ಪಿಡಿಒ, ಸದಸ್ಯನಿಂದ ಕಿರುಕುಳ ಆರೋಪ; ಮನನೊಂದು ಗ್ರಾಮ ಪಂಚಾಯತಿ ಕಚೇರಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರಿಪುರ ಗ್ರಾಮ ಪಂಚಾಯತಿ ಪಿಡಿಒ ಶಿವಾನಂದ್ ಮತ್ತುವ ಮತ್ತು ಸದಸ್ಯ ಶ್ರೀನಿವಾಸ್ ಎಂಬುವವರಿಂದ ಕಿರುಕುಳ ಆರೋಪದ ಹಿನ್ನಲೆ ಮನನೊಂದು ತಾಯಿ ಮತ್ತು ಮಗ ಗ್ರಾಮ ಪಂಚಾಯತಿ ಕಛೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ(Doddaballapura) ತಾಲೂಕಿನ ಹಾದ್ರಿಪುರ ಗ್ರಾಮ ಪಂಚಾಯತಿ ಪಿಡಿಒ ಶಿವಾನಂದ್ ಮತ್ತುವ ಮತ್ತು ಸದಸ್ಯ ಶ್ರೀನಿವಾಸ್ ಎಂಬುವವರಿಂದ ಕಿರುಕುಳ ಆರೋಪದ ಹಿನ್ನಲೆ ಮನನೊಂದು ತಾಯಿ ಮತ್ತು ಮಗ ಗ್ರಾಮ ಪಂಚಾಯತಿ ಕಛೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹೌದು ರಸ್ತೆಯಲ್ಲಿ ಗುಂಡಿ ಅಗೆದಿದ್ದಕ್ಕೆ ವಿನಾಕಾರಣ ಕಿರುಕುಳ ನೀಡುತ್ತಿದ್ದು, ತಾಯಿ ಮತ್ತು ಮಗ ಸೇರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳಿಯರು ಬಂದು, ತಾಯಿ ಮಗನನ್ನ ರಕ್ಷಿಸಿದ್ದಾರೆ. ರಾಮೇಶ್ವರ ಗ್ರಾಮದ ತಾಯಿ ನಾಗಮಣಿ ಮತ್ತು ಮಗ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದವರು.
ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರು ಸಾವು
ಶಿವಮೊಗ್ಗ: ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ಶಾಕ್ನಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಊರುಗಡೂರಿನ ಅಂಬೇಡ್ಕರ್ ಭವನದ ಬಳಿ ನಡೆದಿದೆ. ಭದ್ರಾವತಿಯ ಸೋಮಶೇಖರ, ಚಲ್ಲನ ಸೋಮಶೇಖರ ಮೃತ ರ್ದುದೈವಿಗಳು. ಗಂಗಾಧರ ಎಂಬುವರಿಗೆ ಸೇರಿದ್ದ ವಾಣಿಜ್ಯ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು, ತಗಡಿನ ಶೀಟ್ಗಳನ್ನು ಕೆಳಗಿನಿಂದ ಮೇಲೆತ್ತಿಕೊಳ್ಳುವಾಗ 11 ಕೆವಿ ವಿದ್ಯುತ್ ಲೈನ್ಗೆ ಶೀಟ್ ತಗುಲಿ ಕರೆಂಟ್ ಶಾಕ್ ಹೊಡೆದು ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:Uttar Kannada News: ಪೊಲೀಸ್ ಠಾಣೆಯಲ್ಲೇ ವಿಷ ಕುಡಿದು ಆರೋಪಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ
ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರ ಮಿಂಚಿನ ದಾಳಿ; 1 ಲಕ್ಷ ರೂ ನಗದು ಹಣ, ಮೊಬೈಲ್ ವಶಕ್ಕೆ
ಕಲಬುರಗಿ: ನಗರದಲ್ಲಿ ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರ ಮಿಂಚಿನ ದಾಳಿ ನಡೆಸಿದ್ದು, ಕಾರ್ಪೊರೇಟರ್ ಸಚೀನ್ ಕಡಗಂಚಿ ಸೇರಿದಂತೆ ಏಳು ಜನರ ವಿರುದ್ಧ ದೂರು ದಾಖಲಾಗಿದೆ. ಇವರು ಕಳೆದ ರಾತ್ರಿ ಕಲಬುರಗಿ ನಗರದ ಶೆಟ್ಟಿ ಕಾಂಪ್ಲೆಕ್ಸ್ ಬಳಿಯ ಶೆಡ್‌ವೊಂದರಲ್ಲಿ ಇಸ್ಪಿಟ್ ಆಡುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳು ಶರಣಾಗಿದ್ದಾರೆ. ಇನ್ನು ಬಂಧಿತರಿಂದ 1 ಲಕ್ಷ ರೂ ನಗದು ಹಣ, ಮೊಬೈಲ್ ಸೇರಿದಂತೆ ಅನೇಕ ವಸ್ತುಗಳ ಜಪ್ತಿ ಮಾಡಲಾಗಿದ್ದು, ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ