Video blackmail: ಮೊಬೈಲ್​ ಕಾಲ್​​ ಅಶ್ಲೀಲ ವಿಡಿಯೋ ಎಡಿಟ್ ಮಾಡಿ ವರ್ಷದಿಂದ ನಿರಂತರ ಕಿರುಕುಳ, ಹಟ್ಟಿ ಚಿನ್ನದ ಗಣಿ ಉದ್ಯೋಗಿಗೆ ಬ್ಲಾಕ್​ಮೇಲ್!

ಸೈಬರ್ ಕ್ರಿಮಿಗಳ ನಿರಂತರ ಟಾರ್ಚರ್​ನಿಂದ ಮಹೇಂದ್ರ ಅದೆಷ್ಟೋ ಬಾರಿ ಮನೆಗೆ ಹೋಗದ ಸ್ಥಿತಿ ಕೂಡ ನಿರ್ಮಾಣವಾಗಿದೆಯಂತೆ..ಹೀಗಾಗಿ ಮೊಬೈಲ್​ ಫೋನ್​ಗಳಿಗೆ ಬರೋ ಲಿಂಕ್​ಗಳ ಬಗ್ಗೆ ಎಚ್ಚರವಿರಲಿ ಅಂತ ಜನರಲ್ಲಿ ಮನವಿ ಮಾಡ್ತಿದ್ದಾರೆ.. ಏನೊ ಹೊಸ ಲಿಂಕ್​ ಅಂತ ಕ್ಲಿಕ್ ಮಾಡಿ ಫಜೀತಿಗೆ ಸಿಕ್ಕಿಹಾಕಿಕೋಳ್ಬೇಡಿ ಅಂತಿದ್ದಾರೆ.

Video blackmail: ಮೊಬೈಲ್​ ಕಾಲ್​​ ಅಶ್ಲೀಲ ವಿಡಿಯೋ ಎಡಿಟ್ ಮಾಡಿ ವರ್ಷದಿಂದ ನಿರಂತರ ಕಿರುಕುಳ, ಹಟ್ಟಿ ಚಿನ್ನದ ಗಣಿ ಉದ್ಯೋಗಿಗೆ ಬ್ಲಾಕ್​ಮೇಲ್!
ಮೊಬೈಲ್​ ಕಾಲ್​​ ಅಶ್ಲೀಲ ವಿಡಿಯೋ ಎಡಿಟ್ ಮಾಡಿ ವರ್ಷದಿಂದ ನಿರಂತರ ಕಿರುಕುಳ
Follow us
ಭೀಮೇಶ್​​ ಪೂಜಾರ್
| Updated By: ಸಾಧು ಶ್ರೀನಾಥ್​

Updated on: Nov 09, 2023 | 1:05 PM

ಸೈಬರ್ ಕ್ರಿಮಿಗಳ (Cyber crime) ಜಾಲಕ್ಕೆ ಬಿದ್ರೆ ನಿಮ್ ಕಥೆ ಏನಾಗತ್ತೆ ಅನ್ನೋದಕ್ಕೇ ಈ ಪ್ರಕರಣವೇ ಸಾಕ್ಷಿ.. ಫೋನ್​ಗೆ ಬಂದಿದ್ದ ಒಂದೇ ಒಂದು ಲಿಂಕ್ ಕ್ಲಿಕ್ ಮಾಡಿದ್ದ ಆ ವ್ಯಕ್ತಿ ಈಗ ಜನರೆದುರು ತಲೆ ಎತ್ತಿಕೊಂಡು ತಿರುಗಾಡೋಕೆ ಆಗ್ತಿಲ್ಲ..ಆ ಬಗ್ಗೆ ಸ್ಟೋರಿ ಇಲ್ಲಿದೆ ನೋಡಿ. ಇದು ಹಟ್ಟಿ ಚಿನ್ನದ ಗಣಿ..ರಾಜ್ಯದಲ್ಲಿ ಆಕ್ಟಿವ್ ಆಗಿರೋ ಚಿನ್ನದ ಗಣಿಯಿದು..ಇದು ರಾಯಚೂರು (Raichur) ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿದೆ..ಇದೇ ಚಿನ್ನದ ಗಣಿಯಲ್ಲಿ ಸಿನಿಯರ್ ಗೇಜ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದ ಹಿರಿಯ ಉದ್ಯೋಗಿ (hatti gold employee) ಮಹೇಂದ್ರ ಕುರ್ಡಿ ಅನ್ನೋರ ಮೊಬೈಲ್​ ಫೋನ್​ಗೆ ಅದೊಂದು ಲಿಂಕ್ (morphed video) ಬಂದಿತ್ತು.

ಸಾಮಾನ್ಯದಂತೆ ಮಹೇಂದ್ರ ಆ ಲಿಂಕ್​ ಕ್ಲಿಕ್ ಮಾಡಿದ್ದ.. ನಂತರ ಆ ಲಿಂಕ್​ನಿಂದ ಯುವತಿಯರ ಜೊತೆ ಸಂಭಾಷಣೆ,ವಿಡಿಯೋ ಕಾಲ್ ಶುರುವಾಗಿದ್ವಂತೆ..ಆಗ ಮಹೇಂದ್ರ ಅವಾಯ್ಡ್ ಮಾಡಿದ್ದಾರೆ. ಆದ್ರೂ ಅಶ್ಲೀಲ ಸ್ಥಿತಿಯಲ್ಲಿರೊ ಮಹಿಳೆ ವಿಡಿಯೋ ಕಾಲ್ ಮಾಡಿರೋ ರೀತಿ ಲಿಂಕ್​ ಗಳು ಮಾತ್ರ ಬರುತ್ತಲೇ ಇದ್ವಂತೆ.

ಮಹೇಂದ್ರ ಆ ವಿಡಿಯೋ ಕಾಲ್​ನಲ್ಲಿ ಮಾತನಾಡಿದಾಗ ಯುವಕನೊಬ್ಬ ಸಂಭಾಷಣೆ ನಡೆಸಿದ್ದನಂತೆ..ಇದಾದ ಬಳಿಕ ಒಂದು ವಿಡಿಯೋ ಮಹೇಂದ್ರ ಅವ್ರ ಫೋನ್​ಗೆ ಬಂದಿತ್ತು..ಅದ್ರಲ್ಲಿ ಮಹೇಂದ್ರ ವಿಡಿಯೋ ಕಾಲ್​ನಲ್ಲಿರೊ ನಗ್ನ ಸ್ಥಿತಿಯಲ್ಲಿರೊ ಮಹಿಳೆ ಜೊತೆ ಮಾತನಾಡಿದ ಹಾಗೆ,ಬಳಿಕ ಆ ಅಶ್ಲೀಲ ವರ್ತನೆಗೆ ಪ್ರತಿಕ್ರಿಯೆ ನೀಡದ ಹಾಗೆ ವಿಡಿಯೋ ಇತ್ತಂತೆ.. ಅದನ್ನ ವೈರಲ್ ಮಾಡಲಾಗುತ್ತೆ, ಇಲ್ದಿದ್ರೆ ಹಣ ಕೊಡಿ ಅಂತ ಸೈಬರ್​ ಕ್ರಿಮಿಗಳು ಮಹೇಂದ್ರರ ದಂಬಾಲು ಬಿದ್ದಿದ್ರು.. ದುಷ್ಕರ್ಮಿಗಳು ಎಷ್ಟೇ ಟಾರ್ಚರ್ ಕೊಟ್ರು ಅವ್ರು ನಯಾ ಪೈಸೆ ಬಿಚ್ಚಿರ್ಲಿಲ್ಲ..ಆಗ ಆ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದಾರಂತೆ..

ಹೌದು..ಹೀಗೆ ಸೈಬರ್ ಕಿರಾತಕರ ಚಕ್ರವ್ಯೂಹಕ್ಕೆ ಸಿಲುಕಿರೊ ಮಹೇಂದ್ರ ತಾನು ಆ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿಲ್ಲ..ಅದನ್ನ ಆ ರೀತಿ ಎಡಿಟ್ ಮಾಡಿದ್ದಾರೆ..ಹಣಕ್ಕಾಗಿ ಕಳೆದೊಂದು ವರ್ಷದ ಹಿಂದೆ ಈ ರೀತಿ ಮಾಡಲಾಗಿತ್ತು..ನಂತರ ಹಟ್ಟಿ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ರಂತೆ..ಆ ಬಳಿಕ ಆ ವಿಡಿಯೋ ಕೇಸ್ ಅಷ್ಟಕ್ಕೇ ನಿಂತಿತ್ತು..ಇತ್ತೀಚೆಗೆ ಮತ್ತೆ ಅದೇ ಹಳೆ ವಿಡಿಯೋವನ್ನ ವೈರಲ್ ಮಾಡಿ, ಕುಟುಂಬಸ್ಥರಿಗೂ ಕಳುಹಿಸಲಾಗ್ತಿದೆ..ಇದರಿಂದ ಮನನೊಂದಿದ್ದೇನೆ ಅಂತ ಮಹೇಂದ್ರ ಅಳಲನ್ನ ತೋಡಿಕೊಳ್ತಿದ್ದಾರೆ..

ಇಲ್ಲಿ ಇನ್ನೊಂದು ವಿಷ್ಯ ಇದೆ..ಈ ಮಹೇಂದ್ರ ಹಟ್ಟಿ ಪಟ್ಟಣದ ಖಾಸಗಿ ಶಾಲಾ ಸಂಸ್ಥೆಯಲ್ಲಿ ಖಜಾಂಚಿ ಆಗಿದ್ರು..ಇತ್ತೀಚೆಗೆ ವೈರಲ್ ಆಗ್ತಿರೊ ವಿಡಿಯೋದಲ್ಲಿ ಮಹೇಂದ್ರ ಅನ್ನೋ ಶಿಕ್ಷಕ ಆ ಖಾಸಗಿ ಶಾಲೆ ಹೆಸರು ಉಲ್ಲೇಖಿಸಿ ಆ ಶಾಲೆಯಲ್ಲಿ ಈ ರೀತಿ ಅಸಭ್ಯ ವರ್ತನೆ ತೋರಿದ್ದಾನೆ ಅಂತ ವೈರಲ್ ಮಾಡಲಾಗ್ತಿದೆ..ಹೀಗಾಗಿ ಈ ಬಗ್ಗೆ ಆ ಖಾಸಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷರೇ ಖುದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ತಯಾರಿಸಿ ಖಾಸಗಿ ಚಾನೆಲ್​ ವರದಿಗಾರನಿಂದ ಬಿಜೆಪಿ ಕಾರ್ಯಕರ್ತೆಗೆ ಬ್ಲ್ಯಾಕ್ ‌ಮೇಲ್

ಅದು ನಮ್ಮ ಶಾಲೆಯಲ್ಲಿ ಘಟನೆ ನಡೆದಿಲ್ಲ,ಅದು ಹಟ್ಟಿ ಚಿನ್ನದ ಗಣಿಯಲ್ಲಿ ನಡೆದಿದೆ..ನಮ್ಮ ಶಾಲೆ ಹೆಸರು ಉಲ್ಲೇಖಿಸಿ ವಿಡಿಯೋ ವೈರಲ್ ಮಾಡಲಾಗ್ತಿದೆ..ವಿಡಿಯೋ ವೈರಲ್ ಬಳಿಕ ಖಜಾಂಜಿ ಸ್ಥಾನಕ್ಕೆ ಮಹೇಂದ್ರರಿಂದ ರಾಜೀನಾಮೆ ಪಡೆಯಲಾಗಿದೆ.. ನಮಗೂ ಅವರಿಗೂ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಅಂತ ಆ ಖಾಸಗಿ ಶಾಲೆ ಸಂಸ್ಥೆಯ ಅಧ್ಯಕ್ಷ ನರಸಪ್ಪ ಯಾದವ್ ಸ್ಪಷ್ಟಪಡಿಸಿದ್ದಾರೆ.

ಇತ್ತ ಸೈಬರ್ ಕ್ರಿಮಿಗಳ ನಿರಂತರ ಟಾರ್ಚರ್​ನಿಂದ ಮಹೇಂದ್ರ ಅದೆಷ್ಟೋ ಬಾರಿ ಮನೆಗೆ ಹೋಗದ ಸ್ಥಿತಿ ಕೂಡ ನಿರ್ಮಾಣವಾಗಿದೆಯಂತೆ..ಹೀಗಾಗಿ ಮೊಬೈಲ್​ ಫೋನ್​ಗಳಿಗೆ ಬರೋ ಲಿಂಕ್​ಗಳ ಬಗ್ಗೆ ಎಚ್ಚರವಿರಲಿ ಅಂತ ಜನರಲ್ಲಿ ಮನವಿ ಮಾಡ್ತಿದ್ದಾರೆ..ನೀವು ಕೂಡ ಹುಷಾರಾಗಿರಿ,ಏನೊ ಹೊಸ ಲಿಂಕ್​ ಅಂತ ಕ್ಲಿಕ್ ಮಾಡಿ ಫಜೀತಿಗೆ ಸಿಕ್ಕಿಹಾಕಿಕೋಳ್ಬೇಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ