Video: ನೀರಿನ ಜತೆ ರಸ್ತೆಗೆ ಬಂದ ಮೀನುಗಳು, ಬಲೆ ಹಾಕಿ ಮೀನು ಹಿಡಿಯಲು ಜನರ ಪೈಪೋಟಿ

|

Updated on: Jul 20, 2024 | 11:30 AM

ಎಲ್ಲ ಕಡೆ ಮಳೆ ಮಳೆ, ಎಲ್ಲ ನದಿಗಳು ತುಂಬಿ ಹರಿಯುತ್ತಿದೆ. ಇನ್ನು ಕೆಲವು ಕಡೆ ಮನೆ, ಗುಡ್ಡಗಳು ಕುಸಿದು ದೊಡ್ಡ ಮಟ್ಟ ಆಸ್ತಿ, ಪ್ರಾಣ ಹಾನಿಗಳು ಆಗಿದೆ. ಇದರ ನಡುವೆ ಆಂಧ್ರಪ್ರದೇಶದಲ್ಲಿ ನೀರಿನ ಜತೆಗೆ ಮೀನುಗಳು ಕೂಡ ರಸ್ತೆಗೆ ಬಂದಿದೆ. ಜನರು ಬಲೆ ಹಾಕಿ ಮೀನು ಹಿಡಿಯುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ವಿಡಿಯೋ

ದೇಶದಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಗಾಳಿ, ಮಳೆಯಿಂದ ಅನೇಕ ಕಡೆ ದೊಡ್ಡ ಅನಾಹುತಗಳೇ ಆಗಿದೆ. ಕರ್ನಾಟಕ ಸೇರಿದಂತೆ ದೇಶ ಅನೇಕ ಕಡೆ ಮಳೆಯಿಂದ ದೊಡ್ಡ ಪರಿಣಾಮಗಳನ್ನು ಎದುರಿಸಲಾಗುತ್ತಿದೆ. ಇದರ ನಡುವೆ ಆಂಧ್ರಪ್ರದೇಶದ ಅಂಬೇಡ್ಕರ್ ಕಾನ್ಸೀಮೆ ಜಿಲ್ಲೆಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ನೀರಿನ ಜತೆಗೆ ಮೀನುಗಳೂ ರಸ್ತೆಗೆ ಬಂದಿವೆ. ಆಂಧ್ರದಲ್ಲಿ ನಿರಂತರ ಮಳೆಯಿಂದ ರಸ್ತೆಗಳು ಸಂಪೂರ್ಣ ಜಲಮಯವಾಗಿದ್ದು, ಸೇತುವೆಗಳ ಮೇಲೆ ನೀರು ತುಂಬಿಕೊಂಡು ರಸ್ತೆಗಳಿಗೆ ನೀರು ಬಂದಿದೆ. ಇದರ ಜತೆಗೆ ಮೀನುಗಳು ಕೂಡ ರಸ್ತೆಗೆ ಬಂದಿದ್ದು, ಇದೀಗ ಜನರು ರಸ್ತೆಗೆ ಬಂದಿರುವ ಮೀನುಗಳನ್ನು ಹಿಡಿಯುತ್ತಿದ್ದಾರೆ. ಕೆಲವೊಂದು ಕಡೆ ಬಲೆ ಹಾಕಿ ಮೀನು ಹಿಡಿಯುತ್ತಿರುವ ದೃಶ್ಯ ನೋಡಬಹುದು. ಜನ ರಸ್ತೆಯಲ್ಲಿ ಹೋಗುತ್ತಿರುವ ದೊಡ್ಡ ದೊಡ್ಡ ಮೀನುಗಳನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಈ ಬಗ್ಗೆ ಒಂದು ವಿಡಿಯೋ ಇಲ್ಲಿದೆ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us on