Rajasthan: ಕೋಟದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳ ಆತ್ಮಹತ್ಯೆ: ವರ್ಷದಲ್ಲಿ 14ನೇ ಘಟನೆ
ರಾಜಸ್ಥಾನದ ಕೋಟದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ವರ್ಷದಲ್ಲಿ ಇದು 14ನೇ ಘಟನೆಯಾಗಿದೆ. ರಾಜಸ್ಥಾನದ ಕೋಟಾ ಶಿಕ್ಷಣದ ದೊಡ್ಡ ಕೇಂದ್ರವಾಗಿದೆ
ರಾಜಸ್ಥಾನದ ಕೋಟದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ವರ್ಷದಲ್ಲಿ ಇದು 14ನೇ ಘಟನೆಯಾಗಿದೆ. ರಾಜಸ್ಥಾನದ ಕೋಟಾ ಶಿಕ್ಷಣದ ದೊಡ್ಡ ಕೇಂದ್ರವಾಗಿದೆ. ಐಐಟಿ ಮತ್ತು ವೈದ್ಯಕೀಯಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಮೊದಲ ಆಯ್ಕೆ. ವಿದ್ಯಾರ್ಥಿಗಳು ತಮ್ಮ ಕನಸುಗಳೊಂದಿಗೆ ಇಲ್ಲಿಗೆ ಬರುತ್ತಾರೆ ಮತ್ತು ಆ ಕನಸನ್ನು ನನಸಾಗಿಸಲು ಶ್ರಮಿಸುತ್ತಾರೆ. ಆದರೆ, ಕೋಟಾ ಕೆಲ ದಿನಗಳಿಂದ ವಿದ್ಯಾರ್ಥಿಗಳ ಆತ್ಮಹತ್ಯೆಯಿಂದ ಸುದ್ದಿಯಲ್ಲಿದೆ. ಈ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಕೋಟಾದಲ್ಲಿ ಇದುವರೆಗೆ 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಷ್ಟು ಮಾತ್ರವಲ್ಲದೆ ಮಂಗಳವಾರ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಕೋಟಕ್ಕೆ ಕಳುಹಿಸುವ ಪೋಷಕರೂ ಈ ಆತ್ಮಹತ್ಯೆಯ ಘಟನೆಗಳಿಂದ ಆತಂಕಗೊಂಡಿದ್ದಾರೆ. ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್ಗಳಿಗಾಗಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಾರೆ. ಹಾಗೆಯೇ ರಾಜಸ್ಥಾನದ ಕೋಟ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಇಬ್ಬರಲ್ಲಿ ಒಬ್ಬ ವಿದ್ಯಾರ್ಥಿ ಉತ್ತರ ಪ್ರದೇಶದವರು, ಇತ್ತೀಚೆಗೆ ಕೋಟಾಕ್ಕೆ ಸ್ಥಳಾಂತರಗೊಂಡಿದ್ದರು. ನೀಟ್ಗೆ ತಯಾರಿ ನಡೆಸುತ್ತಿದ್ದ. ಯುವಕರು ರಾಜಸ್ಥಾನದ ಕೋಟಾದ ವಿಜ್ಞಾನ ನಗರ ಪ್ರದೇಶದಲ್ಲಿ ವಿವಿಧ ವಸತಿಯಲ್ಲಿ ವಾಸಿಸುತ್ತಿದ್ದರು. ಮೊದಲ ಘಟನೆ ಸೋಮವಾರ ನಡೆದಿದ್ದು, ಮತ್ತೊಬ್ಬ ವಿದ್ಯಾರ್ಥಿ ಮಂಗಳವಾರ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
‘ಪೊಲೀಸರ ಪ್ರಕಾರ, ಮೆಹುಲ್ ವೈಷ್ಣವ್ ಎಂಬ ವಿದ್ಯಾರ್ಥಿ NEET ಗೆ ತಯಾರಿ ನಡೆಸುತ್ತಿದ್ದ. ವಿದ್ಯಾರ್ಥಿಯ ಶವದ ಬಳಿ ಯಾವುದೇ ಸೂಸೈಡ್ ನೋಟ್ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯು ಉದಯಪುರ ಜಿಲ್ಲೆಯ ಸಲೂಂಬರ್ ನಿವಾಸಿಯಾಗಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಕೋಟಾ ಬಂದಿದ್ದರು.
ವಿಜ್ಞಾನನಗರ ಪ್ರದೇಶದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಮೆಹುಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆಹುಲ್ ಜೊತೆ ರೂಮ್ ಇನ್ನೊಬ್ಬ ಪಾರ್ಟ್ನರ್ ಇದ್ದ ಆದರೆ ಸಮಯದಲ್ಲಿ ಆತ ಅಲ್ಲಿರಲಿಲ್ಲ. ರಾತ್ರಿ ಎಲ್ಲೋ ಹೊರಗೆ ಹೋಗಿದ್ದರು. ಬೆಳಗ್ಗೆ, ಮೆಹುಲ್ ಬಹಳ ಸಮಯದವರೆಗೆ ಕೊಠಡಿಯನ್ನು ತೆರೆಯದಿದ್ದಾಗ, ಇತರ ವಿದ್ಯಾರ್ಥಿಗಳು ಹೆದರಿದ್ದರು.
ಕೇರ್‌ಟೇಕರ್ ಬಾಗಿಲು ಒಡೆದು ನೋಡಿದಾಗ ಮೆಹುಲ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಪೊಲೀಸರು ಮೆಹುಲ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅದೇ ದಿನ ಕೋಟಾದಲ್ಲಿ ಮತ್ತೊಂದು ರೀತಿಯ ಘಟನೆ ನಡೆದಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಟಾದ ಕೋಚಿಂಗ್ ಸಂಸ್ಥೆಯಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಕೋಟಾಕ್ಕೆ ಬಂದಿದ್ದರು.
ಕಳೆದ ಎರಡು ತಿಂಗಳಲ್ಲಿ ಕೋಟಾದಲ್ಲಿ ಒಟ್ಟು ಒಂಬತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಮೇ ತಿಂಗಳಲ್ಲಿ ಐದು ಮತ್ತು ಜೂನ್‌ನಲ್ಲಿ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ .