AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

My India My Life Goals: ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟು ಪ್ರಕೃತಿಯ ಪೋಷಿಸುತ್ತಿರುವ ಇಕ್ಬಾಲ್ ಲೋನ್! ಭಾರತ ಪಾಕ್ ನಿಯಂತ್ರಣ ಗಡಿ ಬಳಿ ಸ್ವರ್ಗವನ್ನೇ ಸೃಷ್ಟಿಸಿದ್ದಾರೆ

Green Warrior Mohammad Iqbal Lone: ಮೊಹಮ್ಮದ್ ಇಕ್ಬಾಲ್ ಲೋನ್ LOC ಬಳಿ ಜಮ್ಮು ಮತ್ತು ಕಾಶ್ಮೀರಕ್ಕೆ ಅಂಟಿಕೊಂಡಂತೆ ಲಕ್ಷಗಟ್ಟಲೆ ಮರಗಳ ನೆಟ್ಟಿದ್ದಾರೆ. ಇದು ಅವರ ನನ್ನ ಭಾರತ ನನ್ನ ಜೀವನದ ಗುರಿಗಳು ಧ್ಯೇಯೋದ್ದೇಶ

My India My Life Goals: ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟು ಪ್ರಕೃತಿಯ ಪೋಷಿಸುತ್ತಿರುವ ಇಕ್ಬಾಲ್ ಲೋನ್! ಭಾರತ ಪಾಕ್ ನಿಯಂತ್ರಣ ಗಡಿ ಬಳಿ ಸ್ವರ್ಗವನ್ನೇ ಸೃಷ್ಟಿಸಿದ್ದಾರೆ
ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟ ಪ್ರಕೃತಿಯ ಪೋಷಿಸುತ್ತಿರುವ ಇಕ್ಬಾಲ್ ಲೋನ್!
ಸಾಧು ಶ್ರೀನಾಥ್​
| Edited By: |

Updated on:Jun 30, 2023 | 5:58 PM

Share

Inspirational Story: ಇದು ಮೊಹಮ್ಮದ್ ಇಕ್ಬಾಲ್ ಲೋನ್ ಅವರ ಸ್ಪೂರ್ತಿದಾಯಕ ಕಥೆ – ಪರಿಸರ ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ.. ಇಲ್ಲವಾದರೆ ಮುಂದಿನ ಪೀಳಿಗೆಗೆ ಇಂದಿನ ಪೀಳಿಗೆಯ ಜನ ಪ್ರಶ್ನಾರ್ಹವಾಗುತ್ತಾರೆ.. ಹಾಗಾಗಿಯೇ ಕೆಲವರು ಪರಿಸರ ರಕ್ಷಣೆಗೆ ಹರಸಾಹಸ ಪಡುತ್ತಾ ಎಲ್ಲರಿಗೂ ಆದರ್ಶವಾಗುತ್ತಿದ್ದಾರೆ. ಅವರು ಪರಿಸರಕ್ಕಾಗಿ ಅಸಂಖ್ಯಾತ ಪ್ರಯತ್ನಗಳನ್ನು ಮಾಡುತ್ತಾರೆ. ಅವರ ಈ ಮಹತ್ಕಾರ್ಯಕ್ಕಾಗಿ ಅನೇಕ ಪ್ರಶಸ್ತಿಗಳು ಸಹ ಅಂತಹವರನ್ನು ಹುಡುಕಿಕೊಂಡು ಹೋಗುತ್ತವೆ. ಆದರೆ 50ನೇ ಪರಿಸರ ದಿನದ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವದ (Azadi Ka Amrit Mahotsav) ಅಂಗವಾಗಿ ಭಾರತ ಸರ್ಕಾರವು ‘ನನ್ನ ಭಾರತ – ನನ್ನ ಜೀವನದ ಗುರಿಗಳು’, ಪರಿಸರ ಆಂದೋಲನಕ್ಕಾಗಿ ಜೀವನಶೈಲಿ – ಜೀವನ ಎಂಬ ಘೋಷಣೆಯಡಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಗ್ರೀನ್ ವಾರಿಯರ್ಸ್ ಎನಿಸಿಕೊಂಡವರ (Green Warrior Mohammad Iqbal Lone) ಜೀವನ ಕಥೆಗಳನ್ನು ಮತ್ತು ಅವರ ಪ್ರಯತ್ನಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಈ ಆಂದೋಲನದಲ್ಲಿ ಟಿವಿ9 ಸಹ (TV9 Network) ಭಾಗವಹಿಸುತ್ತಿದೆ.

ಆದರೆ, ಪರಿಸರ ಸಂರಕ್ಷಣೆಯ ಅಂಗವಾಗಿ ಗಿಡಗಳನ್ನು ನೆಡುವುದರೊಂದಿಗೆ ಎಲ್ಲರಿಗೂ ಮಾದರಿಯಾಗಿರುವ ಜಮ್ಮು-ಕಾಶ್ಮೀರದ ಇಕ್ಬಾಲ್ ಲೋನ್ ಅವರು ಜೀವ ವೈವಿಧ್ಯ ರಕ್ಷಣೆಗೆ ನಿರಂತರ ಶ್ರಮಿಸುತ್ತಿದ್ದಾರೆ. ಪರಿಸರ ಹೋರಾಟಗಾರ ಮೊಹಮ್ಮದ್ ಇಕ್ಬಾಲ್ ಲೋನ್ ಕಾಶ್ಮೀರದಲ್ಲಿ ಪರಿಸರ ಸಂರಕ್ಷಣೆಗೆ ನಿರಂತರ ಶ್ರಮಿಸುತ್ತಿದ್ದಾರೆ.

ಇದರ ಭಾಗವಾಗಿ ಭಾರತೀಯ ಸೇನಾ ವಲಯಕ್ಕೆ ಹಲವು ಬಗೆಯ ಗಿಡಗಳನ್ನು ನೀಡಲಾಗುತ್ತದೆ. ಅಲ್ಲದೆ, ಇಕ್ಬಾಲ್ ಲೋನ್​ ಅವರು ಭಾರತ-ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿಯೂ ಸಸಿಗಳನ್ನು ನೆಡುವ ವಿಶೇಷತೆಯಾಗಿದೆ. ಅದಕ್ಕೇ ಇಕ್ಬಾಲ್ ಲೋನ್​ ಅವರು ಸ್ವರ್ಗ ಎಲ್ಲೋ ಅಲ್ಲ.. ಭೂಮಿಯ ಮೇಲಿದೆ ಅಂತಾ ಹೇಳೋದು.

“ಸ್ವರ್ಗವೆಂದರೆ.. ಎಲ್ಲೋ ಅಲ್ಲ.. ಇದು ಭೂಮಿಯ ಮೇಲೆ ಇದೆ ಎಂದು ನಾನು ನಂಬುತ್ತೇನೆ. ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುತ್ತಿದ್ದರೆ.. ಮುಂದಿನ ದಿನಗಳಲ್ಲಿ ಸ್ವರ್ಗವು ಯಾರಿಗೂ ಕಾಣಿಸುವುದಿಲ್ಲ. ಹಲೋ.. ನನ್ನ ಹೆಸರು ಇಕ್ಬಾಲ್ ಲೋನ್. ಕಾಶ್ಮೀರದ ಉರಿ ಪ್ರದೇಶದಲ್ಲಿ ನಾನು ವಾಸಿಸುತ್ತಿದ್ದೇನೆ.

ಬೆಂಕಿಯಿಂದಾಗಿ ಇಲ್ಲಿ.. ಶೇ. 40-50 ರಷ್ಟು ಅರಣ್ಯ ಕಣ್ಮರೆಯಾಗಿದೆ. ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಜಲ್​ ಜಂಗಲ್ ಜಮೀನ್.. ಇಲ್ಲದಿದ್ದರೆ ಜೀವದ ಉಳಿವು ಅಸಾಧ್ಯ” ಎಂದು ಇಕ್ಬಾಲ್ ಲೋನ್ ಅಭಿಪ್ರಾಯಪಡುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Wed, 28 June 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!