Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ವಿಡಿಯೋ ತಯಾರಿಸಿ ಖಾಸಗಿ ಚಾನೆಲ್​ ವರದಿಗಾರನಿಂದ ಬಿಜೆಪಿ ಕಾರ್ಯಕರ್ತೆಗೆ ಬ್ಲ್ಯಾಕ್ ‌ಮೇಲ್

ಬಾಗಲಕೋಟೆಯ ಖಾಸಗಿ ಸುದ್ದಿ ವಾಹನಿ ವರದಿಗಾರ ಎಂದು ಹೇಳಿಕೊಂಡು ತಿರುಗಾಡುವ ಬಂದೆನವಾಜ್ ಸರಕಾವಸ್ ಜಮಖಂಡಿ ‌ಬಿಜೆಪಿ ನಗರಮಂಡಳ ಅಧ್ಯಕ್ಷೆ, ಖಾಸಗಿ ಶಾಲಾ ಶಿಕ್ಷಕಿ ಗೀತಾ ಸೂರ್ಯವಂಶಿ ಅವರ ಅಶ್ಲೀಲ ವಿಡಿಯೊ ತಯಾರಿಸಿದ್ದಾನೆ.

ಅಶ್ಲೀಲ ವಿಡಿಯೋ ತಯಾರಿಸಿ ಖಾಸಗಿ ಚಾನೆಲ್​ ವರದಿಗಾರನಿಂದ ಬಿಜೆಪಿ ಕಾರ್ಯಕರ್ತೆಗೆ ಬ್ಲ್ಯಾಕ್ ‌ಮೇಲ್
ಸಾಂದರ್ಭಿಕ ಚಿತ್ರ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ

Updated on:Nov 08, 2023 | 10:29 AM

ಬಾಗಲಕೋಟೆ ನ.08: ಖಾಸಗಿ ಸುದ್ದಿ ವಾಹಿನಿಯ (Privet Channel) ವರದಿಗಾರನೊಬ್ಬ (Reporter) ಅಶ್ಲೀಲ ವಿಡಿಯೋ ತಯಾರಿಸಿ ಬಿಜೆಪಿ ಕಾರ್ಯಕರ್ತೆಗೆ (BJP Activist) ಬ್ಲ್ಯಾಕ್ ‌ಮೇಲ್ (Blackmail) ಮಾಡಿದ್ದಾನೆ. ಪ್ರಕರಣ ಸಂಬಂಧ ಜಮಖಂಡಿ (Jamkhandi) ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂದೆನವಾಜ್ ಸರಕಾವಸ್ ಎಂಬುವವನು ಕೃತ್ಯ ಎಸಗಿದ್ದಾನೆ. ಖಾಸಗಿ ಸುದ್ದಿ ವಾಹನಿ ವರದಿಗಾರ ಎಂದು ಹೇಳಿಕೊಂಡು ತಿರುಗಾಡುವ ಬಂದೆನವಾಜ್ ಸರಕಾವಸ್ ಜಮಖಂಡಿ ‌ಬಿಜೆಪಿ ನಗರಮಂಡಳ ಅಧ್ಯಕ್ಷೆ, ಖಾಸಗಿ ಶಾಲಾ ಶಿಕ್ಷಕಿ ಗೀತಾ ಸೂರ್ಯವಂಶಿ ಅವರ ಅಶ್ಲೀಲ ವಿಡಿಯೊ ತಯಾರಿಸಿದ್ದಾನೆ.

ಗೀತಾ ಸೂರ್ಯವಂಶಿ ಅವರ ಭಾವಚಿತ್ರದ ಕಣ್ಣಿಗೆ ಕಪ್ಪು ಪಟ್ಟಿ ಅಂಟಿಸಿದ್ದಾನೆ. ಬಳಿಕ ಅವರದ್ದೇ ಅಶ್ಲೀಲ ವಿಡಿಯೋ ಎಂಬಂತೆ ಬಿಂಬಿಸಲು ಯಾವುದೋ ಪೋರ್ನ್ ‌ದೃಶ್ಯವನ್ನು ಎಡಿಟ್​ ಮಾಡಿ ವಿಡಿಯೋ ತಯಾರಿಸಿದ್ದಾನೆ. ಅದಕ್ಕೆ ಬಿಜೆಪಿ ಕಾರ್ಯಕರ್ತೆಯ ರಾಸಲೀಲೆ ಎಂದು ಬರಹ ಹಾಕಿದ್ದು, ಎಮ್ಮೊ‌ ಎಮ್ಮೊ‌ ನೋಡ್ದೆ ನೋಡ್ದೆ ಹಾಡು ಅಳವಡಿಸಿದ್ದಾನೆ. ಈ ಸಂಬಂಧ ಗೀತಾ ಸೂರ್ಯವಂಶಿ ಅವರು ಜಮಖಂಡಿ ‌ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಯುವಕರೊಂದಿಗೆ ಪ್ರೀತಿಯ ನಾಟಕ; ವಿಷಯ ತಿಳಿದ ಪ್ರಿಯಕರರಿಂದ ಪ್ರೀಯತಮೆಗೆ ಬ್ಲ್ಯಾಕ್​​ಮೇಲ್, ಯುವತಿ ಆತ್ಮಹತ್ಯೆ

“ನನ್ನ ಹತ್ತಿರ‌‌ ನಿಮ್ಮ ರಾಸಲೀಲೆ ವಿಡಿಯೋ ಇದೆ. ನಾನು ಖಾಸಗಿ ಸುದ್ದಿ ವಾಹಿನಿ ವರದಿಗಾರ. ನೀವು ನನಗೆ ಭೇಟಿಯಾಗಬೇಕು. ನಾವು‌ ನೀವು ಕೂಡಿ‌ ಸರಿ‌ಮಾಡಿಕೊಳ್ಳೋಣ. ಸ್ವಲ್ಪ ದುಡ್ಡು ಖರ್ಚಾಗುತ್ತದೆ. ಖರ್ಚು ಮಾಡಲು ಸಿದ್ದ ಇರದೆ ಇದ್ದರೇ ವಿಡಿಯೋ ವೈರಲ್‌ ಮಾಡಿ ನಿಮ್ಮ ಮಾನ ಮರ್ಯಾದೆ ತೆಗೆಯುತ್ತೇನೆ. ಹಣ ನೀಡಿ ಮಾಡಿಕೊಂಡು ಸರಿ‌ಮಾಡಿಕೊಳ್ಳಿ‌” ಎಂದು ಕರೆ ಮಾಡಿ ಬ್ಲ್ಯಾಕ್ ‌ಮೇಲ್‌‌ ಮಾಡಿದ್ದಾನೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:15 am, Wed, 8 November 23