ಆರ್ ಆರ್ ನಗರದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಯಡಿಯೂರಪ್ಪಗೆ ತೋರಿಸಿದ ಶಾಸಕ ಮುನಿರತ್ನ
ಕೆರೆ ಅಭಿವೃದ್ಧಿ ಕಾಮಗಾರಿಗಾಗಿ ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದ ರೂ. 42 ಕೋಟಿ ಅನುದಾನವನ್ನು ಈಗಿನ ಸರ್ಕಾರ ಬೇರೆ ಕಾಮಗಾರಿಗಳಿಗೆ ಡೈವರ್ಟ್ ಮಾಡಿದೆ ಎಂದು ಹೇಳಿದ ಮುನಿರತ್ನ ಕೆರೆ ನಡುಭಾಗದಲ್ಲಿ ರಸ್ತೆ ಇದೆಯೆಂಬ ಸಬೂಬು ನೀಡಲಾಗಿದೆ ಎಂದರು. ಮಾಜಿ ಸಚಿವ ಹಾಗೂ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಮತ್ತು ಇತರ ಸ್ಥಳೀಯ ಮುಖಂಡರು ಯಡಿಯೂರಪ್ಪ ಮತ್ತು ಮುನಿರತ್ನ ಅವರೊಂದಿಗಿದ್ದರು.
ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ಇಂದು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಬಂದ ನಂತರ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಮಾಜು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ (BS Yediyurappa) ತೋರಿಸುವಾಗ ಉಗ್ರ ರೂಪ ತಳೆದಿದ್ದರು. ಕೆರೆ ಹೂಳೆತ್ತುವ ಕೆಲಸ, ಪಾರ್ಕ್ ನಿರ್ಮಾಣ (park construction) ರಸ್ತೆ ಕಾಮಗಾರಿ ಮೊದಲಾದವುಗಳನ್ನೆಲ್ಲ ಯಡಿಯೂರಪ್ಪನವರಿಗೆ ವಿವರಿಸುವಾಗ ಅವರ ಮುಖದಲ್ಲಿ ಕೋಪ ವ್ಯಕ್ತವಾಗುತ್ತಿದ್ದುದನ್ನು ದೃಶ್ಯಗಳಲ್ಲಿ ಗಮನಿಸಬಹುದು. ಕೆರೆ ಅಭಿವೃದ್ಧಿ ಕಾಮಗಾರಿಗಾಗಿ ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದ ರೂ. 42 ಕೋಟಿ ಅನುದಾನವನ್ನು ಈಗಿನ ಸರ್ಕಾರ ಬೇರೆ ಕಾಮಗಾರಿಗಳಿಗೆ ಡೈವರ್ಟ್ ಮಾಡಿದೆ ಎಂದು ಹೇಳಿದ ಮುನಿರತ್ನ ಕೆರೆ ನಡುಭಾಗದಲ್ಲಿ ರಸ್ತೆ ಇದೆಯೆಂಬ ಸಬೂಬು ನೀಡಲಾಗಿದೆ ಎಂದರು. ಮಾಜಿ ಸಚಿವ ಹಾಗೂ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಮತ್ತು ಇತರ ಸ್ಥಳೀಯ ಮುಖಂಡರು ಯಡಿಯೂರಪ್ಪ ಮತ್ತು ಮುನಿರತ್ನ ಅವರೊಂದಿಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ