂಗ್
ಕೃಷ್ಣಮೃಗ ಸಂಗೂರು ಗ್ರಾಮದ ಬಳಿ ಇರುವ ವರದಾ ನದಿಗೆ ಆಕಸ್ಮಿಕವಾಗಿ ಬಿದ್ದು ನೀರಿನಿಂದ ಹೊರಬರಲು ಪರದಾಡುತ್ತಿತ್ತು. ರಭಸವಾಗಿ ಹರಿಯುವ ನೀರಿನಲ್ಲಿ ದಡ ಸೇರಲಾಗದೆ ನೀರಿನ ಸೆಳೆತದೊಂದಿಗೆ ಕೊಚ್ಚಿ ಹೋಗಿದೆ.
ಹಾವೇರಿ ಜಿಲ್ಲೆಯಲ್ಲಿ ಮಳೆ (Rain) ಮುಂದುವರಿದಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಈ ನಡುವೆ ಹಾಲಗಿ ಗ್ರಾಮದ ಬಳಿ ಭರಪೂರ ಹರಿತ್ತಿರುವ ವರದಾ ನದಿಯಲ್ಲಿ ವೃದ್ಧರೊಬ್ಬರು ಹುಚ್ಚಾಟ ಮೆರೆದಿದ್ದಾರೆ. ನದಿ ಬಳಿ ಇರುವ ಸಣ್ಣ ಕಟ್ಟೆಯ ಮೇಲಿಂದ ಜಿಗಿದು ನದಿ ನೀರಲ್ಲಿ ಸ್ವಿಮ್ಮಿಂಗ್ (Swimming) ಮಾಡಿದ್ದಾರೆ. ಬಳಿಕ ಸೇತುವೆ ಮೇಲಿನ ಕಬ್ಬಿಣದ ಸಹಾಯದಿಂದ ಈಜಿ ವೃದ್ಧ ದಡ ಸೇರಿದ್ದಾರೆ. ಇನ್ನು ನದಿ ನೀರಿನಲ್ಲಿ ಕೃಷ್ಣಮೃಗ ಸಿಲುಕಿ ಪರದಾಡಿದೆ. ಕೃಷ್ಣಮೃಗ ಸಂಗೂರು ಗ್ರಾಮದ ಬಳಿ ಇರುವ ವರದಾ ನದಿಗೆ ಆಕಸ್ಮಿಕವಾಗಿ ಬಿದ್ದು ನೀರಿನಿಂದ ಹೊರಬರಲು ಪರದಾಡುತ್ತಿತ್ತು. ರಭಸವಾಗಿ ಹರಿಯುವ ನೀರಿನಲ್ಲಿ ದಡ ಸೇರಲಾಗದೆ ನೀರಿನ ಸೆಳೆತದೊಂದಿಗೆ ಕೊಚ್ಚಿ ಹೋಗಿದೆ.