ಬೆಂಗಳೂರು: ಪ್ರತಿಬಾರಿ ಮಳೆಯಿಂದ ತೊಂದರೆ, ಸಚಿವ ಕೃಷ್ಣ ಭೈರೇಗೌಡ ಎದುರು ಅಸಹನೆ, ಆಕ್ರೋಶ ವ್ಯಕ್ತಪಡಿಸಿದ ಸಹಕಾರನಗರ ನಿವಾಸಿಗಳು

|

Updated on: Nov 09, 2023 | 11:57 AM

ಚರಂಡಿಗಳಿಂದ ಕೊಳಚೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳ ಕಾರು ಮತ್ತು ಬೈಕ್ ಗಳು ಕೆಟ್ಟುಹೋಗುತ್ತಿವೆಯಂತೆ. ಒಬ್ಬ ಮಹಿಳೆ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಧೋರಣೆಯನ್ನು ಸಚಿವರ ಗಮನಕ್ಕೆ ತಂದರು. ನಿವಾಸಿಗಳ ದೂರನ್ನು ತಾಳ್ಮೆಯಿಂದ ಆಲಿಸಿದ ಕೃಷ್ಣ ಭೈರೇಗೌಡ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಬೆಂಗಳೂರು: ಇದು ಕೇವಲ ಬೆಂಗಳೂರಿನ ಸಹಕಾರನಗರದ (Sahakaranagar) ಸಮಸ್ಯೆ ಒಂದೇ ಅಲ್ಲ, ನಗರದ ಹಲವರು ಪ್ರದೇಶಗಳ ಬಡಾವಣೆಗಳಲ್ಲಿ ಪರಿಹಾರ ಕಾಣದ ಸಮಸ್ಯೆ ಇದು. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸಹಕಾರನಗರದಲ್ಲಿರುವ ಮನೆಗಳಲ್ಲಿ ನೀರು ನುಗ್ಗಿ ಎಂದಿನಂತೆ ಅವಾಂತರ ಸೃಷ್ಟಿಸಿದೆ. ಇಲ್ಲಿನ ನಿವಾಸಿಗಳು ಪ್ರತಿ ಮಳೆಗಾಲದಲ್ಲಿ ತೊಂದರೆಗೊಳಗಾಗುತ್ತಿದ್ದು ಬಿಬಿಎಂಪಿ ಕಚೇರಿಗೆ (BBMP office) ಹತ್ತು ಹಲವು ಬಾರಿ ಸುತ್ತಿದರೂ ಕೇವಲ ಸಂಬಳ ಮತ್ತು ಗಿಂಬಳಕ್ಕಾಗಿ ಕೆಲಸ ಮಾಡುವ ಅಧಿಕಾರಿಗಳಿಂದ ಪರಿಹಾರ ಒದಗಿಸುವುದು ಸಾಧ್ಯವಾಗಿಲ್ಲ. ಹಾಗಾಗೇ, ನಿವಾಸಿಗಳು ತಮ್ಮ ಕ್ಷೇತ್ರದ ಪ್ರತಿನಿಧಿ ಹಾಗೂ ಕಂದಾಯ ಸಚಿವರೂ ಅಗಿರುವ ಕೃಷ್ಣ ಭೈರೇಗೌಡ (Krishna Byre Gowda) ಅವರ ಎದುರು ಹತಾಶೆ, ಕೋಪ ಮತ್ತು ಅಸಹನೆಯಿಂದ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಚರಂಡಿಗಳಿಂದ ಕೊಳಚೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳ ಕಾರು ಮತ್ತು ಬೈಕ್ ಗಳು ಕೆಟ್ಟುಹೋಗುತ್ತಿವೆಯಂತೆ. ಒಬ್ಬ ಮಹಿಳೆ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಧೋರಣೆಯನ್ನು ಸಚಿವರ ಗಮನಕ್ಕೆ ತಂದರು. ನಿವಾಸಿಗಳ ದೂರನ್ನು ತಾಳ್ಮೆಯಿಂದ ಆಲಿಸಿದ ಕೃಷ್ಣ ಭೈರೇಗೌಡ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ