ಅಪರ್ಣಾ ಶ್ರದ್ಧಾಂಜಲಿ ಸಭೆ; ಕಣ್ಣೀರು ಹಾಕಿದ ಪತಿ ಹಾಗೂ ಸೆಲೆಬ್ರಿಟಿಗಳು
ಖ್ಯಾತ ನಿರೂಪಕಿ, ನಟಿ ಅಪರ್ಣಾರ ಸಾವು ಹಲವರಿಗೆ ಆಘಾತ ತಂದಿದೆ. ಅದಕ್ಕೆ ಮುಖ್ಯ ಕಾರಣವೆಂದರೆ ಅಪರ್ಣಾ, ತಾವು ಅನಾರೋಗ್ಯದಿಂದ ಬಳಲುತ್ತಿರುವ ವಿಷಯವನ್ನು ಯಾರಿಗೂ ಹೇಳಿಕೊಂಡಿರಲಿಲ್ಲ. ಕುಟುಂಬದವರಿಗೆ ಬಿಟ್ಟರೆ ಅಪರ್ಣಾರಿಗೆ ಕ್ಯಾನ್ಸರ್ ಆಗಿರುವ ವಿಷಯ ಹೆಚ್ಚಿನ ಜನರಿಗೆ ಗೊತ್ತೇ ಇರಲಿಲ್ಲ. ಈಗ ಅವರ ಶ್ರದ್ಧಾಂಜಲಿ ಸಭೆ ನಡೆದಿದೆ.
ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ಕಳೆದ ತಿಂಗಳು ನಿಧನ ಹೊಂದಿದರು. ಅವರು ಇಲ್ಲ ಎಂಬ ನೋವು ಎಂದಿಗೂ ಮರೆ ಆಗುವಂಥದ್ದಲ್ಲ. ಈ ನೋವಿನಿಂದ ಅವರ ಕುಟುಂಬ ಇನ್ನೂ ಹೊರಗೆ ಬಂದಿಲ್ಲ. ಇತ್ತೀಚೆಗೆ ಅಪರ್ಣಾ ಅವರಿಗೋಸ್ಕರ ಶ್ರದ್ಧಾಂಜಲಿ ಸಭೆ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಚಿತ್ರರಂಗ ಹಾಗೂ ಕಿರುಯೆರೆಯ ಅನೇಕರು ಆಗಮಿಸಿದ್ದರು. ಎಲ್ಲರ ಕಣ್ಣಲ್ಲೂ ನೀರಿತ್ತು. ‘ಪ್ರತಿ ಕಾರ್ಯಕ್ರಮ ಮುಗಿಸಿ ಬಂದು ಕಾರು ಏರಿದರೆ ಅಲ್ಲಿ ಏನೇನು ಆಯಿತು ಎಂಬುದನ್ನು ಚಾಚೂ ತಪ್ಪದೆ ಅಪರ್ಣಾ ನನಗೆ ಒಪ್ಪಿಸುತ್ತಿದ್ದರು’ ಎಂದು ಅವರ ಪತಿ ನಾಗರಾಜ್ ವಸ್ತಾರೆ ಹೇಳಿಕೊಂಡಿದ್ದಾರೆ. ಅವರನ್ನು ಸಂತೈಸುವ ಕೆಲಸ ಎಲ್ಲರಿಂದಲೂ ಆಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.