ಇಬ್ಬರು ಯುವಕರೊಂದಿಗೆ ಪ್ರೀತಿಯ ನಾಟಕ; ವಿಷಯ ತಿಳಿದ ಪ್ರಿಯಕರರಿಂದ ಪ್ರೀಯತಮೆಗೆ ಬ್ಲ್ಯಾಕ್​​ಮೇಲ್, ಯುವತಿ ಆತ್ಮಹತ್ಯೆ

ಆಕೆ ಇತ್ತಿಚೀಗೆ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮುಗಿಸಿ, ಈಗ ತಾನೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಆದ್ರೆ, ಕಾಲೇಜಿನಲ್ಲಿದ್ದಾಗ ಒಬ್ಬ, ಇನ್​ಸ್ಟಾಗ್ರಾಮ್​ನಲ್ಲಿ ಇನ್ನೊಬ್ಬನೆಂದು ಒಂದೇ ಸಮಯದಲ್ಲಿ ಇಬ್ಬಿಬ್ಬರ ಯುವಕರನ್ನು ಪ್ರೀತಿಸಿ, ಅವರ ಜೊತೆ ಮೋಜು ಮಸ್ತಿ ಎಂದು ರಾಜಧಾನಿ ಬೆಂಗಳೂರಿನಲ್ಲಿ ತಿರುಗಾಡಿದ್ದಾಳೆ. ಕೊನೆಗೆ ಪ್ರೀತಿಸಿದವಳ ಮೋಸ ಕಂಡು ದಂಗಾದ ಯುವಕರು, ಪ್ರೀಯತಮೆಗೆ ಬ್ಲ್ಯಾಕ್​​ಮೇಲ್ ಮಾಡಿ ಮಾನಸಿಕ ಹಿಂಸೆ ನೀಡಿದ ಕಾರಣ ಯುವತಿ ಸಾವಿನ ಮನೆ ಸೇರಿದ್ದಾಳೆ.

ಇಬ್ಬರು ಯುವಕರೊಂದಿಗೆ ಪ್ರೀತಿಯ ನಾಟಕ; ವಿಷಯ ತಿಳಿದ ಪ್ರಿಯಕರರಿಂದ ಪ್ರೀಯತಮೆಗೆ ಬ್ಲ್ಯಾಕ್​​ಮೇಲ್, ಯುವತಿ ಆತ್ಮಹತ್ಯೆ
ಮೃತ ಯುವತಿ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 29, 2023 | 7:08 AM

ಚಿಕ್ಕಬಳ್ಳಾಪುರ: ಆಕೆಯ ಹೆಸರು ಜಿ ನಿಹಾರಿಕಾ(22) ಆಂಧ್ರದ ಅನಂತಪುರ ಜಿಲ್ಲೆಯ ಧರ್ಮಾವರಂ ನಗರದ ಸತ್ಯ ಸಾಯಿ ಬಡಾವಣೆಯವರು. ರಾಜಧಾನಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್(Engineering) ಕಾಲೇಜಿನಲ್ಲಿ ಬಿ.ಟೆಕ್ ಮುಗಿಸಿ ಬೆಂಗಳೂರಿ(Bengaluru)ನಲ್ಲಿಯೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಜೂ.23ನೇ ತಾರೀಖು ಕೆಲಸಕ್ಕೆ ಹೋದವಳು ವಾಪಸ್ ಪಿ.ಜಿಗೆ ಬಂದು ತವರೂರು ಆಂದ್ರದ ಧರ್ಮಾರಂನತ್ತ ಬಸ್​ನಲ್ಲಿ ಹೊರಟಿದ್ದಳು, ಆದ್ರೆ, ದಾರಿ ಮದ್ಯೆ ಚಿಕ್ಕಬಳ್ಳಾಪುರ(Chikkaballapur)ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಬಸ್ ಇಳಿದು, ನಂತರ ಚಿತ್ರವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಬಳಿ ಬಂದು, ನದಿಗೆ ಹಾರಿ, ಸಾವನ್ನಪ್ಪಿದ್ದಾಳೆ. ಬಳಿಕ ಈಕೆಯ ಶವ ತೇಲಾಡಿದಾಗ ನಿಹಾರಿಕಾ ಆತ್ಮಹತ್ಯೆ ಪ್ರಕರಣ ಬಯಲಾಗಿದೆ.

ಮನೆಗೆ ಬರುತ್ತಿರುವುದಾಗಿ ಪೋನ್ ಮಾಡಿದ್ದ ಮಗಳು ನಿಹಾರಿಕಾ, ನಾಲ್ಕು ದಿನಗಳು ಕಳೆದ್ರೂ, ಮನೆಗೆ ಬಂದಿಲ್ಲವೆಂದು ಆತಂಕಗೊಂಡ ಆಕೆಯ ಪೋಷಕರು, ಬಾಗೇಪಲ್ಲಿ ಸುತ್ತಮುತ್ತಲ ಪ್ರದೇಶಗಳ ಸಂಬಂಧಿಗಳಿಗೆ ಮಾಹಿತಿ ನೀಡಿದ್ದಾರೆ. ಅಷ್ಟೊತ್ತಿಗೆ ಬಾಗೇಪಲ್ಲಿ ಬಳಿ ಯುವತಿ ಶವ ಸಿಕ್ಕ ಮಾಹಿತಿನ್ನು ಆಧಾರಿಸಿ ಬಂದು ನೋಡಿದಾಗ ನಿಹಾರಿಕ ಮೃತ ಪಟ್ಟಿರುವುದು ಗೊತ್ತಾಗಿದೆ. ಇನ್ನು ನಿಹಾರಿಕಾ ಸಾವಿನ ಹಿಂದೆ ತ್ರೀಕೋನ ಪ್ರೇಮ ಪ್ರಕರಣ ಬಯಲಾಗಿದೆ.

ಇದನ್ನೂ ಓದಿ:ಪ್ರೀತಿ ವಿರೋಧಿಸಿ ಯುವತಿ ತಂದೆಯಿಂದ ಯುವಕನ ಮೇಲೆ ಹಲ್ಲೆ; ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ನಿಹಾರಿಕಾ ಸಾವಿನ ಹಿಂದೆ ತ್ರೀಕೋನ ಪ್ರೇಮ ಪ್ರಕರಣ

ನಿಹಾರಿಕ ಕಾಲೇಜಿನಲ್ಲಿದ್ದಾಗ ಆಂಧ್ರ ಮೂಲದ ಕ್ಲಾಸ್​ಮೆಂಟ್ ಚವ್ವ ವಂಶಿಧರ್​ನನ್ನು ಲವ್ ಮಾಡಿ, ಆತನ ಜೊತೆ ಸುತ್ತಾಡಿದ್ದಾಳೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಆಂಧ್ರದ ಅಜಯ್ ಎನ್ನುವಾತನ ಜೊತೆಗೂ ಕೂಡ ಪ್ರೀತಿ ಆಟವಾಡಿದ್ದಾಳೆ. ಒಬ್ಬಳೆ ನಿಹಾರಿಕಾ ಇಬ್ಬರನ್ನು ಪ್ರೀತಿ ಮಾಡಿ ಮೋಸ ಮಾಡಿದ ವಿಚಾರ ಇಬ್ಬರು ಹಿರೋಗಳಿಗೆ ಗೊತ್ತಾಗಿದೆ. ಬಳಿಕ ಇಬ್ಬರು ಯುವಕರು ಪ್ರತಿದಿನ ನಿಹಾರಿಕಳಿಗೆ ಬ್ಲ್ಯಾಕ್​ಮೇಲ್​ ಮಾಡಿ, ಮಾನಸಿಕ ಹಿಂಸೆ ಕಿರಕುಳ ನೀಡಿದ್ದಾರಂತೆ. ಇದ್ರಿಂದ ಮನನೊಂದ ನಿಯಾರಿಕಾ ಬಾಗೇಪಲ್ಲಿ ಬಳಿ ಆಗಮಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಒಟ್ಟಿನಲ್ಲಿ ಕಾಲೇಜಿನಲ್ಲಿ ಒಬ್ಬ, ಹೊರಗಡೆ ಇನ್ನೊಬ್ಬ ಎಂದು ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಜು ಮಸ್ತಿ ಮಾಡಲು ಹೋದ ವಿದ್ಯಾವಂತ ಯುವತಿ, ಪ್ರೀತಿಯ ಮಾಯೆಗೆ ಸಿಲುಕಿ ಕೊನೆಗೆ ಕಿರಕುಳ, ಅವಮಾನ, ಮಾನಸಿಕ ಹಿಂಸೆ ಅನುಭವಿಸಿ ಅದರಿಂದ ಪಾರಾಗಲು ಆತ್ಮಹತ್ಯೆಯ ಹಾದಿ ಹಿಡಿದಿದ್ದು, ದುರಂತ. ಇನ್ನು ಈ ಕುರಿತು ಬಾಗೇಪಲ್ಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:07 am, Thu, 29 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ